ಮೈಸೂರಿನ ಜೆ.ಕೆ. ಮೈದಾನದಲ್ಲಿ ಪಟಾಕಿ ಬಿಟ್ಟು ದೀಪಾವಳಿ ಆಚರಿಸಿ ಆಂದೋಲನ

ಶಾಸಕ ಎಂ.ಕೆ. ಸೋಮಶೇಖರ್ ಜೊತೆ ಪಟಾಕಿ ಮಾರಾಟಗಾರರ ಕಿರಿಕ್.

Last Updated : Oct 18, 2017, 02:52 PM IST
ಮೈಸೂರಿನ ಜೆ.ಕೆ. ಮೈದಾನದಲ್ಲಿ ಪಟಾಕಿ ಬಿಟ್ಟು ದೀಪಾವಳಿ ಆಚರಿಸಿ ಆಂದೋಲನ  title=

ಮೈಸೂರು: ಕಾಂಗ್ರೇಸ್ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಮೈಸೂರಿನ ಜೆ.ಕೆ. ಮೈದಾನದಲ್ಲಿ 'ಪಟಾಕಿ ಬಿಟ್ಟು ದೀಪಾವಳಿ ಆಚರಿಸಿ ಆಂದೋಲನ' ಕೈಗೊಳ್ಳಲಾಗಿತ್ತು. ಈ ವೇಳೆ ಶಾಸಕ ಸೋಮಶೇಖರ್ ಮತ್ತು ಪಟಾಕಿ ಮಾರಾಟಗಾರರ ನಡುವೆ ಘರ್ಷಣೆ ನಡೆದಿದೆ.

ಪಟಾಕಿ ಬೇಕು, ಪಟಾಕಿ ಬೇಡ-ಪರಾ,ವಿರೋಧದ ನಡುವೆ ವಾಗ್ದಾಳಿ: 

ಶಾಸಕ ಸೋಮಶೇಖರ್ ಮೈಸೂರಿನಲ್ಲಿ "ಪರಿಸರ ಉಳಿಸಿ- ಪಟಾಕಿ ತ್ಯಜಿಸಿ ಅಭಿಯಾನ" ದಲ್ಲಿ ಪಟಾಕಿ ಬಿಟ್ಟು ದೀಪಾವಳಿ ಆಚರಿಸಿ ಆಂದೋಲನದ ಮೂಲಕ ಜನರಲ್ಲಿ ಪಟಾಕಿಯನ್ನು ತ್ಯಜಿಸುವ ಜಾಗೃತಿಯನ್ನು ಉಂಟುಮಾದುತ್ತಿದ್ದರು. ಆ ಸಮಯದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ನೀವು ಮಮಗೆ ಅನ್ಯಾಯ ಮಾಡುತ್ತಿದ್ದಿರಿ. ಅನುಮತಿ ನೀಡಿ ಪಟಾಕಿ ಬೇಡ ಎಂದರೆ ಹೇಗೆ ಎಂದು ಎಂ.ಕೆ. ಸೋಮಶೇಖರ್ ಜೊತೆ ಪಟಾಕಿ ಮಾರಾಟಗಾರರು ಕಿರಿಕ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಶಾಸಕರನ್ನು ತಳ್ಳಾಡಿರುವ ಘಟನೆಯೂ ನಡೆದಿದೆ.

Trending News