'ನನ್ನ ಜತೆ ಮುಂಬೈಗೆ ಬಂದವರೆಲ್ಲರಿಗೂ ಸಚಿವ ಸ್ಥಾನ ಖಚಿತ'

ಹೈಕಮಾಂಡ್​​ನಿಂದ ಆದೇಶ ಬಂದ ಕೂಡಲೇ ಸಚಿವ ಸಂಪುಟ ವಿಸ್ತರಣೆ

Last Updated : Nov 25, 2020, 07:03 PM IST
  • ಹೈಕಮಾಂಡ್​​ನಿಂದ ಆದೇಶ ಬಂದ ಕೂಡಲೇ ಸಚಿವ ಸಂಪುಟ ವಿಸ್ತರಣೆ
  • ನನ್ನ ಜತೆ ಮುಂಬೈಗೆ ಬಂದಿದ್ದ ಸ್ನೇಹಿತರಿಗೆ ಸಚಿವ ಸ್ಥಾನ ಖಚಿತ- ಹೆಚ್. ನಾಗೇಶ್
  • ಖಾತೆ ಬದಲಾವಣೆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ
'ನನ್ನ ಜತೆ ಮುಂಬೈಗೆ ಬಂದವರೆಲ್ಲರಿಗೂ ಸಚಿವ ಸ್ಥಾನ ಖಚಿತ' title=

ಕೋಲಾರ: ನನ್ನ ಜತೆ ಮುಂಬೈಗೆ ಬಂದ ಸ್ನೇಹಿತರಿಗೆ ಸಚಿವ ಸ್ಥಾನ ಖಚಿತ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದೆ ಸಚಿವ ನಾಗೇಶ್(H Nagesh), ಹೈಕಮಾಂಡ್​​ನಿಂದ ಆದೇಶ ಬಂದ ಕೂಡಲೇ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ನನ್ನ ಜತೆ ಮುಂಬೈಗೆ ಬಂದಿದ್ದ ಸ್ನೇಹಿತರಿಗೆ ಸಚಿವ ಸ್ಥಾನ ಖಚಿತ ಎಂದರು.

'ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುವುದು ಖಚಿತ'

ಖಾತೆ ಬದಲಾವಣೆ ಸಂಬಂಧ ಮಾಹಿತಿಯಿಲ್ಲ. ಈ ಬಗ್ಗೆ ಒಂದು ವಾರದಲ್ಲಿ ಗೊತ್ತಾಗುತ್ತದೆ. ಖಾತೆ ಬದಲಾವಣೆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ, ಬಿಜೆಪಿ ಪಕ್ಷ ಏನು ಜವಾಬ್ದಾರಿಯನ್ನು ಕೊಡುತ್ತದೆಯೋ ಅದನ್ನು ನಿಭಾಯಿಸಲು ನಾನು ಸಿದ್ದನಿದ್ದೇನೆ ಎಂದು ತಿಳಿಸಿದರು.

‘ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡುವವರೆಗೂ ಹೋರಾಟ ಮಾಡುತ್ತೇನೆ’

ಕೊರೋನಾ ಎರಡನೇ ಅಲೆ ಭೀತಿಯನ್ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೊರೋನಾ ಲಸಿಕೆ ಬಂದ ಕ್ಷಣ ಎಲ್ಲರಿಗೂ ಸಿಗಲ್ಲ. ಅಲ್ಲಿಯ ವರೆಗೆ ಎಲ್ಲರಿಗು ಮಾಸ್ಕ್ ಒಂದೇ ಲಸಿಕೆ ನೀಡಲಾಗುತ್ತದೆ. 65 ವರ್ಷ ಮೇಲ್ಪಟ್ಟವರಿಗೆ ಮೊದಲು ಲಸಿಕೆ ಸಿಗಲಿದೆ. ಒಂದೇ ಸಲ ಎಲ್ಲಾ ಲಸಿಕೆ ಸಂಗ್ರಹಿಸಲು, ಬಳಸಲು ಸಾಧ್ಯವಿಲ್ಲ. ಆದ್ಯತೆಯ ಮೇರೆಗೆ ಲಸಿಕೆ ಬರಲಿದೆ, ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂದು ಸಚಿವರು ತಿಳಿಸಿದರು.

ಸಿಎಂ ಬಿಎಸ್ ವೈ ಹೇಳಿಕೆಯಿಂದ ಇನ್ನಷ್ಟು ಗರಿಗೆದರಿದ ಸಚಿವಾಕಾಂಕ್ಷಿಗಳ ನಿರೀಕ್ಷೆ!

Trending News