ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌ ಕೊಟ್ಟ ಲೋಕಾಯುಕ್ತ..ಬೆಂಗಳೂರು ಸೇರಿ 40 ಕಡೆ ದಾಳಿ

Lokayukta Raid: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹತ್ತಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳ ವಿರುದ್ಧ 40 ಕಡೆ ಲೋಕಾಯುಕ್ತ ದಾಳಿ ನಡೆಸಿದೆ. 

Written by - Yashaswini V | Last Updated : Jan 31, 2024, 12:06 PM IST
  • ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕ ಸಮರ
  • ಬೆಂಗಳೂರು, ಮೈಸೂರು, ವಿಜಯನಗರ ಸೇರಿ 40 ಕಡೆ ಮೆಗಾ ರೇಡ್‌
  • ಬೆಳ್ಳಂಬೆಳಗ್ಗೆ ಗಾಡ ನಿದ್ರೆಯಲ್ಲಿ ಭ್ರಷ್ಟ ಕುಳಗಳಿಗೆ ಶಾಕ್‌
ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌ ಕೊಟ್ಟ ಲೋಕಾಯುಕ್ತ..ಬೆಂಗಳೂರು ಸೇರಿ 40 ಕಡೆ ದಾಳಿ  title=

Lokayukta Raid In Karnataka: ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಹೊಂದಿರುವ ಆರೋಪದ  ಹಿನ್ನಲೆಯಲ್ಲಿ ಹತ್ತಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳಿಗೆ ಕರ್ನಾಟಕ ಲೋಕಾಯಕ್ತ ಬೆಳ್ಳಂಬೆಳಗ್ಗೆ ಶಾಕ್‌  ಕೊಟ್ಟಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹತ್ತಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳ ವಿರುದ್ಧ 40 ಕಡೆ ಲೋಕಾಯುಕ್ತ ದಾಳಿ ನಡೆಸಿದೆ. ತುಮಕೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ಕೊಪ್ಪಳ, ಚಾಮರಾಜನಗರ, ಮೈಸೂರು, ಬಳ್ಳಾರಿ, ವಿಜಯನಗರ, ಮಂಗಳೂರಿನಲ್ಲಿಯೂ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆಗಳಿಗೆ ಲೋಕಾಯುಕ್ತ ಎಂಟ್ರಿ ಕೊಟ್ಟಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.

ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ:- 
* ಬಿ.ರಬಿ, ಅಸಿಸ್ಟೆಂಟ್ ಪ್ರೊಫೆಸರ್ ಬಳ್ಳಾರಿ.
* ಹನುಮಂತರಾಯಪ್ಪ, ಕೆಆರ್ ಐಡಿಎಲ್ ತುಮಕೂರು. 
* ಹರ್ಷ, ಲೋಕೋಪಯೋಗಿ ಇಲಾಖೆ  ಮಂಡ್ಯ.
* ಪಿ.ರವಿಕುಮಾರ್, ರೂರಲ್ ಡೆವಲಪ್ಮೆಂಟ್ ಇಲಾಖೆ ಚಾಮರಾಜನಗರ.
* ಜಗನ್ನಾಥ್ ಜಿ, ಆಹಾರ ನಿರೀಕ್ಷಕರು, ಹಾಸನ.
* ಶಾಂತಕುಮಾರ್ ಹೆಚ್ ಎಮ್, ಮೆಸ್ಕಾಂ ಮಂಗಳೂರು
* ರೇಣುಕಮ್ಮ, ಅರಣ್ಯ ಇಲಾಖೆ ಕೊಪ್ಪಳ.
* ಯಗ್ನೇಂದ್ರ, ಮೂಡ ಮೈಸೂರು.
* ಭಾಸ್ಕರ್, ವಿದ್ಯುತ್ ಇಲಾಖೆ ವಿಜಯನಗರ.
* ನೇತ್ರಾವತಿ, ಸಿಟಿಓ ಚಿಕ್ಕಮಗಳೂರು.

ಇದನ್ನೂ ಓದಿ- ಸ್ಥಳ ನಿರೀಕ್ಷಣೆಯಲ್ಲಿದ್ದ ಎಂಜಿನಿಯರ್ ಮನೆ ಮೇಲೆ ಲೋಕಾ ದಾಳಿ

ಬಳ್ಳಾರಿಯಲ್ಲಿ ಮೆಗಾ ರೈಡ್: 
ಸಂಡೂರಿನ ಕೃಷ್ಣದೇವರಾಯ ವಿವಿಯ ಅಧಿಕಾರಿಯಾದ ಡಾ.ರವಿ ಅವರ ಮನೆ, ಕಚೇರಿಗಳ ಮೇಲೆ ಲೋಕಾಯಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಡೂರಿನ ಪಿಜಿ ಸೆಂಟರ್ ಕಚೇರಿ, ಗಾಂಧಿನಗರದ ಮನೆ, ದಾವಣಗೆರೆಯಲ್ಲಿನ ಮನೆಯ ಮೇಲೆ ಬಳ್ಳಾರಿಯ ಲೋಕಯುಕ್ತ ಎಸ್ಪಿ ಸಿದ್ದರಾಜುರವರ ನೇತೃತ್ವದಲ್ಲಿ ದಾಳಿ ನಡೆಯುತ್ತಿದೆ.

ತುಮಕೂರಿನ ಇಂಜಿನಿಯರ್ ಅಧಿಕಾರಿ ಹನುಮಂತರಾಯಪ್ಪ:  
ಕೆಆರ್​ಡಿಎಲ್ ಇಂಜಿನಿಯರ್ ಹನುಮಂತರಾಯಪ್ಪ ವಿರುದ್ಧವೂ ಅಕ್ರಮ ಆಸ್ತಿ ಗಳಿಕೆಯ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ತುಮಕೂರಿನ ಶಿರಾ ಗೇಟ್‌ ನ 80 ಫೀಟ್ ಬಳಿಯಿರುವ ಹನುಮಂತರಾಯಪ್ಪ ಅವರ ನಿವಾಸ, ಮಿಡಿಗೇಶಿಯ ಫಾರಂ ಹೌಸ್ ಹಾಗೂ ಕೊರಡಗೆರೆಯ ಕಚೇರಿಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. 

ಮಂಡ್ಯದಲ್ಲಿ ಲೋಕಾಯುಕ್ತ ದಾಳಿ: 
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಪಿ‌ಡಬಲ್ಯು‌ಡಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಹರ್ಷ ಅವರ ಮೇಲೂ ಸಹ ಅಕ್ರಮ ಆಸ್ತಿ ಗಳಿಕೆಯ ಆರೋಪ ಕೇಳಿಬಂದಿತ್ತು. ಇದೀಗ ಹರ್ಷ ಅವರಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸಜೀತ್ ನೇತೃತ್ವದಲ್ಲಿ  ಹರ್ಷ ಅವರ ಮನೆ, ಕಚೇರಿ, ಕುಟುಂಬಸ್ಥರು, ಸಂಬಂಧಿಕರ ಮನೆ ಮೇಲೆ ದಾಳಿ ನಡೆಯುತ್ತಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಇದನ್ನೂ ಓದಿ- ಕೈಗಾರಿಕೆಗಳಲ್ಲಿ ಕನ್ನಡ ನಾಮಫಲಕ ಬಳಕೆ ಕಡ್ಡಾಯ-ಬಿಬಿಎಂಪಿ ಆದೇಶ

ಚಾಮರಾಜನಗರದ ಜಿಲ್ಲೆಯಲ್ಲೂ ಲೋಕಾಯುಕ್ತ ದಾಳಿ: 
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್  ಆಗಿರುವ ಪಿ.ರವಿಕುಮಾರ್ ಅವರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಕೆಲ ದಿನಗಳ ಹಿಂದೆಯಷ್ಟೆ ಹುಣಸೂರಿನಿಂದ ಚಾಮರಾಜನಗರದಕ್ಕೆ ವರ್ಗಾವಣೆಗೊಂಡಿದ್ದ ಪಿ. ರವಿಕುಮಾರ್ ಅವರ ಕೊಳ್ಳೆಗಾಲ ತಾಲೂಕಿನ ಆಲಹಳ್ಳಿ ಗ್ರಾಮದ ಮನೆ ಹಾಗೂ ಅವರ ಮೈಸೂರಿನ ನಿವಾಸ, ಚಾಮರಾಜನಗರದಲ್ಲಿರುವ ಮನೆಗಳ ಮೇಲೆ ಲೋಕಾ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.   

ಹಾಸನದಲ್ಲೂ ಲೋಕಾ ದಾಳಿ: 
ಲೋಕಾಯುಕ್ತ ಎಸ್​​ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ತಿರುಮಲೇಶ್, ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ನೇತೃತ್ವದ ತಂಡ ಹಾಸನದ ಆಹಾರ ನೀರಿಕ್ಷಕ ಜಗನ್ನಾಥ್ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಜಗನ್ನಾಥ್ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ನಿವಾಸ ಮತ್ತು ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಶೋಧನೆ ನಡೆಸುತ್ತಿದ್ದಾರೆ. 

ಮಂಗಳೂರಿನಲ್ಲಿಯೂ ಪರಿಶೀಲನೆ ಮುಂದುವರೆಸಿರುವ ಲೋಕಾಯುಕ್ತ ಅಧಿಕಾರಿಗಳು: 
ಕಳೆದ ಐದಾರು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರಿನ ಅತ್ತಾವರ ವಿಭಾಗದ ಮೆಸ್ಕಾಂ ಇಇ ಶಾಂತಕುಮಾರ್ ನಿವಾಸ ಮತ್ತು ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News