ಮೈಲಾರಲಿಂಗೇಶ್ವರ ಕಾರ್ಣಿಕ : ಭಾಗ್ಯದ ನಿಧಿ ತುಂಬಿ ತುಳುಕಿತ್ತಲೇ ಪರಾಕ್ ಎಂದು ನುಡಿದ ಗೊರವಯ್ಯ ....! 

ಸಾವಿರಾರು ಜನ ಭಕ್ತರು ಸೇರಿದ್ದು ಗೊರವಯ್ಯ ಬಿಲ್ಲನ್ನು ಏರಿ , ಭಾಗ್ಯದ ನಿಧಿ ತುಂಬಿ ತುಳುಕಿತ್ತಲೇ ಪರಾಕ್ ಎಂದು ಕಾರ್ಣಿಕ ನುಡಿದರು. ಈ ವಾಕ್ಯವನ್ನು ಕೇಳಿದ ಜನರು ಇದು ಶುಭದ ನುಡಿ ಎಂದು ಹೇಳುತ್ತಿದ್ದಾರೆ. ಈ ವರ್ಷ ಮಳೆ ಬೆಳೆ ಸಮೃದ್ದವಾಗಿ ಆಗಲಿದೆ ಎಂದು ಅರ್ಚಕರು ಕಾರ್ಣಿಕವನ್ನು ವಿವರಿಸಿದ್ದಾರೆ. ಈ ಕಾರ್ಣಿಕವನ್ನು ನುಡಿಯುವುದನ್ನು ನೋಡುವುದು ವಿಶೇಷವಾಗಿರುತ್ತದೆ.

Written by - Zee Kannada News Desk | Edited by - Manjunath N | Last Updated : Feb 6, 2023, 12:41 PM IST
  • ಈ ಬಾರಿಯ ಕಾರ್ಣಿಕದ ನುಡಿಯಲ್ಲಿ ಭಾಗ್ಯದ ನಿಧಿ ತುಂಬಿ ತಳುಕುತ್ತದೆ ಅಂದರೇ ಮಳೆ ಬೆಳೆ ಸಮೃದ್ದವಾಗಿರುತ್ತದೆ
  • ಹಾಗೆಯೇ ರಾಜಕೀಯ ಸ್ಥಿತಿಗತಿಗಳು ಸುಧಾರಿಸುತ್ತವೆ
  • ರೋಗ ರುಜೀನಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲವೆಂದು ಗೊರವಯ್ಯನ ನುಡಿಯ ಸಾರಾಂಶವಾಗಿದೆ ಎಂದು ಅರ್ಚಕರು ವಿವರಿಸಿದ್ದಾರೆ
ಮೈಲಾರಲಿಂಗೇಶ್ವರ ಕಾರ್ಣಿಕ : ಭಾಗ್ಯದ ನಿಧಿ ತುಂಬಿ ತುಳುಕಿತ್ತಲೇ ಪರಾಕ್ ಎಂದು ನುಡಿದ ಗೊರವಯ್ಯ ....!  title=
file photo

ವಿಜಯನಗರ: ಪ್ರತಿ ವರ್ಷದಂತೆ ಈ ವರ್ಷವು ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರ ಗೊರವಯ್ಯ ಕಾರ್ಣಿಕವನ್ನು ನುಡಿದರು. ಈ ಕಾರ್ಣಿಕಕ್ಕಾಗಿ ಜನ ಸಾಕಷ್ಟು ಕಾತುರದಿಂದ ಕಾಯುತ್ತಿರುತ್ತಾರೆ. ಹಾಗೆಯೇ ಮೈಲಾರಲಿಂಗೇಶ್ವರ ಕಾರ್ಣಿಕವನ್ನು ಜನರು ಹೆಚ್ಚಾಗಿ ನಂಬುತ್ತಾರೆ ಅಲ್ಲದೇ ಅದು ಇಡೀ ವರ್ಷದ ಭವಿಷ್ಯವೆಂದು ಹೇಳಲಾಗುತ್ತದೆ. ಈ ಕಾರ್ಣಿಕದಲ್ಲಿ ಮಳೆ ಬೆಳೆ ಹಾಗೂ ಮುಂದಿನ ದಿನಗಳಲ್ಲಿ  ರಾಜಕೀಯ ಸ್ಥಿತಿ ಗತಿ ಏನಾಗಲಿದೆ ಎಂಬುದರ ಕುರಿತು ಹೇಳಲಾಗುತ್ತದೆ. 

ಇದನ್ನೂ ಓದಿ: “ಮುಸ್ಲಿಂ ಸಮುದಾಯಕ್ಕೆ ಜಮೀರ್ ಗಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ”- ಎಚ್.ಡಿ.ಕುಮಾರಸ್ವಾಮಿ

ಸಾವಿರಾರು ಜನ ಭಕ್ತರು ಸೇರಿದ್ದು ಗೊರವಯ್ಯ ಬಿಲ್ಲನ್ನು ಏರಿ , ಭಾಗ್ಯದ ನಿಧಿ ತುಂಬಿ ತುಳುಕಿತ್ತಲೇ ಪರಾಕ್ ಎಂದು ಕಾರ್ಣಿಕ ನುಡಿದರು. ಈ ವಾಕ್ಯವನ್ನು ಕೇಳಿದ ಜನರು ಇದು ಶುಭದ ನುಡಿ ಎಂದು ಹೇಳುತ್ತಿದ್ದಾರೆ. ಈ ವರ್ಷ ಮಳೆ ಬೆಳೆ ಸಮೃದ್ದವಾಗಿ ಆಗಲಿದೆ ಎಂದು ಅರ್ಚಕರು ಕಾರ್ಣಿಕವನ್ನು ವಿವರಿಸಿದ್ದಾರೆ. ಈ ಕಾರ್ಣಿಕವನ್ನು ನುಡಿಯುವುದನ್ನು ನೋಡುವುದು ವಿಶೇಷವಾಗಿರುತ್ತದೆ. ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕ ನುಡಿದು ಬಿಲ್ಲನ್ನು ಕೈ ಬಿಡುತ್ತಾರೆ ಆಗ ಕೆಳಗಿರುವ ಜನ ಅವರನ್ನು ಹಿಡಿಯುತ್ತಾರೆ. ಇದನ್ನು ನೋಡುಲು ಮೈ ರೋಮಾಂಚನವಾಗುತ್ತದೆ ಎಂದು ಅಲ್ಲಿನ ಜನರು ಹೇಳುತ್ತಾರೆ. ಈ ಬಿಲ್ಲೇರಿ ಕಾರ್ಣಿಕ ನುಡಿಯುವ ಸಂಪ್ರದಾಯ ಮೊಲಿನಿಂದಲೂ ಇತ್ತು ಅಲ್ಲದೇ ಆ ಭಾಗದ ಜನ ಅದನ್ನು ಗಾಢವಾಗಿ ನಂಬುತ್ತಾರೆ. ಭವಿಷ್ಯದಲ್ಲಿ ರಾಜಕೀಯ ಮಳೆ ಬೆಳೆ ಏನಾಗಲಿದೆ ಎನ್ನುವುದರ ಕುರಿತು ನಿಜವಾಗುವ ವಾಕ್ಯಗಳನ್ನು ಗೊರವಯ್ಯ ನುಡಿಯುತ್ತಾರೆ ಎಂದು ಭಕ್ತರು ಹೇಳುತ್ತಾರೆ. 

ಇದನ್ನೂ ಓದಿ: Kalaburgi Breaking : ಮಾರಕಾಸ್ತ್ರ ಹಿಡಿದು ಜನರಿಗೆ ಹೆದರಿಸುತ್ತಿದ್ದ ವ್ಯಕ್ತಿಯ ಮೇಲೆ‌ ಪೊಲೀಸರಿಂದ ಫೈರಿಂಗ್
  
ಈ ಬಾರಿಯ ಕಾರ್ಣಿಕದ ನುಡಿಯಲ್ಲಿ ಭಾಗ್ಯದ ನಿಧಿ ತುಂಬಿ ತಳುಕುತ್ತದೆ ಅಂದರೇ ಮಳೆ ಬೆಳೆ ಸಮೃದ್ದವಾಗಿರುತ್ತದೆ, ಹಾಗೆಯೇ ರಾಜಕೀಯ ಸ್ಥಿತಿಗತಿಗಳು ಸುಧಾರಿಸುತ್ತವೆ, ರೋಗ ರುಜೀನಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲವೆಂದು ಗೊರವಯ್ಯನ ನುಡಿಯ ಸಾರಾಂಶವಾಗಿದೆ ಎಂದು ಅರ್ಚಕರು ವಿವರಿಸಿದ್ದಾರೆ. ಅದೇ ರೀತಿ ಕೋಡಿ ಮಠದ ಶ್ರೀಗಳು ಸಹ ಭವಿಷ್ಯ ನುಡಿದಿದ್ದು, ಯೂಗಾದಿ ನಂತರ ಪ್ರಕೃತಿ ವಿಕೋಪ ಉಂಟಾಗಬಹುದು. ಈಬಗ್ಗೆ ನಿಖರವಾಗಿ ಯುಗಾದಿ ಭವಿಷ್ಯದಲ್ಲಿ ಹೇಳ್ತಿನಿ. ಆದರೆ ರಾಜಕೀಯ ಸ್ಥಿತಿಗತಿಯಲ್ಲಿ ಬದಲಾವಣೆಗಳು ಉಂಟಾಗಲಿವೆ ಪಕ್ಷಗಳಲ್ಲಿ ಒಡಕು ಉಂಟಾಗುತ್ತದೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಚುನಾವಣೆ ಕುರಿತಾಗಿ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಮುಂದಿನ ಎರಡ್ಮೂರು ಇಸವಿ ಬಹಳ ಕಷ್ಟಗಳನ್ನು ಎದುರಿಸಲಿದೆ. ಈಗ ಎಷ್ಟು ಸುಖವಿದೆಯೋ ಅಷ್ಟೇ ಕಷ್ಟ ಎದುರಾಗಲಿದೆ ಎಂದು ಶ್ರೀಗಳು ನುಡಿದಿದ್ದಾರೆ. ಹೊಸಪೇಟೆಯಲ್ಲಿ ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು ಭವಿಷ್ಯ ನುಡಿದಿದ್ದರು ಅದರಂತೆಯೇ ನೇಪಾಳದಲ್ಲಿ ವಿಮಾನ ಆಘಾತವುಂಟಾಗಿ 50 ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ನಾವು ಮುಂದಿನ ಭವಿಷ್ಯವನ್ನು ಯುಗಾದಿ ನಂತರ ತಿಳಿಸಲಿದ್ದೇವೆ ಎಂದು ಶ್ರೀಗಳು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News