ಮಂಡ್ಯ ಲೋಕಸಮರ: ಮೈತ್ರಿಗೆ ಟಕ್ಕರ್ ಕೊಡಲು ರಾಹುಲ್ ಗಾಂಧಿ ಎಂಟ್ರಿ; ತ್ರಿಮೂರ್ತಿ ಅಸ್ತ್ರ!

ಕೈ ನಾಯಕರ ಪ್ರವಾಸದ ಬಗ್ಗೆ ಶಾಸಕ ರವಿಕುಮಾರ್ ಮಾಹಿತಿ ನೀಡಿದ್ದು ಕಾಂಗ್ರೆಸ್​ನಿಂದ ತ್ರಿಮೂರ್ತಿ ಅಸ್ತ್ರ ಪ್ರಯೋಗ ಮಾಡಲಿದ್ದಾರೆ. ರಾಹುಲ್ ಗಾಂಧಿ  ಜೊತೆ ಸಿಎಂ ಸಿದ್ದರಾಮಯ್ಯ, ಡಿಕೆ. ಶಿವಕುಮಾರ್ ಸಹ  ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು. 

Written by - Prashobh Devanahalli | Edited by - Yashaswini V | Last Updated : Apr 10, 2024, 04:19 PM IST
  • ಜೆಡಿಎಸ್​ಗೆ ಟಕ್ಕರ್​ ನೀಡಲು ಕೈ ನಾಯಕರ ಮಾಸ್ಟರ್ ಪ್ಲಾನ್​ ಮಾಡಿದೆ.
  • ಈ ಪ್ರಕಾರ ಸಕ್ಕರೆ ನಾಡಿಗೆ ರಾಹುಲ್ ಗಾಂಧಿ ಅವರನ್ನ ಕರೆಸಿ ಪ್ರಚಾರ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.
  • ಇದರ ಜೊತೆ ಸಿದ್ದರಾಮಯ್ಯ, ಡಿಕೆಶಿಯಿಂದಲೂ ಮಂಡ್ಯ ಲೋಕಸಭೆ ಚುನಾವಣೆ ಪ್ರಚಾರ ಮಾಡಲಿದ್ದಾರೆ.
ಮಂಡ್ಯ ಲೋಕಸಮರ: ಮೈತ್ರಿಗೆ ಟಕ್ಕರ್ ಕೊಡಲು ರಾಹುಲ್ ಗಾಂಧಿ ಎಂಟ್ರಿ; ತ್ರಿಮೂರ್ತಿ ಅಸ್ತ್ರ! title=

ಬೆಂಗಳೂರು : ಮಂಡ್ಯ ಲೋಕದಲ್ಲಿ ಮೈತ್ರಿ​ ಮಣಿಸಲು ಕಾಂಗ್ರೆಸ್​ ರಣತಂತ್ರ ಮಾಡಿದ್ದು, ಕೈ ಅಭ್ಯರ್ಥಿ ಪರ ಪ್ರಚಾರ ನಡೆಸಲು ರಾಹುಲ್ ಗಾಂಧಿ ಬರಲಿದ್ದಾರೆ. ಈ ಮೂಲಕ ಕಾಂಗ್ರೆಸ್ ತ್ರಿಮೂರ್ತಿ ಅಸ್ತ್ರ ಪ್ರಯೋಗ ಮಾಡಲಿದ್ದಾರೆ.

ಜೆಡಿಎಸ್​ಗೆ ಟಕ್ಕರ್​ ನೀಡಲು ಕೈ ನಾಯಕರ ಮಾಸ್ಟರ್ ಪ್ಲಾನ್​ ಮಾಡಿದೆ. ಈ ಪ್ರಕಾರ ಸಕ್ಕರೆ ನಾಡಿಗೆ ರಾಹುಲ್ ಗಾಂಧಿ (Rahul Gandhi) ಅವರನ್ನ ಕರೆಸಿ ಪ್ರಚಾರ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದರ ಜೊತೆ ಸಿದ್ದರಾಮಯ್ಯ (Siddaramaiah), ಡಿಕೆಶಿಯಿಂದಲೂ ಮಂಡ್ಯ ಲೋಕಸಭೆ ಚುನಾವಣೆ (LokSabha Election) ಪ್ರಚಾರ ಮಾಡಲಿದ್ದಾರೆ. ಕೈ ನಾಯಕರ ಪ್ರವಾಸದ ಬಗ್ಗೆ ಶಾಸಕ ರವಿಕುಮಾರ್ ಮಾಹಿತಿ ನೀಡಿದ್ದು ಕಾಂಗ್ರೆಸ್​ನಿಂದ ತ್ರಿಮೂರ್ತಿ ಅಸ್ತ್ರ ಪ್ರಯೋಗ ಮಾಡಲಿದ್ದಾರೆ. ರಾಹುಲ್ ಗಾಂಧಿ  ಜೊತೆ ಸಿಎಂ ಸಿದ್ದರಾಮಯ್ಯ, ಡಿಕೆ. ಶಿವಕುಮಾರ್ (DK Shivakumar) ಸಹ  ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ- ಮುನಿಯಪ್ಪ ಜಪದಲ್ಲಿ ಕೈ ಅಭ್ಯರ್ಥಿ ಗೌತಮ್ : ಗೊಂದಲದ ಗೂಡಾದ ಕೋಲಾರ ಲೋಕಸಭಾ ಕ್ಷೇತ್ರ

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ‌ವಿರುದ್ಧ ಸಾಲು ಸಾಲು ಪ್ರಚಾರ ನಡೆಸಲು ಸಿದ್ಧತೆ ನಡೆಸಲಾಗುತ್ತಿದ್ದು, ಸ್ಟಾರ್ ಚಂದ್ರು ಪರವಾಗಿ ಪ್ರಚಾರಕ್ಕೆ ‌ಧುಮುಕಲಿರೋ ಮೋಹಕ ತಾರೆ ಹಾಗೂ ಮಾಜಿ ಸಂಸದೆ ರಮ್ಯಾ (Ramya). ಏ.17 ಅಥವಾ‌ 20ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶಕ್ಕೆ ಪ್ಲಾನ್ ಆಗುತ್ತಿದೆ.

ಇದನ್ನೂ ಓದಿ- Loksabha Elections: ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ: ಬಸವರಾಜ ಬೊಮ್ಮಾಯಿ

ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯರಿಂದ (CM Siddaramaiah) ಒಂದು ದಿನ ಮತಬೇಟೆ ನಡೆಸಲಿದ್ದಾರೆ. ಕೆ.ಆರ್. ನಗರ, ಕೆ.ಆರ್.ಪೇಟೆಯಲ್ಲಿ ಮತಯಾಚನೆ ಮಾಡಲಿರೋ ಸಿಎಂ ಬಳಿಕ  ಮಂಡ್ಯದಲ್ಲಿ ಪ್ರವಾಸ ಕೈಗೊಳ್ಳಲಿರುವ ಡಿಸಿಎಂ ಡಿಕೆಶಿ. ಈ ಮೂಲಕ ಮಂಡ್ಯ ಮತ ಕ್ಷೇತ್ರ ಗಟ್ಟಿಯಾಗಿ ಕಾಂಗ್ರೆಸ್ ತೆಕ್ಕೆಯಲ್ಲಿ ಇರಬೇಕು ಎಂದು ಕಾಂಗ್ರೆಸ್ ಪೂರ್ಣ ಪ್ರಯತ್ನ ಪಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News