close

News WrapGet Handpicked Stories from our editors directly to your mailbox

ಶಾಸಕ ಎಸ್.ಎ ರಾಮದಾಸ್‍ರನ್ನು ಡಿಸಿಎಂ ಮಾಡಿ; ಸಿಎಂಗೆ ಪೇಜಾವರ ಶ್ರೀ ಶಿಫಾರಸು!

ಎಸ್.ಎ. ರಾಮದಾಸ್ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ.

Updated: Aug 28, 2019 , 08:31 AM IST
ಶಾಸಕ ಎಸ್.ಎ ರಾಮದಾಸ್‍ರನ್ನು ಡಿಸಿಎಂ ಮಾಡಿ; ಸಿಎಂಗೆ ಪೇಜಾವರ ಶ್ರೀ ಶಿಫಾರಸು!

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರನ್ನು 'ಉಪಮುಖ್ಯಮಂತ್ರಿ' ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಶಿಫಾರಸು ಮಾಡುವುದಾಗಿ ಪೇಜಾವರ ಶ್ರೀ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಮದಾಸ್ ಪರವಾಗಿ ಸಿಎಂ ಯಡಿಯೂರಪ್ಪ ಅಥವಾ ಅಮಿತ್ ಶಾ ಅವರನ್ನು ಸಂಪರ್ಕಿಸಿಲ್ಲ. ಆದರೆ ಸೂಕ್ತ ಸಂದರ್ಭ ನೋಡಿ ಡಿಸಿಎಂ ಸ್ಥಾನಕ್ಕೆ ಶಿಫಾರಸು ಮಾಡುವುದಾಗಿ ಪೇಜಾವರ ಶ್ರೀ ತಿಳಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ತಾವು ಜಾತಿ ಆಧಾರದಲ್ಲಿ ಯಾರ ಪರವೂ, ಯಾವ ಸ್ಥಾನವನ್ನೂ ಕೇಳುವುದಿಲ್ಲ ಎಂದಿದ್ದ ಪೇಜಾವರ ಶ್ರೀಗಳು ಇದೀಗ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಅವರನ್ನು ಡಿಸಿಎಂ ಸ್ಥಾನಕ್ಕೆ ಮಾತುಕತೆ ನಡೆಸುವುದಾಗಿ ಹೇಳಿರುವುದು ಹೊಸ ಸಂಚಲನಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಖಾತೆ ಹಂಚಿಕೆ ಬಳಿಕ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ಪೇಜಾವರಿ ಶ್ರೀಗಳು ಈಗ ಸೂಕ್ತ ಸಂದರ್ಭ ನೋಡಿ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರನ್ನು ಡಿಸಿಎಂ ಸ್ಥಾನಕ್ಕೆ ಮಾತುಕತೆ ನಡೆಸುವುದಾಗಿ ಹೇಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.