ದೇಶಕ್ಕೆ ಮೋದಿಯವರು ಆಪತ್ಬಾಂಧವ; ಸಿ ಎಂ ಬೊಮ್ಮಾಯಿ

CM Bommai : ನರೇಂದ್ರ ಮೋದಿ ಅವರು ಒಬ್ಬ ಮಹಾನ್‌ ನಾಯಕ, ನಾವು ಅವರನ್ನು ದೇವರೇಂದಿಲ್ಲ ಮೋದಿಯವರು ತಮ್ಮನ್ನು ದೇವರೇಂದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.   

Written by - Zee Kannada News Desk | Last Updated : Mar 13, 2023, 02:27 PM IST
  • ಚುನಾವಣೆ ಸಮೀಪಿಸುತ್ತಿದ್ದಂತಯೆ ಚುನಾವಣೆ ಕಾವು ಏರುತ್ತಿದೆ.
  • ಬಿಜೆಪಿಯ ಪರ ಒಲವು ಹೆಚ್ಚಗುತ್ತಿದೆ ಎಂದು ಸಿ ಎಂ ಬೊಮ್ಮಾಯಿ ಮೋದಿಯವರ ಬಗೆಗಿನ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
  • ಕಾಂಗ್ರೆಸ್ ಆರೋಪಕ್ಕೆ ಸಿ ಎಂ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ದೇಶಕ್ಕೆ ಮೋದಿಯವರು ಆಪತ್ಬಾಂಧವ; ಸಿ ಎಂ ಬೊಮ್ಮಾಯಿ  title=

ಚುನಾವಣೆ ಸಮೀಪಿಸುತ್ತಿದ್ದಂತಯೆ ಚುನಾವಣೆ ಕಾವು ಏರುತ್ತಿದೆ. ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅಬ್ಬರ ಶುರುವಾಗಿದೆ. ಹಲವೆಡೆ ಪ್ರಧಾನಿಯೇ ಹೋಗಿ ಪ್ರಚಾರ ಮಾಡಿದ್ದಾರೆ. ಅವರೇ ಖುದ್ದಾಗಿ ಬೇಟಿ ನೀಡುತ್ತಿರುವದರಿಂದ ಬಿಜೆಪಿಯ ಪರ ಒಲವು ಹೆಚ್ಚಗುತ್ತಿದೆ ಎಂದು ಸಿ ಎಂ ಬೊಮ್ಮಾಯಿ ಮೋದಿಯವರ ಬಗೆಗಿನ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಹಜವಾಗಿಯೇ ಕಾಮಗಾರಿಗಳ ಕ್ರೆಡಿಟ್ ವಾರ್ ಇದೆ. ಪಕ್ಕದ ಮನೆಯವಳು ಗಂಡು ಹಡೆದರೆ ಇವರು ಪೇಡ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ನಾಯಕರಿಗೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇವರು : ಕಾಂಗ್ರೇಸ್‌ ನ ಈ ಹೇಳಿಕೆಗೆ ಸಿ ಎಂ ಪ್ರತಿಕ್ರಿಯಿಸಿದ್ದು, ನಾವು ಮೋದಿ ಅವರನ್ನು ದೇವರು ಎಂದಿಲ್ಲ. ಮೋದಿ ಅವರೂ ತಮ್ಮನ್ನು ದೇವರು ಅಂತ ಎಂದುಕೊಂಡಿಲ್ಲ. ನರೇಂದ್ರ ಮೋದಿ ಅವರು ಒಬ್ಬ ಮಹಾನ್ ನಾಯಕ. ಮೋದಿ ಗಡಿಯಲ್ಲಿ ಭದ್ರತೆ ನೀಡಿ ಅತ್ಯಂತ ಕಷ್ಟಕಾಲದಲ್ಲಿ ಭಾರತವನ್ನು ಎತ್ತಿ ಹಿಡಿದಿದ್ದಾರೆ. ಆಂತರಿಕ ಸುರಕ್ಷತೆ ತಂದು ದೇಶ ಸುಭದ್ರಗೊಳಿಸಿದ್ದಾರೆ.

ಇದನ್ನೂ ಓದಿ-ಹೆಂಡತಿ ಜಾಸ್ತಿ ನಿದ್ದೆ ಮಾಡುತ್ತಿದ್ದಾಳೆ ಎಂದು ಪೊಲೀಸರಿಗೆ ದೂರು ಕೊಟ್ಟ ಪತಿ..! 

ದೇಶದಲ್ಲಿ ಮೋದಿ ಆಪತ್ಬಾಂಧವರ ರೀತಿಯಲ್ಲಿ ಬಂದಿದ್ದಾರೆ. ಇನ್ನೂ ಸಾರ್ವಜನಿಕವಾಗಿ ಯಾರೇ ಬಂದರೂ ಮೋದಿ ನಮಸ್ಕಾರ ಮಾಡುತ್ತಾರೆ ಎಂದು ಕರ್ನಾಟಕಕ್ಕೆ ಬಂದ ಮೋದಿ ರೌಡಿಶೀಟರ್ ಫೈಟರ್ ರವಿಗೆ ನಮಸ್ಕಾರ ಮಾಡಿದ ಫೋಟೋ ವೈರಲ್‌ ವಿಚಾರವಾಗಿ ಮಾತನಾಡಿದರು. ಮೋದಿ ಪ್ರಧಾನಿ ಹುದ್ದೆಗೆ ಕಳಂಕ ತಂದಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಸಿ ಎಂ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. 

ಬಿಜೆಪಿ ನಾಯಕರ ಮೇಲಿನ ಅಸಮಾಧಾನಕ್ಕೆ ವಸತಿ ಸಚಿವ ವಿ. ಸೋಮಣ್ಣ ಕಾಂಗ್ರೇಸ್‌ ಪಕ್ಷ ಸೇರಿಕೊಳ್ಳುತ್ತಾರೆ ಎನ್ನು ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ಮಾತನಾಡಿದ ಸಿಎಂ, ಸೋಮಣ್ಣ ಯಾವಗಲೂ ನಮ್ಮ ಜೊತೆಗೆ ಇರುತ್ತಾರೆ. ಯಾವುದೇ ರೀತಿಯ ಮಾತುಕಥೆಗಳು ಆಗಿಲ್ಲ. ನಾನು ಸೋಮಣ್ಣ ಹಳೇಯ ಸ್ನೇಹಿತರು. ಔಪಚಾರಿವಾಗಿ ನಾವು ಬೇಟಿ ಮಾಡಿದ್ದು, ಸೋಮಣ್ಣ ನಮ್ಮನು ಬಿಟ್ಟು ಹೋಗುವುದಿಲ್ಲ ಎನ್ನುವ ಭರವಸೆ ವ್ಯಕ್ತಪಡಿಸಿದರು. 

ಇದನ್ನೂ ಓದಿ-ಮಂಡ್ಯ ಜಿಲ್ಲೆಯನ್ನು ದೇಶದಲ್ಲಿಯೇ ನಂಬರ್ ಒನ್ ಮಾಡಲು ಕಂಕಣಬದ್ಧ: ಸಿಎಂ ಬೊಮ್ಮಾಯಿ 

ಇನ್ನು ರಾಜ್ಯದಲ್ಲಿ ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಸಿಬ್ಬಂದಿ ಜೊತೆ ನಮ್ಮವರು ಮಾತುಕತೆ ನಡೆಸಿದ್ದಾರೆ. ಇಂಧನ ಸಚಿವರು ಚರ್ಚೆಯಲ್ಲಿದ್ದಾರೆ. ಕೂಡಲೇ ಅದನ್ನು ಬಗೆಹರಿಸುತ್ತಾರೆ. ನಮ್ಮ ಸಚಿವರು ಈಗಾಗಲೇ ಎರಡು ಸುತ್ತಿನ ಮಾತುಕತೆ ಮಾಡಿದ್ದಾರೆ. ಎಲ್ಲ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News