ಮದ್ಯರಾತ್ರಿ ವಿದ್ಯುತ್ ಟ್ರಾನ್ಸ್ ಪಾರ್ಮರ್ ಏರಿಕುಳಿತ ವ್ಯಕ್ತಿ!

Viral News: ನಗರದ ವಾಪಸಂದ್ರದಲ್ಲಿ 35 ವರ್ಷದ ನಾಗರಾಜ್ ಎಂಬ ವ್ಯಕ್ತಿಯೊಬ್ಬ ನಲವತ್ತು ಅಡಿ ಎತ್ತರದ ವಿದ್ಯುತ್ ಟ್ರಾನ್ಸ್ ಪಾರ್ಮರ್ ಕಂಬವನ್ನು ಹತ್ತಿ ಕುಳಿತಿದ್ದಾನೆ.  

Written by - Savita M B | Last Updated : Jan 19, 2024, 10:06 AM IST
  • ನಮ್ಮ ಸುತ್ತ ಮುತ್ತ ಜನರು ಹೇಗೆಲ್ಲಾ ಇರ್ತಾರೆ ಎಂದು ಗಮಿನಿಸಿದರೆ ಕೆಲವು ಬಾರಿ ನಗು ಬರುತ್ತದೆ.
  • ವ್ಯಕ್ತಿಯೊಬ್ಬ ನಲವತ್ತು ಅಡಿ ಎತ್ತರದ ವಿದ್ಯುತ್ ಟ್ರಾನ್ಸ್ ಪಾರ್ಮರ್ ಕಂಬವನ್ನು ಹತ್ತಿ ಕುಳಿತಿದ್ದಾನೆ.
  • ಮುಂಜಾನೆ ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿ ಘಟನೆ ನಡೆದಿದೆ.
ಮದ್ಯರಾತ್ರಿ ವಿದ್ಯುತ್ ಟ್ರಾನ್ಸ್ ಪಾರ್ಮರ್ ಏರಿಕುಳಿತ ವ್ಯಕ್ತಿ!  title=

ವಾಪಸಂದ್ರ: ನಮ್ಮ ಸುತ್ತ ಮುತ್ತ ಜನರು ಹೇಗೆಲ್ಲಾ ಇರ್ತಾರೆ ಎಂದು ಗಮಿನಿಸಿದರೆ ಕೆಲವು ಬಾರಿ ನಗು ಬರುತ್ತದೆ. ಇನ್ನು ಕೆಲವರ ನಡೆವಳಿಕೆಗಳು ನೋಡುಗರಿಗೆ ಹಾಸ್ಯಾಸ್ಪದವಾಗಿ ನಗೆಪಾಟಲಿಗೆ ಕಾರಣವಾಗುತ್ತದೆ. ಇನ್ನು ಕೆಲವು ಪಾನಮತ್ತ ಜೀವಗಳು ಮಾಡುವ ತರ್ಲೆಗಳು ವಿಚಿತ್ರವೆನಿಸುತ್ತದೆ. ಹಾಗೇ ಮುಂಜಾನೆ ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿ ಘಟನೆ ನಡೆದಿದೆ.

ರಾತ್ರಿ 1 ಗಂಟೆ ಸಮಯದಲ್ಲಿ ರಾತ್ರಿ ಗಸ್ತಿನಲ್ಲಿದ್ದ ನಗರ ಪೋಲಿಸ್‌ ಠಾಣೆಯ ಪಿಎಸ್ಐ ಹೆಚ್. ನಂಜುಂಡಯ್ಯರವರಿಗೆ ನಗರದ ವಾಪಸಂದ್ರದ ಕೇಕ್ ಲ್ಯಾಂಡ್ ಬೇಕರಿ ಬಳಿ ಅಪರಿಚಿತ ವ್ಯಕ್ತಿಯೊಬ್ಬ ನಲವತ್ತು ಅಡಿ ಎತ್ತರದ ಟ್ರಾನ್ಸ್ ಫಾರ್ಮರ್ ವಿದ್ಯುತ್ ಕಂಬ ಹತ್ತುತ್ತಿದ್ದಾನೆ ಎಂದು ಪೋನ್‌ ಮೂಲಕ ಮಾಹಿತಿ ಬರುತ್ತದೆ. 

ಇದನ್ನೂ ಓದಿ-ರಾಮಮಂದಿರ ಉದ್ಘಾಟನೆಗೆ ದಿನಗಣನೆ

ಕೂಡಲೇ ಕಾರ್ಯ ಪ್ರವೃತ್ತರಾದ ಪಿಎಸ್ಐ ನಂಜುಂಡಯ್ಯ ತಮ್ಮ ಸಮಯ ಪ್ರಜ್ಞೆಯಿಂದ ಬೆಸ್ಕಾಂ ಅಧಿಕಾರಿಗಳಿಗೆ ಪೋನ್‌ ಮೂಲಕ ಮಾಹಿತಿ ನೀಡಿ ವಿದ್ಯುತ್ ಟ್ರಾನ್ಸ್ ಪಾರ್ಮರ್ ನ ವಿದ್ಯುತ್‌ ಸರಭರಾಜು ನಿಲ್ಲಿಸಿ, ಅಗ್ನಿಶಾಮಕ ದಳ ಮತ್ತು ಬೆಸ್ಕಾಂ ಸಿಬ್ಬಂಧಿಯೊಂದಿಗೆ ಸ್ಥಳಕ್ಕೆ ಬರುವಷ್ಟರಲ್ಲಿ ಕುಡಿತದ ಅಮಲಿನಲ್ಲಿ ಕಂಬವೇರುತ್ತಿದ್ದ ವ್ಯೆಕ್ತಿ ನಲವತ್ತು ಅಡಿ ಎತ್ತರದ ಟ್ರಾನ್ಸ್ ಫಾರ್ಮರ್ ವಿದ್ಯುತ್ ಕಂಬವೇರಿ ಟ್ರಾನ್ಸ್  ಮೇಲೆ ಕುಳಿತು ಬಿಟ್ಟಿದ್ದ.

ಇದನ್ನೂ ಓದಿ- ಫೆಬ್ರುವರಿ 12 ರಿಂದ 23 ರವರೆಗೂ ಅಧಿವೇಶನ ಕಾರ್ಯಕಲಾಪ

ಕಂಬವೇರಿದ್ದ ವ್ಯೆಕ್ತಿಯನ್ನು ಪೋಲಿಸರು,ಅಗ್ನಿಶಾಮಕ ದಳ ಮತ್ತು ಬೆಸ್ಕಾಂ ಸಿಬ್ಬಂಧಿ ಎಷ್ಟೇ ಮನ ವೊಲಿಸಿದರು ಆತ ಕೆಳಕ್ಕಿಳಿಯಲು ಸುತಾರಾಂ ಒಪ್ಪಲಿಲ್ಲಾ. ಸುಮಾರು  ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ 4-10 ನಿಮಿಷಕ್ಕೆ ಬೆಸ್ಕಾಂ ಹೈಡ್ರಾಲಿಕ್‌ ಬಕೆಟ್ ಟ್ರಾಲಿಯ ಮೂಲಕ ಪಿಎಸೈ ನಂಜುಂಡಯ್ಯ ಮತ್ತು ಬೆಸ್ಕಾಂ ಮತ್ತು ಅಗ್ನಿಶಾಮಕ ಸಿಬ್ಬಂಧಿ ಸೇರಿ  ಕೊನೆಗೂ ಆತನ್ನು ಕೆಳಕ್ಕೆ ಕರೆತರುವಲ್ಲಿ ಯಶಸ್ವಿಯಾದರು.

ಕೂಡಲೆ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ದಾಖಲಿಸಿ ಮದ್ಯದ ನೆಶೆ ಇಳಿಯಲು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮದ್ಯದ ನೆಶೆಯ ಮತ್ತಿನಲ್ಲಿ ವಿದ್ಯುತ್ ಟ್ರಾನ್ಸ್ ಪಾರ್ಮರ್ ಏರಿಕುಳಿತಿದ್ದ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಉಪ್ಪರಹಳ್ಳಿ ಗ್ರಾಮದ ನಾಗರಾಜ್ ನಿಂದ ಆತನ ಪತ್ನಿಗೆ ಪೋನ್‌ ಮೂಲಕ ವಿಷಯ ತಿಳಿಸಿದಾಗ ಆತನ ಪತ್ನಿ ನಗರ ಪೋಲಿಸ್‌ ಠಾಣೆಗೆ ಬಂದು ತನ್ನ ಪತಿ ಯಾವಾಗಲೂ ಕುಡಿದಾಗ ಈ ರೀತಿ ವಿದ್ಯತ್‌ ಕಂಬ ಎರಿಕುಳಿತು ಬಿಡುತ್ತಾನೆ. ಯಾಕೆ ಈ ರೀತಿ ಮಾಡುತ್ತಾನೂ ತಿಳಿಯದು ಎಂದು ಪೋಲಿಸರಿಗೆ ಕ್ಷಮೆ ಕೇಳಿ, ತನ್ನ ಕುಡುಕ ಪತಿಯನ್ನು ಕರೆದೊಯ್ಧಿದ್ದಾಳೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News