ಕಳೆದ ಸಾಲಿನಲ್ಲಿ ಫಿನ್ಲ್ಯಾಂಡ್ ಮತ್ತು ಕರ್ನಾಟಕದ ಮಧ್ಯೆ ಆಗಿದ್ದ ಒಪ್ಪಂದದಿಂದ ಸಾಕಷ್ಟು ಪ್ರಗತಿ

ಬೆಂಗಳೂರಿನಲ್ಲಿ 5 ಜಿ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿರುವ ಫಿನ್ಲ್ಯಾಂಡ್ನ ನೋಕಿಯಾ ಕಂಪನಿ, ಸ್ಟಾರ್ಟ್ಅಪ್ಗಳಿಗೆ  ಹೊಸ ತಂತ್ರಜ್ಞಾನದ ನೆರವು ಮತ್ತು ತರಬೇತಿಯನ್ನು ನೀಡುತ್ತಿರುವ ಬಗ್ಗೆ ಪ್ರಸ್ತಾಪ.  

Last Updated : Oct 5, 2018, 10:04 AM IST
ಕಳೆದ ಸಾಲಿನಲ್ಲಿ ಫಿನ್ಲ್ಯಾಂಡ್ ಮತ್ತು ಕರ್ನಾಟಕದ ಮಧ್ಯೆ ಆಗಿದ್ದ ಒಪ್ಪಂದದಿಂದ ಸಾಕಷ್ಟು   ಪ್ರಗತಿ title=

ಬೆಂಗಳೂರು: ಫಿನ್ಲ್ಯಾಂಡ್ ರಾಯಭಾರಿಗಳಾದ ನೀನಾ ವಾಸ್ಕುನ್ಲಾಹತಿ ಅವರು ನಿನ್ನೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಕಳೆದ ಸಾಲಿನಲ್ಲಿ ಫಿನ್ಲ್ಯಾಂಡ್ ಮತ್ತು ಕರ್ನಾಟಕದ ಮಧ್ಯೆ ಆಗಿದ್ದ ಒಪ್ಪಂದದಿಂದ ಸಾಕಷ್ಟು ಪ್ರಗತಿಯಾಗಿದ್ದು, ಈ ಒಪ್ಪಂದವನ್ನು ಕೈಗಾರಿಕೆ, ಶಿಕ್ಷಣ ಮತ್ತು ಇಂಧನ ಕ್ಷೇತ್ರಗಳನ್ನು ಒಳಗೊಂಡಂತೆ ಮತ್ತಷ್ಟು ವಿಸ್ತೃತಗೊಳಿಸಿ ಮುಂದುವರೆಸಲು ಫಿನ್ಲ್ಯಾಂಡ್ ಉತ್ಸುಕವಾಗಿದೆ ಎಂದು ನೀನಾ ವಾಸ್ಕುನ್ಲಾಹತಿ ತಿಳಿಸಿದರು. 

ನವೆಂಬರ್ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಫಿನ್ಲ್ಯಾಂಡ್ನ ವ್ಯವಹಾರ ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವರು ಭಾಗವಹಿಸಲಿದ್ದಾರೆ ಎಂದು ಅವರು ಈ ಸಮಯದಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿ 5 ಜಿ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿರುವ ಫಿನ್ಲ್ಯಾಂಡ್ನ ನೋಕಿಯಾ ಕಂಪನಿ, ಸ್ಟಾರ್ಟ್ಅಪ್ಗಳಿಗೆ  ಹೊಸ ತಂತ್ರಜ್ಞಾನದ ನೆರವು ಮತ್ತು ತರಬೇತಿಯನ್ನು ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. 

ಕರ್ನಾಟಕದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಇತರೆ ಕ್ಷೇತ್ರಗಳಿಗೂ ವಿಸ್ತರಿಸಲು ಫಿನ್ಲ್ಯಾಂಡ್ ತೋರಿಸಿರುವ ಆಸಕ್ತಿಯನ್ನು ಸ್ವಾಗತಿಸಿದ ಮುಖ್ಯಮಂತ್ರಿಗಳು ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ ಎಂದರು. ಈ ನಡೆ ಎರಡೂ ಪ್ರಾಂತ್ಯಗಳ ನಡುವಿನ ಸಾಮರಸ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ:ಇ.ವಿ.ರಮಣರೆಡ್ಡಿ, ಕಾರ್ಯದರ್ಶಿ ಡಾ: ಸೆಲ್ವಕುಮಾರ್ ಉಪಸ್ಥಿತರಿದ್ದರು.

Trending News