Mandya: ಆಕೆ ನೋಡೋಕೆ ಅಂದವಾಗಿ ಇದ್ದಳು, ಸುರ ಸುಂದರಾಂಗಿ ಚೆಲುವೆ ಸಾಮಾಜಿಕ ಜಾಲತಾಣ ದಲ್ಲಿ ರೀಲ್ಸ್ ಮಾಡೋದರಲ್ಲೂ ಫುಲ್ ಆಕ್ಟೀವ್ ಆಗಿದ್ದಳು, ಕಳೆದ ಹತ್ತು ವರ್ಷಗಳ ಹಿಂದ ಪ್ರೀತಿಸಿ ಮದುವೆಯಾಗಿದ್ದವಳಿಗೆ ಒಂದು ಮುದ್ದಾದ ಗಂಡು ಮಗು ಸಹ ಇತ್ತು. ಈ ನಡುವೆ ತನ್ನ ಜೀವನದಲ್ಲಿ ಆದ ಅನಿರೀಕ್ಷಿತ ವ್ಯಕ್ತಿಯೋರ್ವನಿಂದ ತನ್ನ ಬದುಕು ಬೆಟ್ಟದ ಬುಡದಲ್ಲಿ ಅಂತ್ಯವಾಗುತ್ತೆ ಎಂದು ಆಕೆ ಅಂದುಕೊಳ್ಳುವ ಮೊದಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಫೋಟೋದಲ್ಲಿರುವ 28 ವರ್ಷದ ಈ ಮುದ್ದಾದ ಚೆಲುವೆ ದೀಪಿಕಾ.. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯ ಲೋಕೇಶ್ ರ ಪತ್ನಿ. ಈಕೆ ಹತ್ತಿರದ ಮೇಲುಕೋಟೆಯ ಖಾಸಗಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿಯಾಗಿದ್ದಳು. ಶನಿವಾರ ಮುಂಜಾನೆ ಕ್ಲಾಸ್‌ಗೆ ಹೋಗಿದ್ದ ದೀಪಿಕಾ ಎಷ್ಟೋತ್ತಾದರೂ ಮನೆಗೆ ವಾಪಸ್ ಬರಲೇ ಇಲ್ಲ.
ಇದನ್ನೂ ಓದಿ-ಅಯೋಧ್ಯೆ ಪೀಠದಲ್ಲಿ ವಿರಾಜಮಾನವಾದ ಶ್ರೀರಾಮ
ದೀಪಿಕಾ ಮನೆಗೆ ಬರದುದ್ದನ್ನು ಗಮನಿಸಿದ ಆತನ ಗಂಡ ಲೋಕೇಶ್ ಎಲ್ಲೆಡೆ ಹುಡುಕಿ, ಎಲ್ಲೂ ಸುಳಿವು ಸಿಗದಾಗ ಕೊನೆಗೆ ಮೇಲುಕೋಟೆ ಪೊಲೀಸರಿಗೆ ಹೆಂಡತಿ ಮನೆಗೆ ಬಂದಿಲ್ಲದಿರುವ ಬಗ್ಗೆ ದೂರು ನೀಡಿದ್ದಾನೆ. ಶಿಕ್ಷಕಿ ದೀಪಿಕಾ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಳಿಸಿಕೊಂಡ ಮೇಲು ಕೋಟೆ ಪೊಲೀಸರು, ಮೊಬೈಲ್ ಟವರ್ ಲೊಕೇಷನ್ ಆಧಾರದಲ್ಲಿ ನಾಪತ್ತೆಯಾಗಿರುವ ಮಹಿಳೆಯ ಹುಡುಕಾಟ ನಡೆಸಲು ಮುಂದಾಗಿದ್ದರು.
ಈ ವೇಳೆ ಪತಿಯನ್ನು ತನಿಖೆಗೆ ಒಳಪಡಿಸಿದಾ ಇಬ್ಬರು ಪ್ರೀತಿಸಿ ಮದುವೆಯಾಗಿರುವುದಾ, ಒಂದು ಮುದ್ದಾದ ಹೆಣ್ಣು ಮಗು ಇರುವುದಾಗಿ ತಿಳಿದು ಬಂದಿದೆ. ಗಂಡ ಖಾಸಗಿ ಕೆಲಸ ಮಾಡುತ್ತಿದ್ದು, ದೀಪಿಕಾ ಶಾಲಾ ಶಿಕ್ಷಕಯಾಗಿದ್ದ ಹಿನ್ನೆಲೆ ಸಂಸಾರ ಸುಗವಾಗಿ ಸಾಗುತ್ತಿತಂತೆ. ನಿತ್ಯ ಕೆಲಸಕ್ಕೆ ಬಸ್‌ನಲ್ಲಿ ತೆರಳುತ್ತಿದ್ದ ದೀಪಿಕಾ ಅಂದು ಸಮಯ ವಿಳಂಬವಾಗಿದ್ದ ಹಿನ್ನೆಲೆ ತನ್ನ ಸ್ಕೂಟರ್ ನಲ್ಲಿ ತೆರಳಿದ್ದಾಳೆ. ಮನೆಗೆ ವಾಪಸ್ ಮನೆಗೆ ಬಾರದ ದೀಪಿಕಾಳಿಗೆ ಪತಿ ಕೆರ ಮಾಡಿದಾಗ ದೀಪಿಕಾ ಫೋನ್ ಸ್ವಿಚ್ ಆಫ್ ಆಗಿದೆ ಎಂದಿದ್ದಾರೆ.
ಇನ್ನು ಪತಿಯ ದೂರು ಆಧರಿಸಿ ಮೇಲುಕೋಟೆ ಪೊಲೀಸರು ನಾಪತ್ತೆಯಾಗಿರುವ ಮಹಿಳೆಯನ್ನು ಹುಡುಕುತ್ತಿದ್ದಾಗ ಮತ್ತೊಂದು ಇತ್ತಾ ಕಡೆ ದೀಪಿಕಾ ಪೋಷಕರು ಕೂಡ ಹುಡುಕಾಟ ನಡೆಸುತ್ತಿದ್ದು, ಈ ವೇಳೆ ಮೇಲು ಕೋಟೆಯ ಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಆಕೆಯ ಸ್ಕೂಟಿ ಪತ್ತೆಯಯಾಗಿದೆ. ಈ ಬಗ್ಗೆ ಹುಡುಕಾಟ ಹೆಚ್ಚು ಮಾಡಿದಾಗ ಆಕೆಯ ಮೃತ ದೇಹ ಹೂತಿಟ್ಟಿರುವ ಬಗ್ಗೆ ತಿಳಿದುಬಂದಿದೆ.
ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದು,ತಹಸಿಲ್ದಾರ್ ಸುಮ್ಮುಖದಲ್ಲಿ ಶವ ಹೊರೆತೆಗೆದಾಗ ದೀಪಿಕಾ ಶವ ಪತ್ತೆಯಾಗಿದೆ. ಈ ವೇಳೆ ಇದೇ ಗ್ರಾಮದ ಯುವಕನೋರ್ವನ ಮೇಲೆ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗೆ 22 ವರ್ಷದ ಯುವಕನೋರ್ವ ಅಕ್ಕ ಅಕ್ಕ ಎಂದು ಮಾತನಾಡಿಸುತ್ತಾ ದೀಪಿಕಾಳೊಂದಿಗೆ ಸಲುಗೆಯಿಂದ ಇದ್ದನಂತೆ, ದೀಪಿಕಾ ನಾಪತ್ತೆಯಾದ ದಿನದಿಂದ ಆ ಯುವಕ ಸಹ ನಾಪತ್ತೆಯಾಗಿದ್ದಾನೆ.
ಇದನ್ನೂ ಓದಿ-ಅಯೋಧ್ಯೆಯಲ್ಲಿ ಇತಿಹಾಸದ ಬಾಲರಾಮ ವಿರಾಜಮಾನ
ಅಪ್ಪ ನನ್ನನ್ನು ಹುಡುಕಬೇಕು, ಅಕ್ಕನ ಮದುವೆ ಮಾಡಿಸು ಎಂದು ತನ್ನ ತಂದೆಗೆ ಹೇಳಿ ಮನೆಯಿಂದ ತೆರಳಿದ್ದಾನೆ. ಅಲ್ಲದೆ ಪ್ರಾಥಮಿಕ ತನಿಖೆಯ ವೇಳೆ ಆತನೆ ದೀಪಿಕಾಗೆ ಕೊನೆಯ ಕರೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ, ಅಲ್ಲದೆ ಶನಿವಾರ ಮಧ್ಯಾಹ್ನ ಅವರಿಬ್ಬರು ಮೇಲುಕೋಟೆ ದೇವಾಲಯದ ಬಳಿ ಜಗಳವಾಡುತ್ತಿರುವ ಬಗ್ಗೆ ಪ್ರವಾಸಿಗರು ವಿಡೀಯೋ ಮಾಡಿ ಮೇಲುಕೋಟೆ ಪೊಲೀಸರಿಗೆ ನೀಡಿದ್ದಾರೆ. ಈಗಾಗಿ ಇವರಿಬ್ಬರ ಬಡುವೆ ಯಾವುದೋ ವಿಚಾರಕ್ಕೆ ಜಗಳವಾಗಿ ಆತನೆ ಕೊಲೆ ಮಾಡಿರಬಹುದು ಎಂದು ಮೃತರ ಕುಟುಂಬಸ್ಥರು ಹಾಗೂ ಪೊಲೀಸರು ಶಂಕಿಸುತ್ತಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿಸಿ ಪರಿವರ್ತನೆ ಮಾಡಿಕೊಂಡಿರುವ ಪೊಲೀಸರು ಆರೋಪಿ ಯುವಕನ ಪತ್ತೆಗೆ ಬಲೆ ಬೀಸಿದ್ದಾರೆ. ಆಕೆಯ ಸಾವಿನಿಂದ ಒಂದು ಮಗು ಅನಾಥವಾಗೊದ್ದು, ದೀಪಿಕಾ ಸಾವಿನ ಸುತ್ತ ಅನುಮಾನಗಳ ಹುತ್ತಾ ಬೃಹದಾಕಾವಾಗಿ ಬೆಳೆದು ನಿಂತಿದ್ದು, ಪೊಲೀಸರ ತನಿಖೆಯಿಂದಷ್ಟೆ ಅವಳ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.