ಕಾಮೇಗೌಡರ ಪರಿಸರ ಕಾಳಜಿಗೆ ಜೀವಿತಾವಧಿವರೆಗೆ ಉಚಿತ ಬಸ್ ಪಾಸ್ ನೀಡಿದ ಕೆಎಸ್ಆರ್ಟಿಸಿ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರು 82ರ ಇಳಿ ವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ಸಣ್ಣ  ಕೆರೆಗಳನ್ನು ನಿರ್ಮಿಸುವ ಅವರ ನಡೆ ಅನುಕರಣೀಯ ಮತ್ತು ಅಭಿನಂದನಾರ್ಹವಾದುದು.

Last Updated : Jul 2, 2020, 06:21 PM IST
ಕಾಮೇಗೌಡರ ಪರಿಸರ ಕಾಳಜಿಗೆ ಜೀವಿತಾವಧಿವರೆಗೆ ಉಚಿತ ಬಸ್ ಪಾಸ್ ನೀಡಿದ ಕೆಎಸ್ಆರ್ಟಿಸಿ title=

ಬೆಂಗಳೂರು: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರು 82ರ ಇಳಿ ವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ಸಣ್ಣ  ಕೆರೆಗಳನ್ನು ನಿರ್ಮಿಸುವ ಅವರ ನಡೆ ಅನುಕರಣೀಯ ಮತ್ತು ಅಭಿನಂದನಾರ್ಹವಾದುದು.

ಕುಂದಿನಿ ಬೆಟ್ಟದಲ್ಲಿ ಕಾಮೇಗೌಡರು ನಿರ್ಮಿಸಿರುವ 14 ಕೆರೆಗಳೇ ಅವರ ನಿಸ್ವಾರ್ಥ ಪರಿಸರ ಕಾಳಜಿಯನ್ನು ಸಾರುತ್ತವೆ. 

ಈಗ ಅವರ ಸೇವೆಯನ್ನು ಮೆಚ್ಚಿ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ವೇಗದೂತ ರಾಜಹಂಸ,ವೋಲ್ವೋ ಸಹಿತ ಎಲ್ಲಾ ಬಗೆಯ ಬಸ್ಸುಗಳಲ್ಲಿ ಪ್ರಯಾಣಿಸಲು ಜೀವಿತಾವಧಿವರಗೆ ಉಚಿತ್ ಬಸ್ ಪಾಸ್ ನ್ನು ಕಲ್ಪಿಸಿದೆ.

ಕಾಮೇಗೌಡರ ಪರಿಸರ ಸೇವೆಯ ಬಗ್ಗೆ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್ ' ಕಾರ್ಯಕ್ರಮದಲ್ಲಿ ಇತ್ತೀಚಿಗೆ  ಉಲ್ಲೇಖಿಸಿ ಶ್ಲಾಘಿಸಿದ್ದರು.

Trending News