ಮಹಿಳೆಯರ ಅಭಿವೃದ್ಧಿಯನ್ನ ಮನುವಾದಿಗಳು ಸಹಿಸಲ್ಲ : ಸಿಎಂ ಸಿದ್ದರಾಮಯ್ಯ

CM Siddaramaiah : ಮಹಿಳೆಯರು ಸಮಾಜದಲ್ಲಿ ಶೇ 50 ರಷ್ಟಿದ್ದಾರೆ,ಶತ ಶತಮಾನಗಳಿಂದ ಅವಕಾಶ ವಂಚಿತರಾಗಿದ್ದಾರೆ. 2014 ವರೆಗೆ ಮಹಿಳೆಯರು ಸಾಮಾಜಿಕ ಜೀವನದಲ್ಲಿ ಶೇ 30ರಷ್ಟು ಪಾಲುದರಿಕೆಯನ್ನ ಹೊಂದಿದ್ದರು. ಈಗ 24% ಇಳಿದಿದೆ, ಮೊಸಳೆ ಕಣ್ಣೀರು ಹಾಕುವ ಮನುವಾದಿಗಳು ಮಹಿಳೆಯರ ಶಕ್ತಿಕರಣ ಸಹಿಸಲ್ಲ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.   

Written by - Prashobh Devanahalli | Edited by - Savita M B | Last Updated : Jun 11, 2023, 02:13 PM IST
  • ಮಹಿಳೆಯರು ಸಮಾಜದಲ್ಲಿ ಶೇ 50 ರಷ್ಟಿದ್ದಾರೆ,ಶತ ಶತಮಾನಗಳಿಂದ ಅವಕಾಶ ವಂಚಿತರಾಗಿದ್ದಾರೆ.
  • ಶಕ್ತಿ ಯೋಜನೆ ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತನಾಡಿದರು
  • ಈ ಯೋಜನೆ ಮಹಿಳೆಯರಿಗೆ ಮಾಡಿದ ಯೋಜನೆ
ಮಹಿಳೆಯರ ಅಭಿವೃದ್ಧಿಯನ್ನ ಮನುವಾದಿಗಳು ಸಹಿಸಲ್ಲ : ಸಿಎಂ ಸಿದ್ದರಾಮಯ್ಯ  title=

ಬೆಂಗಳೂರು : ವಿಧಾನಸೌಧದಲ್ಲಿ ಶಕ್ತಿ ಯೋಜನೆ ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತನಾಡಿದ ಇವರು, ಎಲ್ಲರೂ ಸೇರಿ ಸಂತೋಷದಿಂದ ಉದ್ಘಾಟನೆ ಮಾಡಿದ್ದೇವೆ, ಕಾರಣ ಈ ಯೋಜನೆ ಮಹಿಳೆಯರಿಗೆ ಮಾಡಿದ ಯೋಜನೆ. ಸಮಾಜದಲ್ಲಿ ಮಹಿಳೆಯರು ಅರ್ಧದಷ್ಟು ಇದ್ದಾರೆ. ಅವರು ಶತಮಾಣಗಳಿಂದ ಅವಕಾಶಗಳಿಂದ ವಂಚಿತರಾಗಿ ಶೋಷಣೆಗೆ ಒಳಗಾಗಿದ್ದಾರೆ.ಯಾವುದೇ ಸಮಾಜ ಅಧಿವೃದ್ಧಿ ಆಗಬೇಕು ಎಂದರೆ ಸಾರ್ವಜನಿಕ ಜೀವನದಲ್ಲಿ ಪುರುಷರಷ್ಟೇ ಮಹಿಳೆಯರು ಸಮಾನವಾಗಿ ಪಾಲ್ಗೊಳ್ಳಬೇಕು.

5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿ ಮಹಿಳೆಯರಿಗೇ ಸಂಬಂಧಿಸಿದ್ದು,ಯಾವ ಟೀಕೆಗು ತಲೆ ಕೆಡಿಸಿಕೊಳ್ಳುವುದಿಲ್ಲ, ಸೊಪ್ಪು ಹಾಕಲ್ಲ.ಜುಲೈ 1 ರಿಂದ ಗೃಹ ಜ್ಯೋತಿಗೆ ಚಾಲನೆ ಸಿಗಲಿದೆ.ಎಲ್ಲರಿಗೂ 200 ಯುನಿಟ್ ಕೊಡಿ ಎನ್ನುತ್ತಾರೆ,ಅವರಿಗೆ ಜ್ಞಾನ ಇಲ್ಲ, ಎಡಬಿಡಂಗಿ ಮಾತುಗಳು.70 ಯುನಿಟ್ ಬಳಸುತ್ತಿರುವವರುಗೂ 200 ಯುನಿಟ್ ಕೊಡಿ ಎಂದರೆ ಹೇಗೆ?ಎಂದು ಸಿಎಂ ಪ್ರಶ್ನಿಸಿದರು.

ಇದನ್ನೂ ಓದಿ-Free Bus: ಐದು ಮಹಿಳೆಯರಿಗೆ ಮಾದರಿ ಸ್ಟಿಕರ್ ನೀಡುವ ಮೂಲಕ ಶಕ್ತಿ ಯೋಜನೆಗೆ ಚಾಲನೆ

ಪಂಚ ಗ್ಯಾರೆಂಟಿ ಯೋಜನೆಗಳ ಎಷ್ಟೇ ಕಷ್ಟ ಬಂದರು ಅನುಷ್ಠಾನ ಮಾಡುತ್ತೇವೆ

ಕಾರ್ಯಕ್ರಮ ಭಾಷಣ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಾನ್ನಾಡಿ, ನಾವು ಕೊಟ್ಟ ಮಾತು ಹಿಂದೆ ಸರಿಯುವ ಪ್ರಶ್ನೆ ಬರಲ್ಲ. ಆರ್ಥಿಕ ದಿವಾಳಿ ಆಗಲಿದೆ ಹೀಗಾಗಿ ಗ್ಯಾರೆಂಟಿ ಅನುಷ್ಠಾನ ಆಗಲ್ಲ ಎಂದರು. ವಾರ್ಷಿಕವಾಗಿ ₹59,000 ಕೋಟಿ ವೆಚ್ಚ ಆಗಲಿದೆ, ಅನುಷ್ಠಾನ ಮಾಡುತ್ತೇವೆ ಎಂದು ಘೋಷಣೆ ಮಾಡಿದರು.

 ಈ ಸಾಲಿಗೆ 40 ಸಾವಿರ ಕೋಟಿ ರೂ ಬೇಕು,ಯಾವ ಜನರಿಗೆ ಖರ್ಚು ಮಾಡುತ್ತೇವೆ ಎನ್ನುವುದು ಮುಖ್ಯ.ದುಡ್ಡಿಲ್ಲ ಎಂದು 5 ಕೆಜಿಗೆ ಅಕ್ಕಿಯನ್ನ ಕಡಿಮೆ ಮಾಡಿದ್ರು,ಈಗ 10 kg ಆಹಾರ ಧಾನ್ಯ ಕೊಡ್ತೇವೆ.ಇದಕ್ಕೆ 10 ಸಾವಿರದ 100 ಕೋಟಿ ರೂ. ಬೇಕು,ರೈತರ ಸಾಲ ಮನ್ನ ಮಾಡದೆ ಬಂಡವಾಳ ಶಾಹಿಗಳ ಸಾಲ ಮನ್ನ ಮಾಡಿದವರು ನಮ್ಮ ಬಗ್ಗೆ ಮಾತನಾಡುತ್ತಾರೆ,ಎಂದು ಮಾತಿನಲ್ಲಿ ಬಿಜೆಪಿ ಸರ್ಕಾರಕ್ಕೆ ಮಾತಿನಲ್ಲಿ ತಿವಿದರು.

ಭಾರತದಲ್ಲಿ ಕೇವಲ 24 ರಷ್ಟು ಮಹಿಳೆಯರು ಮಾತ್ರ ಸಾರ್ವಜನಿಕ ಕ್ಷೇತ್ರಗಳಲ್ಲಿ  ಪಾಲ್ಗೊಳ್ಳುತ್ತಿದ್ದಾರೆ 
ಅನೇಕ ಮುಂದುವರೆದ ದೇಶಗಳಲ್ಲಿ ಮಹಿಳೆಯರ ಪಾಳ್ಗೊಳ್ಳುವಿಕೆ ಪ್ರಮಾಣವನ್ನು ತಿಳಿಸಿದ ಮುಖ್ಯಮಂತ್ರಿಗಳು, ಅಮೆರಿಕಾದಲ್ಲಿ ಶೇ 53% ರಷ್ಟು, ಚೈನಾ ದಲ್ಲಿ ಶೇ 54 ರಷ್ಟು, ಆಸ್ಟ್ರೀಲಿಯಾದಲ್ಲಿ ಶೇ 57, ಇಂಡೋನೇಶಿಯಾದಲ್ಲಿ ಶೇ 57 ರಷ್ಟು ಪಾಲ್ಗೊಳ್ಳುತ್ತಾರೆ. ಬಾಂಗ್ಲಾದೇಶದಲ್ಲಿ ಶೇ 30 ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಭಾರತದಲ್ಲಿ ಕೇವಲ 24 ರಷ್ಟು ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ.  

ದೇಶದಲ್ಲಿ 2014 ರ ನಂತರ ಶೇ 30 ರಷ್ಟಿದ್ದ ಪ್ರಮಾಣ  ಶೇ  24 ಕ್ಕೆ ಇಳಿದಿದೆ ಎಂದರು.  ಯಾವ ದೇಶಗಳಲ್ಲಿ ಹೆಚ್ಚು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಆ ದೇಶ ಅಭಿವೃದ್ಧಿಯಾಗುತ್ತದೆ. ಮಹಿಳೆಯರಿಗೆ ಶಕ್ತಿ ತುಂಬಿದಾಗ ಸಮಾಜದಲ್ಲಿ ಆರ್ಥಿಕ ಮತ್ತು ಸಮಾಜಿಕ ಅಸಮಾನತೆಗಳನ್ನು ಕ್ರಮೇಣ ಅಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು. 

ಇದನ್ನೂ ಓದಿ-‘ಹಿಂದುತ್ವ ಮತ್ತು ದೇವಸ್ಥಾನ ಯಾರ ಖಾಸಗಿ ಆಸ್ತಿಯಲ್ಲ’ : ಡಿಸಿಎಂ ಡಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News