ಎಂದಿನಂತೆ ಮೆಟ್ರೋ ಸಂಚಾರ, ಹೈಕೋರ್ಟ್ ನಲ್ಲಿ ವಿಚಾರಣೆ ಬಳಿಕ ಮುಂದಿನ ನಿರ್ಧಾರ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೆಟ್ರೋ ಸಿಬ್ಬಂದಿಗಳು ಇಂದು ಮಧ್ಯಾಹ್ನದ ಬಳಿಕ ಮುಷ್ಕರ ಕೈಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಮಧ್ಯಾಹ್ನದವರೆಗೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಿಲ್ಲ.

Last Updated : Jun 4, 2018, 09:24 AM IST
ಎಂದಿನಂತೆ ಮೆಟ್ರೋ ಸಂಚಾರ, ಹೈಕೋರ್ಟ್ ನಲ್ಲಿ ವಿಚಾರಣೆ ಬಳಿಕ ಮುಂದಿನ ನಿರ್ಧಾರ title=

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ನೌಕರರ ಸಂಘವು ಇಂದಿನಿಂದ(ಸೋಮವಾರ) ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ. ಆದರೆ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಿಎಂಆರ್‌ಸಿಎಲ್‌ ಕ್ರಮ ಕೈಗೊಂಡಿದ್ದು, ಬೆಳಿಗ್ಗೆ 5.30ರಿಂದ  ರೈಲುಗಳು ಎಂದಿನಂತೆ ಚಲಿಸುತ್ತಿವೆ. 

ಸಿಲಿಕಾನ್ ಸಿಟಿಯ ನಾಲ್ಕೂ ದಿಕ್ಕುಗಳನ್ನು ಸಂಪರ್ಕಿಸುತ್ತಿರುವ ’ನಮ್ಮ ಮೆಟ್ರೊ’ ಜನರ ನಾಡಿಮಿಡಿತವಾಗಿದೆ. ಪ್ರತಿನಿತ್ಯ 3.8 ಲಕ್ಷ ಜನ ಮೆಟ್ರೊದಲ್ಲಿ ಸಂಚರಿಸುತ್ತಿದ್ದಾರೆ. ಆದರೆ, ಪ್ರಯಾಣಿಕರನ್ನು ದಡ ಸೇರಿಸುವ ಮೆಟ್ರೊ ನೌಕರರ ಬೇಡಿಕೆಗಳು ಮಾತ್ರ ಈಡೇರುತ್ತಿಲ್ಲ.

ಬೇಡಿಕೆಗಳನ್ನು ಈಡೇರಿಸದಿರುವ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವಿರುದ್ಧ ಅಸಮಾಧಾನಗೊಂಡಿರುವ ನೌಕರರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಜ್ಜಾಗಿದ್ದಾರೆ. 

ನೌಕರರ ಸಂಘಕ್ಕೆ ಮಾನ್ಯತೆ, ವೇತನ ಹೆಚ್ಚಳ, ಬಡ್ತಿ, ವಸತಿಗೃಹ ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ವಿಶೇಷ ಭತ್ಯೆ, ಕ್ಯಾಂಟೀನ್‌ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಲವು ವರ್ಷಗಳಿಂದ ನೌಕರರು ನಿಗಮದ ಅಧಿಕಾರಿಗಳ ಎದುರು ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ. ಆದರೆ, ಅವರ ಕೂಗಿಗೆ ಅಧಿಕಾರಿಗಳು ಯಾವುದೇ ಮಾನ್ಯತೆ ನೀಡದೆ ಇರುವುದರಿಂದ ಇಂದು ಮಧ್ಯಾಹ್ನ ಹೈಕೋರ್ಟ್ ನಲ್ಲಿ ವಿಚಾರಣೆ ಬಳಿಕ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ತೇವೆ ಅಂತ ಮೆಟ್ರೋ ನೌಕರರ ಸಂಘ ಹೇಳಿದೆ.

Trending News