ರೂಮ್ ಕೊಡದೆ ಸೇವಾ ನ್ಯೂನ್ಯತೆ ಎಸಗಿದ ಮೆಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿಗೆ ರೂ.11 ಲಕ್ಷ 38 ಸಾವಿರ ದಂಡ 

ಅದಕ್ಕಾಗಿ ಮೆಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಹಾಗೂ ಅನಂತ ರೆಸಿಡೆನ್ಸಿ ಹೋಟೆಲ್‍ನವರು ಸೇರಿ ರ್ಯಾಡಿಸನ್ ಬ್ಲ್ಯೂ ಹೋಟೆಲ್‍ಚಾರ್ಜ್ ರೂ.38,000/-, 21 ಜನ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ತಲಾ ರೂ.50,000/- ಒಟ್ಟು ರೂ.10,50,000/- ಹಾಗೂ 5 ಪ್ರಕರಣಗಳ ಖರ್ಚು ವೆಚ್ಚ ರೂ.50,000/- ಸೇರಿಒಟ್ಟು ರೂ.11,38,000/- ಪರಿಹಾರ ನೀಡುವಂತೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಪರಿಹಾರ ನೀಡಲು ಆದೇಶಿಸಿದೆ.

Written by - Zee Kannada News Desk | Last Updated : Feb 16, 2023, 03:25 PM IST
  • ವಿಚಾರಿಸಿದಾಗ ಅದರ ಮ್ಯಾನೇಜರ್ ರೂಮ್‍ಗಳು ಖಾಲಿ ಇಲ್ಲ ಅಂತಾ ಹೇಳಿ ರೂಮ್ ಕೋಡಲು ನಿರಾಕರಿಸಿದ್ದರು.
  • ಅಂದುರಾತ್ರಿ 5 ಜನ ಹೆಣ್ಣು ಮಕ್ಕಳು, 11 ಜನ ಚಿಕ್ಕ ಮಕ್ಕಳನ್ನು ಸೇರಿ ಎಲ್ಲ 21 ಜನ ದೂರುದಾರರು ಹೋಟೆಲ್ ಆವರಣದಲ್ಲಿ ತಮ್ಮ ವಾಹನದಲ್ಲೆ ತಂಗಿದ್ದರು
  • ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆಂದು ಅಭಿಪ್ರಾಯ ಪಟ್ಟು ಆಯೋಗ ತೀರ್ಪು ನೀಡಿದೆ
ರೂಮ್ ಕೊಡದೆ ಸೇವಾ ನ್ಯೂನ್ಯತೆ ಎಸಗಿದ ಮೆಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿಗೆ ರೂ.11 ಲಕ್ಷ 38 ಸಾವಿರ ದಂಡ  title=
file photo

ಧಾರವಾಡ : ವಿದ್ಯಾನಗರ ಹುಬ್ಬಳ್ಳಿಯ ನಿವಾಸಿ ದೀಪಕ್ ರತನ್ ಮತ್ತು ಆತನ ಸ್ನೇಹಿತರು ಸೇರಿ ಒಟ್ಟು 21 ಜನ ಡಿಸೆಂಬರ್, 2019 ರಲ್ಲಿ ಮೆಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಮೂಲಕ ಆನ್‍ಲೈನ್ ರಿಸರ್‍ರ್ವೆಷನ್ ಮಾಡಿಸಿ ಮಹಾರಾಷ್ಟ್ರ ರಾಜ್ಯದ ಮುಂಬೈ, ಲೋನಾವಾಲಾ, ಲಾವಾಸಾ ಮತ್ತು ಇತರೆ ಕಡೆ ಪ್ರವಾಸಕ್ಕೆ ಹೋಗಿದ್ದರು.

ದಿ:23/12/2019 ರಿಂದ 25/12/2019ರ ಎರಡು ದಿವಸಕ್ಕೆ ಅವರು ಲಾವಾಸಾದ ಹೋಟೆಲ್ ಅನಂತ ರೆಸಿಡೆನ್ಸಿಯಲ್ಲಿ ರೂ.17,752/- ಗಳನ್ನು ಮೆಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಮೂಲಕ ಹಣ ಸಂದಾಯ ಮಾಡಿ ತಮ್ಮ ವಾಸ್ತವ್ಯಕ್ಕೆ ಒಟ್ಟು 8 ರೂಮ್‍ಗಳನ್ನು ಬುಕ್ ಮಾಡಿಕೊಂಡಿದ್ದರು.ಅದರಂತೆ ಎಲ್ಲಾ 21 ಜನ ದೂರುದಾರರು ದಿ:23/12/2019ರಂದು ಲಾವಾಸಾಕ್ಕೆ ಬಂದು ತಮ್ಮ ವಾಸ್ತವ್ಯಕ್ಕೆ ಹೋಟೆಲ್ ಅನಂತ ರೆಸಿಡೆನ್ಸಿಯಲ್ಲಿ ವಿಚಾರಿಸಿದಾಗ ಅದರ ಮ್ಯಾನೇಜರ್ ರೂಮ್‍ಗಳು ಖಾಲಿ ಇಲ್ಲ ಅಂತಾ ಹೇಳಿ ರೂಮ್ ಕೋಡಲು ನಿರಾಕರಿಸಿದ್ದರು. ಅಂದುರಾತ್ರಿ 5 ಜನ ಹೆಣ್ಣು ಮಕ್ಕಳು, 11 ಜನ ಚಿಕ್ಕ ಮಕ್ಕಳನ್ನು ಸೇರಿ ಎಲ್ಲ 21 ಜನ ದೂರುದಾರರು ಹೋಟೆಲ್ ಆವರಣದಲ್ಲಿ ತಮ್ಮ ವಾಹನದಲ್ಲೆ ತಂಗಿದ್ದರು. ಮರುದಿವಸ ಅವರೆಲ್ಲರು ಅದೇ ಊರಿನ ರ್ಯಾಡಿಸಾನ್ ಬ್ಲ್ಯೂ ಹೋಟೆಲ್‍ಗೆ ಹೋಗಿ ಅಲ್ಲಿ ರೂ.37,628/- ಹಣ ನೀಡಿ ರೂಮ್‍ಗಳನ್ನು ಪಡೆದುಕೊಂಡಿದ್ದರು.

ಇದನ್ನೂ ಓದಿ: ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು: ಸಿಎಂ ಬಸವರಾಜ ಬೊಮ್ಮಾಯಿ

ಅನಂತ ರೆಸಿಡೆನ್ಸಿ ಹೋಟೆಲ್‍ನವರು ತಮ್ಮಿಂದ ಮುಂಗಡ ಹಣ ಪಡೆದು ರಿಸರ್ವ್ ಮಾಡಿದ್ದ 8 ರೂಮ್‍ಗಳನ್ನು ತಮಗೆ ನೀಡದೆ ಇಡೀ ರಾತ್ರಿ ಡಿಸೆಂಬರ್ ಚಳಿಯಲ್ಲಿ ವಾಹನದಲ್ಲೇ ತಂಗುವಂತೆ ಮಾಡಿ ಎಲ್ಲರಿಗೂ ಅನಾನುಕೂಲ ಹಾಗೂ ತೊಂದರೆ ಮಾಡಿ ಸದರಿ ಹೋಟೆಲನವರು ತಮಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಕ್ರಮ ಕೈಗೊಳ್ಳುವಂತೆ ಮೆಕ್ ಮೈ ಟ್ರಿಪ್, ಓಯೋ ಕಂಪನಿ ಹಾಗೂ ಅನಂತ ರೆಸಿಡೆನ್ಸಿ ಹೋಟೆಲ್ ನವರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಒಟ್ಟು 5 ದೂರುಗಳನ್ನು ಸಲ್ಲಿಸಿದ್ದರು.

ಆ ಎಲ್ಲ ದೂರುಗಳನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಎಲ್ಲ ದೂರುದಾರರು ತಮ್ಮ ವಿರಾಮದ ವೇಳೆಯಲ್ಲಿ ಪ್ರವಾಸಿ ತಾಣಗಳನ್ನು ನೋಡಲು ಹೋದಾಗ ಅವರು ತಮ್ಮ ವಾಸ್ತವ್ಯಕ್ಕೆ ಮೆಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಮೂಲಕ ರೂ.17,752/- ಮುಂಗಡ ಹಣ ನೀಡಿ ಅನಂತ ರೆಸಿಡೆನ್ಸಿ ಹೋಟೆಲ್‍ನಲ್ಲಿ 8 ರೂಮ್‍ಗಳನ್ನು ರಿಸರ್ವ್ ಮಾಡಿಸಿಕೊಂಡಿದ್ದರು. ನಿಗದಿತ ದಿನ ರೂಮ್ ಕೇಳಲು ಹೋದ ದೂರುದಾರರಿಗೆ ರೂಮ್‍ಗಳು ಇಲ್ಲಾ ಅಂತಾ ಹೇಳಿ ಅವುಗಳನ್ನು ಕೋಡದೆ ಡಿಸೆಂಬರ್‍ನ ಕೋರೆಯುವ ಚಳಿಯಲ್ಲಿ ಹೋಟೆಲ್ ಆವರಣದಲ್ಲಿ ತಮ್ಮ ವಾಹನದಲ್ಲಿ ಇರುವಂತೆ ಮಾಡಿ ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳನ್ನು ಸೇರಿ 21 ಜನ ದೂರುದಾರರಿಗೆ ಅನಾನುಕೂಲ, ಹಣಕಾಸಿನ ಹಾಗೂ ಮಾನಸಿಕ ಮತ್ತು ದೈಹಿಕ ತೊಂದರೆ ಎಸಗಿ ಅನಂತ ರೆಸಿಡೆನ್ಸಿ ಹೋಟೆಲ್‍ನವರು ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆಂದು ಅಭಿಪ್ರಾಯ ಪಟ್ಟು ಆಯೋಗ ತೀರ್ಪು ನೀಡಿದೆ.

ಅನಂತ ರೆಸಿಡೆನ್ಸಿ ಹೋಟೆಲ್‍ನಲ್ಲಿ ರೂಮ್ ರಿಸರ್ವ್ ಮಾಡಲು ಮೆಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿಯವರು ರೂ.1,820/-ಹಣವನ್ನು ಸರ್ವಿಸ್ ಫೀ ಅಂತಾ ಪಡೆದಿದ್ದು ಉಳಿದ ಹಣ ಅನಂತ ರೆಸೆಡೆನ್ಸಿಯವರಿಗೆ ದೂರುದಾರರ ಹಣ ಹೋಗಿರುವುದರಿಂದ ಮೆಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಸೇರಿ ಎಲ್ಲ ನಾಲ್ಕು ಜನ ಎದುರುದಾರರಿಂದ ದೂರುದಾರರಿಗೆ ಸೇವಾ ನ್ಯೂನ್ಯತೆಯಾಗಿದ್ದು ಎಲ್ಲ ಎದುರುದಾರರು ಗ್ರಾಹಕರ ಹಿತರಕ್ಷಣಾ ಕಾಯ್ದೆಯಡಿ ತಪ್ಪು ಎಸಗಿದ್ದಾರೆಂದು ಹೇಳಿ ಎಲ್ಲ ಎದುರುದಾರರು 21 ಜನ ದೂರುದಾರರಿಗೆ ಪರಿಹಾರ ಕೊಡಲು ಬದ್ದರಿದ್ದಾರೆಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಇದನ್ನೂ ಓದಿ: Siddaramaiah : 'ಹೊಡಿ, ಬಡಿ, ಕಡಿ ಅನ್ನೋದು ಬಿಜೆಪಿ ಸಂಸ್ಕೃತಿ'

ಅದಕ್ಕಾಗಿ ಮೆಕ್ ಮೈ ಟ್ರಿಪ್ ಹಾಗೂ ಓಯೋ ಕಂಪನಿ ಹಾಗೂ ಅನಂತ ರೆಸಿಡೆನ್ಸಿ ಹೋಟೆಲ್‍ನವರು ಸೇರಿ ರ್ಯಾಡಿಸನ್ ಬ್ಲ್ಯೂ ಹೋಟೆಲ್‍ಚಾರ್ಜ್ ರೂ.38,000/-, 21 ಜನ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ತಲಾ ರೂ.50,000/- ಒಟ್ಟು ರೂ.10,50,000/- ಹಾಗೂ 5 ಪ್ರಕರಣಗಳ ಖರ್ಚು ವೆಚ್ಚ ರೂ.50,000/- ಸೇರಿಒಟ್ಟು ರೂ.11,38,000/- ಪರಿಹಾರ ನೀಡುವಂತೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಪರಿಹಾರ ನೀಡಲು ಆದೇಶಿಸಿದೆ. ತಪ್ಪಿದ್ದಲ್ಲಿ ಒಟ್ಟು ರೂ.11,38,000/- ಗಳ ಮೇಲೆ ವಾರ್ಷಿಕ ಶೇ.8% ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಸಂದಾಯ ಮಾಡುವಂತೆ ತನ್ನ ತೀರ್ಪಿನಲ್ಲಿ ಆಯೋಗ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News