ಹೆಸರು ಬದಲಾವಣೆ ಹಿಂದೆ ತುಷ್ಟೀಕರಣ ಅಜೆಂಡಾ: ರಾಮನಗರ ಜಿಲ್ಲೆ ಹೆಸರು ಬದಲಿಗೆ ನಿಖಿಲ್ ಕುಮಾರಸ್ವಾಮಿ ವಿರೋಧ

ಬೆಂಗಳೂರು: ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೇವಲ ಕೆಲವರನ್ನು ತುಷ್ಟೀಕರಣ ಮಾಡಲಿಕ್ಕೆ ಮಾತ್ರ ರಾಮನಗರ ಹೆಸರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

Written by - Prashobh Devanahalli | Last Updated : Jul 9, 2024, 07:41 PM IST
    • ಕೆಲವರನ್ನು ತುಷ್ಟೀಕರಣ ಮಾಡಲಿಕ್ಕೆ ರಾಮನಗರ ಹೆಸರನ್ನು ಬದಲಾವಣೆ
    • ರಿಯಲ್ ಎಸ್ಟೇಟ್ ದಂಧೆಕೋರರಿಗೆ ಜಿಲ್ಲೆಯನ್ನು ಸ್ವರ್ಗವನ್ನಾಗಿ ಮಾಡುವುದು ಈ ಷಡ್ಯಂತ್ರ್ಯ
    • ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರೋಧ
ಹೆಸರು ಬದಲಾವಣೆ ಹಿಂದೆ ತುಷ್ಟೀಕರಣ ಅಜೆಂಡಾ: ರಾಮನಗರ ಜಿಲ್ಲೆ ಹೆಸರು ಬದಲಿಗೆ ನಿಖಿಲ್ ಕುಮಾರಸ್ವಾಮಿ ವಿರೋಧ title=
Nikhil Kumaraswamy

ಬೆಂಗಳೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಿಸುವುದಕ್ಕೆ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೇವಲ ಕೆಲವರನ್ನು ತುಷ್ಟೀಕರಣ ಮಾಡಲಿಕ್ಕೆ ಮಾತ್ರ ರಾಮನಗರ ಹೆಸರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಈಕೆ ಜೊತೆ ನನ್ನ ಮದುವೆ… ಕೊನೆಗೂ ತನ್ನ ಮನದರಸಿ ಯಾರೆಂದು ರಿವೀಲ್ ಮಾಡಿದ ಕ್ರಿಕೆಟಿಗ ಕುಲ್ದೀಪ್

ಪುರಾಣ ಪ್ರಸಿದ್ಧವಾದ ರಾಮನಗರ ಹೆಸರನ್ನು ಕಿತ್ತುಹಾಕಿ, ಅದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದರಲ್ಲಿ ಯಾವ ಹಿಡೆನ್ ಅಜೆಂಡಾ ಅಡಗಿದೆಯೋ ಗೊತ್ತಿಲ್ಲ. ಆದರೆ, ಯಾರನ್ನು ಓಲೈಸಲು ರಾಮನಗರ ಹೆಸರಿಗೆ ಗೇಟ್ ಪಾಸ್ ನೀಡಲಾಗುತ್ತಿದೆ ಎನ್ನುವ ಒಳಗುಟ್ಟು ಮಾತ್ರ ರಟ್ಟಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಯಲ್ ಎಸ್ಟೇಟ್ ದಂಧೆಕೋರರಿಗೆ ಜಿಲ್ಲೆಯನ್ನು ಸ್ವರ್ಗವನ್ನಾಗಿ ಮಾಡುವುದು ಈ ಷಡ್ಯಂತ್ರ್ಯದ ಕರಾಳಮುಖ. ಕೆಲವರ ತುಷ್ಟೀಕರಣ ಮತ್ತೊಂದು ಮುಖ. ರಾಜಕೀಯವಾಗಿ ಬಹಳ ಎತ್ತರದ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯ ಹೆಗ್ಗುರುತನ್ನೇ ಸರ್ವನಾಶ ಮಾಡುವ ಹುನ್ನಾರ ನಡೆದಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ಗರ್ಲ್’ಫ್ರೆಂಡ್ ಆತ್ಮಹತ್ಯೆ ನೋವು ಕಾಡುತ್ತಿದ್ದರೂ ದೇಶಕ್ಕಾಗಿ ಆಡುತ್ತಾ ಮಿಂಚುತ್ತಿದ್ದಾನೆ ಟೀಂ ಇಂಡಿಯಾದ ಈ ಕ್ರಿಕೆಟಿಗ! ಆತ ಬೇರಾರು ಅಲ್ಲ…

ವಿಧಾನಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯನವರು, ಈ ದೇಶದ ಪ್ರಧಾನಿಗಳಾಗಿದ್ದ ಹೆಚ್.ಡಿ.ದೇವೇಗೌಡರು, ಎರಡು ಬಾರಿ ರಾಜ್ಯ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದರು. ಜಿಲ್ಲೆಯ ಹೆಸರು ಬದಲಿಸಲು ಹೊರಟವರು ಮೊದಲು ಈ ಇತಿಹಾಸ ಅರಿತರೆ ಒಳ್ಳೆಯದು. ನಮ್ಮ ರಾಮನಗರ ನಮ್ಮ ಹೆಮ್ಮೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News