ಪ್ರಚಾರದಲ್ಲಿರಲು ಆರೋಪ : ಎಚ್ಡಿಕೆಗೆ ಸಂಸದ ಡಿ.ಕೆ.ಸುರೇಶ್ ಟಾಂಗ್

ಇರಿಗೇಷನ್, ಪಿಡಬ್ಲ್ಯೂಡಿ ಸೇರಿ ಯಾವ ಇಲಾಖೆಯಲ್ಲೂ ಹಣ ಕೊಟ್ಟಿಲ್ಲ. ಗುತ್ತಿಗೆದಾರರನ್ನು ರಾಜಕೀಯಕ್ಕೆ ಬಳಸಿಕೊಂಡರೂ ತಪ್ಪೇನಿಲ್ಲ. ಅವರು ರಾಜಕಾರಣಕ್ಕೇ ಇರುವಾಗ ಬಳಸಿಕೊಳ್ಳುತ್ತಿದ್ದಾರೆ. ಕ್ಷೇತ್ರಕ್ಕೆ ಹೋಗಲು ಆಗುವುದಿಲ್ಲ ಈಗ, ಅವರು ಇನ್ನು ನಾಲ್ಕು ವರ್ಷ ಬಿಟ್ಟೇ ಕ್ಷೇತ್ರಕ್ಕೆ ಹೋಗುವುದು. - ಸಂಸದ ಡಿ.ಕೆ. ಸುರೇಶ್ 

Written by - RACHAPPA SUTTUR | Edited by - Yashaswini V | Last Updated : Aug 16, 2023, 02:33 PM IST
  • ಆರೋಪ ಮಾಡಿದ್ರೆ ಪ್ರಚಾರದಲ್ಲಿ ಇರ್ತೇವೆ ಅಂದ್ರೆ ಕಷ್ಟ
  • ಹಾಗೇ ಅಂದುಕೊಂಡ್ರೆ ನಾವೇನು ಮಾಡಕ್ಕಾಗಲ್ಲ
  • ಕೇವಲ ಪ್ರಚಾರಕ್ಕಾಗಿ ಆರೋಪ ಮಾಡೋದಲ್ಲ- ಸಂಸದ ಡಿ.ಕೆ. ಸುರೇಶ್
ಪ್ರಚಾರದಲ್ಲಿರಲು  ಆರೋಪ : ಎಚ್ಡಿಕೆಗೆ ಸಂಸದ ಡಿ.ಕೆ.ಸುರೇಶ್ ಟಾಂಗ್ title=

ಬೆಂಗಳೂರು : ಭ್ರಷ್ಟಾಚಾರ ಆರೋಪ ಮಾಡಿ ಪ್ರಚಾರದಲ್ಲಿ ಇರಬೇಕು ಅಂತ ಕೆಲವರು ಬಯಸಿದರೆ ಏನು ಮಾಡುವುದಕ್ಕಾಗುವುದಿಲ್ಲ ಎಂದು ಸಂಸದ ಡಿ.ಕೆ ಸುರೇಶ್  ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಕೆಲಸ ಮಾಡಿದವರಿಗೆ ಹಣ ಸಿಗುತ್ತದೆ. ಎರಡೂವರೆ ವರ್ಷದಿಂದ ಬಿಲ್ ಬಾಕಿ ಇದೆ. 40%.ಕಮಿಷನ್, ಕಳಪೆ ಕಾಮಗಾರಿ ಆರೋಪ ಇದೆ. ತನಿಖೆ ಮಾಡಿ ಹಣ ಬಿಡುಗಡೆ ಮಾಡ್ತೀವಿ ಅಂಥಾ ಸಿಎಂ, ಡಿಸಿಎಂ ಹೇಳಿದ್ದಾರೆ. ಆರೋಪ ಮಾಡಿದ್ರೆ ಪ್ರಚಾರದಲ್ಲಿ ಇರ್ತೀವಿ ಅಂದುಕೊಂಡ್ರೆ ನಾವೇನು ಮಾಡಕ್ಕಾಗಲ್ಲ. ಕೇವಲ ಪ್ರಚಾರಕ್ಕಾಗಿ ಆರೋಪ ಮಾಡೋದಲ್ಲ. ಈಗಾಗಲೇ ನಾಲ್ಕು ತಂಡ ರಚನೆ ಮಾಡಲಾಗಿದೆ. ಸಣ್ಣ ಕಂಟ್ರಾಕ್ಟರ್ ಗಳಿಗೆ ತೊಂದರೆ ಆಗೋದು ಬೇಡ ಅಂತಾ ಹಣ ಬಿಡುಗಡೆ ಮಾಡಲಾಗ್ತಿದೆ ಎಂದು ತಿಳಿಸಿದರು.

ರಾಜಕಾರಣದಲ್ಲಿ ಕೆಲಸ ಇಲ್ಲದೇ ಇದ್ದಾಗ ಮಾತಾಡ್ತಾರೆ. ಮಾಧ್ಯಮದವ್ರ ಗಮನ ಸೆಳೆಯಲು ಆರೋಪ ಮಾಡ್ತಾರೆ. ನಾವು ಬದುಕಿದ್ದೀವಿ ಅಂತಾ ತೋರಿಸಿಕೊಳ್ಳಬೇಕಲ್ಲಾ ಅದಕ್ಕೆ. ಚೆಲುವರಾಯಸ್ವಾಮಿ ದೂರು ಕೊಟ್ಟು ತನಿಖೆಗೆ ಹೇಳಿದ್ದಾರೆ. ಸರ್ಕಾರದ ಗಮನ ಡೈವರ್ಷನ್ ಮಾಡಲು ಮಾಡ್ತಿದ್ದಾರೆ‌. ಅಕ್ಕಿ ವಿಚಾರದಲ್ಲಿ ಬಾಯಿಬಾಯಿ ಬಡ್ಕೊಂಡ್ರು. ಬಸ್, ಕರೆಂಟ್ ಎಲ್ಲಾ ಕೊಟ್ವಿ, ಪಾಪ ಇನ್ನೇನು ಮಾಡ್ಬೇಕು ಅವರು. ಆರೋಪ ಮಾಡಿ ಓಡೋಗೋರನ್ನು ಬಹಳ ಮಂದಿಯನ್ನ ನೋಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪಗಳಿಗೆ ಡಿಕೆ ಸುರೇಶ್ ತಿರುಗೇಟು ನೀಡಿದರು.

ಇದನ್ನೂ ಓದಿ- ಭ್ರಷ್ಟಾಚಾರದಲ್ಲಿ ಸಚಿವ ಚಲುವರಾಯಸ್ವಾಮಿಗೆ ಮೊದಲ ಸ್ಥಾನ: ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ

ಇರಿಗೇಷನ್, ಪಿಡಬ್ಲ್ಯೂಡಿ ಸೇರಿ ಯಾವ ಇಲಾಖೆಯಲ್ಲೂ ಹಣ ಕೊಟ್ಟಿಲ್ಲ. ಗುತ್ತಿಗೆದಾರರನ್ನು ರಾಜಕೀಯಕ್ಕೆ ಬಳಸಿಕೊಂಡರೂ ತಪ್ಪೇನಿಲ್ಲ. ಅವರು ರಾಜಕಾರಣಕ್ಕೇ ಇರುವಾಗ ಬಳಸಿಕೊಳ್ಳುತ್ತಿದ್ದಾರೆ. ಕ್ಷೇತ್ರಕ್ಕೆ ಹೋಗಲು ಆಗುವುದಿಲ್ಲ ಈಗ, ಅವರು ಇನ್ನು ನಾಲ್ಕು ವರ್ಷ ಬಿಟ್ಟೇ ಕ್ಷೇತ್ರಕ್ಕೆ ಹೋಗುವುದು. ಇಲ್ಲಿಯೇ ಇದ್ದು ಏನಾದರೂ ಮಾಡಬೇಕಲ್ಲ ಅವರು?. ಕೆಲಸ ಇಲ್ಲದಾಗ ರಾಜಕೀಯ ಮಾಡಲೇಬೇಕಲ್ಲ. ಹೀಗೇ ಬದುಕಬೇಕಲ್ಲ ಅವರು ಅದಕ್ಕಾಗಿಯೇ ಆರೋಪ ಮಾಡ್ತಿದ್ದಾರೆ ಎಂದು ತಿಳಿಸಿದರು.

ಯಾರೇ ಬಂದರೂ ಸ್ವಾಗತ: 
ಅನ್ಯ ಪಕ್ಷದವರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ ಅಥಾವ ಬೇಡವಾ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪ್ರಾಥಮಿಕವಾಗಿ ನನಗೆ ಯಾವ ವಿಚಾರವೂ ಗೊತ್ತಿಲ್ಲ. ನಾನು ಕ್ಷೇತ್ರದ ಕಡೆ ಹೆಚ್ಚು ಒತ್ತು ಕೊಡುತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.

ಸುಧಾಮ್ ದಾಸ್ ಹೆಸರು ನಾಮನಿರ್ದೇಶನಕ್ಕೆ ವಿರೋಧದ ವಿಚಾರವಾಗಿ ಮಾತನಾಡಿದ ಅವರು, ನನ್ನ ಹೆಸರಿಗೂ ವಿರೋಧವಿದೆ‌, ಏನು ಮಾಡಲು ಆಗುತ್ತೆ. ಪಕ್ಷದ ತೀರ್ಮಾನ ಮಾಡಿದೆ ಎಂದು ಸುಧಾಮ್ ದಾಸ್ ಪರ ಡಿಕೆ ಸುರೇಶ್ ಬ್ಯಾಟಿಂಗ್ ಮಾಡಿದರು.

ಇದನ್ನೂ ಓದಿ- ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ದೇಶದ ಹಣ ಲೂಟಿ ಹೊಡೆಯುವ ಚಿಂತೆ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ!

ಲೋಕಸಭೆ ಎಲೆಕ್ಷನ್ ಬಗ್ಗೆ ವರಿಷ್ಠರು ಸಭೆ ನಡೆಸಿದ್ದಾರೆ. ರಾಜ್ಯದ ಎಲ್ಲಾ ಮಂತ್ರಿ, ನಾಯಕರಿಗೆ ತಯಾರಿ ಮಾಡಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಮುಂದೆ ಸರ್ಕಾರ ಯಾವ ರೀತಿ ನಡೆದುಕೊಂಡು ಹೋಗಬೇಕು. ಅಭ್ಯರ್ಥಿ ಆಯ್ಕೆ ಮಾನದಂಡ ಹೇಗಿರಬೇಕು ಎಂದು ಹೇಳಿದ್ದಾರೆ. ಅಭ್ಯರ್ಥಿ ಆಯ್ಕೆ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News