ಮೇಕೆದಾಟು ಪಾದಯಾತ್ರೆ: ಹುಸೇನ್ ಹೊತ್ತ ಎರಡು ಬಿಂದಿಗೆ; ಒಂದು ಪ್ರಧಾನಿಗೆ ಮತ್ತೊಂದು ಸಿಎಂಗೆ

ಕಾಂಗ್ರೆಸ್ ಮುಖಂಡ ಹುಸೈನ್ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕೈಗೊಂಡ ಪಾದಯಾತ್ರೆಯಲ್ಲಿ ಎರಡು ಬಿಂದಿಗೆ ಹೊರುತ್ತ ಇವರದ್ದೇ ಶೈಲಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

Written by - Prashobh Devanahalli | Last Updated : Feb 28, 2022, 06:54 AM IST
  • ಕಾಂಗ್ರೆಸ್ ಮುಖಂಡ ಹುಸೈನ್ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕೈಗೊಂಡ ಪಾದಯಾತ್ರೆಯಲ್ಲಿ ಎರಡು ಬಿಂದಿಗೆ ಹೊರತ್ತ ಇವರದ್ದೇ ಶೈಲಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮೇಕೆದಾಟು ಪಾದಯಾತ್ರೆ: ಹುಸೇನ್ ಹೊತ್ತ ಎರಡು ಬಿಂದಿಗೆ; ಒಂದು ಪ್ರಧಾನಿಗೆ ಮತ್ತೊಂದು ಸಿಎಂಗೆ title=

ಬೆಂಗಳೂರು: ಮೇಕೆದಾಟು ಬಳಿ ಅಣೆಕಟ್ಟು (Mekedatu Project) ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆದಷ್ಟು ಬೇಗ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ (Congress) ಪಾದಯಾತ್ರೆ ನಡೆಸುತ್ತಿದೆ.  ಕಾಂಗ್ರೆಸ್ ಮುಖಂಡ ಸೈಯದ್ ಅಹಮದ್ ಹುಸೇನ್  (Sayad Ahamad Hussen) ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕೈಗೊಂಡ ಪಾದಯಾತ್ರೆಯಲ್ಲಿ ಎರಡು ಬಿಂದಿಗೆ ನೀರು ಹೊತ್ತು ಇವರದ್ದೇ ಶೈಲಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: "ಜನರ ಹಿತದೃಷ್ಟಿಯಿಂದ ಮೇಕೆದಾಟು ಪಾದಯಾತ್ರೆ ಹಿಂದೆ ಪಡೆಯುತ್ತಿದ್ದೇವೆ": ಸಿದ್ದರಾಮಯ್ಯ

ಮೊದಲ ಹಂತದ ಮೇಕೆದಾಟು ಪಾದಯಾತ್ರೆ (Mekedatu Padayatre) ಯಲ್ಲೂ ಬಿಂದಿಗೆ ಹೊತ್ತು ಪಾದಯಾತ್ರೆ ಮಾಡಿದ್ದ ಸೈಯದ್ ಅಹಮದ್ ಹುಸೇನ್  (Sayad Ahamad Hussen) ಅವರು ಈಗ ಎರಡನೇ ಹಂತದ ಪಾದಯಾತ್ರೆಯಲ್ಲೂ ಕಾವೇರಿ ನೀರು ತುಂಬಿದ ಬಿಂದಿಗೆಯನ್ನು ಹೊತ್ತು ಪಾದಯಾತ್ರೆ ನಡೆಸುತ್ತಿದ್ದಾರೆ. 

ವಿಶೇಷವೆಂದರೆ ಎರಡು ಬಿಂದಿಗೆ ಬೆಂಗಳೂರವರೆಗೆ ಹೊತ್ತ ನಂತರ, ಒಂದು ಬಿಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮತ್ತೊಂದು ಬಿಂದಿಗೆಯನ್ನು ಪ್ರಧಾನಿ ನರೇಂದ್ರ ಮೋದಿಗೆ ತಲುಪಿಸಲು ನಿರ್ಧಾರ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News