ಬೆಂಗಳೂರು: ದೇಶದ ಪ್ರಮುಖ ಕನ್ನಡಕ ಸರಣಿ ಲೆನ್ಸ್‌ಕಾರ್ಟ್ ಬೆಂಗಳೂರಿನಲ್ಲಿ ತನ್ನ ಮೆಗಾ ಫ್ಯಾಕ್ಟರಿಯನ್ನು ನಿರ್ಮಿಸಲು ಯೋಜಿಸುತ್ತಿದೆ.ಈ ವಿಚಾರವನ್ನು ಲೆನ್ಸ್‌ಕಾರ್ಟ್ ಸಹ-ಸಂಸ್ಥಾಪಕ ಪೆಯೂಶ್ ಬನ್ಸಾಲ್ ಈ ಮಾಹಿತಿಯನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.ಇದಕ್ಕಾಗಿ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 60 ಕಿಮೀ ಪ್ರದೇಶದಲ್ಲಿ 25 ಎಕರೆ ಜಮೀನು ಬೇಕು ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
"ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 60 ಕಿಮೀ ವ್ಯಾಪ್ತಿಯೊಳಗೆ 25 ಎಕರೆ ಭೂಮಿಯನ್ನು ಮೆಗಾ ಫ್ಯಾಕ್ಟರಿ ನಿರ್ಮಾಣಕ್ಕಾಗಿ ಲೆನ್ಸ್‌ಕಾರ್ಟ್ ಹುಡುಕುತ್ತಿದೆ. ಯಾವುದೇ ಕಂಪನಿಯು ಬೆಂಗಳೂರು ವಿಮಾನ ನಿಲ್ದಾಣದ ಬಳಿ ಕಾರ್ಖಾನೆಯ ಭೂಮಿಯನ್ನು ಮಾರಾಟ ಮಾಡಲು ಬಯಸಿದರೆ ದಯವಿಟ್ಟು ಇ-ಮೇಲ್ ಮಾಡಿ megafactory@lenskart.in ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
Karnataka is the place to be! @peyushbansal @Lenskart_com Industries Department is here to support you, and facilitate all your needs.
Concerned officials will reach out, immediately. pic.twitter.com/9KTikkx8GJ
— M B Patil (@MBPatil) April 9, 2024
ಇದಕ್ಕೆ ತಕ್ಷಣ ಸ್ಪಂಧಿಸಿರುವ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಈ ಯೋಜನೆಯನ್ನು ಸ್ವಾಗತಿಸಿದ್ದಲ್ಲದೆ ಈ ವಿಚಾರವಾಗಿ ಇಲಾಖೆಯ ಅಧಿಕಾರಿಗಳು ಸಂಪರ್ಕಿಸಲಿದ್ದಾರೆ ಎಂದು ತಮ್ಮ ಎಕ್ಷ್ ಖಾತೆಯ ಮೂಲಕ ಪಿಯುಶ್ ಬನ್ಸಾಲ್ ಅವರನ್ನು ಟ್ಯಾಗ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ, ಬೆಂಗಳೂರಿನ ಉತ್ತರದಲ್ಲಿರುವ ದೇವನಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣದ ಹತ್ತಿರ) ರಾಜ್ಯದ ಅನೇಕ ಪ್ರಮುಖ ಹೂಡಿಕೆಗಳ ಹೊಸ ಕೇಂದ್ರವಾಗಿದೆ. ಕಳೆದ ವರ್ಷ ಆಪಲ್ ಐಫೋನ್ ತಯಾರಕ ಫಾಕ್ಸ್‌ಕಾನ್ ಕರ್ನಾಟಕದಲ್ಲಿ 1.67 ಬಿಲಿಯನ್ ಡಾಲರ್ (ಸುಮಾರು 14,000 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಹೇಳಿತ್ತು.
ಆಗಸ್ಟ್ 2023 ರಲ್ಲಿ, ಫಾಕ್ಸ್‌ಕಾನ್ ರಾಜ್ಯದ ಎರಡು ಘಟಕ ಕಾರ್ಖಾನೆಗಳಲ್ಲಿ $600 ಮಿಲಿಯನ್ ಹೂಡಿಕೆ ಮಾಡಲು ಯೋಜಿಸಿದೆ ಎಂದು ಕರ್ನಾಟಕ ಸರ್ಕಾರವು ಘೋಷಿಸಿತು. ಮಾಧ್ಯಮ ವರದಿಗಳ ಪ್ರಕಾರ, ದೇವನಹಳ್ಳಿಯಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಈ ಹೆಚ್ಚುವರಿ ಹೂಡಿಕೆ ಮಾಡಲಾಗುತ್ತಿದೆ, ಅಲ್ಲಿ ಫಾಕ್ಸ್‌ಕಾನ್ ಈಗಾಗಲೇ ಹೂಡಿಕೆಗಾಗಿ 300 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.