ಮಹಾದಾಯಿ ವಿವಾದ: ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಲಿರುವ 700ಕ್ಕೂ ಅಧಿಕ ರೈತರು

       

Last Updated : Apr 21, 2018, 02:35 PM IST
ಮಹಾದಾಯಿ ವಿವಾದ: ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಲಿರುವ 700ಕ್ಕೂ ಅಧಿಕ ರೈತರು title=

ಹುಬ್ಬಳ್ಳಿ: ಮಹಾದಾಯಿ ನದಿಯ ನೀರಿನ ವಿಚಾರವಾಗಿ ಕಳೆದ ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಈಗ ರಾಷ್ಟ್ರಪತಿಯವರನ್ನು ದಯಾಮರಣ ನೀಡಲು ಅಗ್ರಹಿಸಲಿದ್ದಾರೆ.

ಇದಕ್ಕಾಗಿ ಸುಮಾರು 700 ಕ್ಕೂ ಅಧಿಕ ರೈತರು ಕರ್ನಾಟಕದಿಂದ ದೆಹಲಿಗೆ ತೆರಳಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದರ ಬಳಿ ದಯಾಮರಣಕ್ಕೆ ವಿನಂತಿ ಕೋರಲಿದ್ದಾರೆ .

ರೈತರು ಇದೇ ಏಪ್ರಿಲ್ 25 ರಂದು ಕರ್ನಾಟಕದಿಂದ ಪ್ರಯಾಣ ಬೆಳೆಸಲಿದ್ದು, ರಾಷ್ಟ್ರಪತಿ ಭೇಟಿಯ ನಂತರ ದೆಹಲಿಯಲ್ಲಿ  ಮೂರು ದಿನಗಳ ಕಾಲ  ಮಹಾದಾಯಿ ವಿಚಾರವಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತಾಗಿ ಸುದ್ದಿಗಾರರೊಂದಿಗೆ  ಮಾತನಾಡಿದ ರೈತ ಸೇನಾ ಮುಖಂಡರು "ನಾವು ರಾಷ್ಟ್ರಪತಿಗಳಿಗೆ ದಯಾಮರಣದ ವಿಚಾರವಾಗಿ  ಮನವಿಯನ್ನು ಸಲ್ಲಿಸುತ್ತೇವೆ ಆನಂತರ ಅಲ್ಲಿ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸುತ್ತೇವೆ. ಈಗಾಗಲೇ ಪ್ರತಿಯೊಬ್ಬ ರಾಜಕಾರಣಿಯು ಈ ಸಮಸ್ಯೆಯ ಪ್ರಯೋಜನವನ್ನು  ಮಾತ್ರ ಪಡೆಯುತ್ತಾನೆ ಆದರೆ ಅದರ ಕುರಿತಾಗಿ ಏನೂ ಮಾಡುತ್ತಿಲ್ಲ. ಮುಂದೆ ಇದೆ ರೀತಿ  ಎಲ್ಲ ರಾಜಕಾರಣಿಗಳು  ಮಾಡುತ್ತಿದ್ದರೆ, ರೈತರು ತೀವ್ರ ಸಮಸ್ಯೆಯನ್ನು ಎದುರಿಸಲಿದ್ದಾರೆ "ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲು ಕೂಡ  ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

Trending News