ಯಾರನ್ನೂ ನಂಬಕ್ಕಾಗಲ್ಲ- ಜೀವಭಯ ಹೊರಹಾಕಿದ ಡಿ.ಕೆ.ಶಿವಕುಮಾರ್

ನನಗೆ ಯಾರೂ ಮಾಲೆ ಹಾಕಬೇಡಿ; ಚುನಾವಣೆಯಲ್ಲಿ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಗೆಲುವಿನ ಮಾಲೆ ಹಾಕಿ-  ಭಾರತ್ ಜೋಡೋ ಯಾತ್ರೆಯ ಫೂರ್ವಭಾವಿ ಸಭೆಯಲ್ಲಿ  ಡಿ.ಕೆ. ಶಿವಕುಮಾರ್ 

Written by - Yashaswini V | Last Updated : Sep 14, 2022, 03:12 PM IST
  • ನನಗೆ ಯಾರೂ ಮಾಲೆ ಹಾಕಬೇಡಿ
  • ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರುವವರೂ ಅಷ್ಟೇ ಮಾಲೆ ಎಲ್ಲಾ ತರಬೇಡಿ
  • ಚುನಾವಣೆಯಲ್ಲಿ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಗೆಲುವಿನ ಮಾಲೆ ಹಾಕಿ- ಭಾರತ್ ಜೋಡೋ ಯಾತ್ರೆಯ ಫೂರ್ವಭಾವಿ ಸಭೆಯಲ್ಲಿ ಡಿ.ಕೆ. ಶಿವಕುಮಾರ್
ಯಾರನ್ನೂ ನಂಬಕ್ಕಾಗಲ್ಲ- ಜೀವಭಯ ಹೊರಹಾಕಿದ ಡಿ.ಕೆ.ಶಿವಕುಮಾರ್ title=
Bharat Jodo Yatra

ಚಾಮರಾಜನಗರ: ನಮ್ಮ ಕೈಯನ್ನೇ ಈಗ ನಂಬಕ್ಕಾಗಲ್ಲ- ಯಾರು ಏನು-ಹೇಗೆ ಅಂತ ಗೊತ್ತಿರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೀವಭಯ ಇದ್ದಂತೆ ಮಾತನಾಡಿದ ಘಟನೆ ಕೊಳ್ಳೇಗಾಲದಲ್ಲಿ ನಡೆಯಿತು. 

ಕೊಳ್ಳೇಗಾಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಫೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನನಗೆ ಯಾರೂ ಮಾಲೆ ಹಾಕಬೇಡಿ; ಚುನಾವಣೆಯಲ್ಲಿ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಗೆಲುವಿನ ಮಾಲೆ ಹಾಕಿ ಎಂದರು. ಮಾತು ಮುಂದುವರೆಸಿದ ಡಿಕೆಶಿ ರಾಜೀವ್ ಗಾಂಧಿ ಅವರನ್ನು ಯಾರು ಕೊಂದಿದ್ದು ಹಾರ ಹಾಕಲು ಬಂದವರು, ಇಂದಿರಾ ಗಾಂಧಿ ಅವರನ್ನು ಗನ್ ಮ್ಯಾನ್ ಗುಂಡಿಟ್ಟ ಆದ್ದರಿಂದ ಯಾರನ್ನು ನಾವು ನಂಬುವಂತಿಲ್ಲ- ನಮ್ಮ ಕೈಯನ್ನೆ ನಾವು ನಂಬುವಂತಿಲ್ಲ ಎಂದರು. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರುವವರೂ ಅಷ್ಟೇ ಮಾಲೆ ಎಲ್ಲಾ ತರಬೇಡಿ, ನನಗೂ ತರಬೇಡಿ, ಬಹಳ ಹುಷರಾಗಿರಬೇಕೆಂದು ಎಂದರು.

ಇದನ್ನೂ ಓದಿ- ಭಾರತ್ ಜೋಡೋ ಸಭೆಗೆ ನನ್ನ ಕರೆದಿಲ್ಲ, ನಾನ್ಯಾಕೆ ಬರಲಿ? : ಸಿದ್ದರಾಮಯ್ಯ

ಕದ ತಟ್ಟಿದರೇ ಕಾಸು: 
ಯಡಿಯೂರಪ್ಪ ಹಾಗೂ ಬೊಮ್ಮಾಯಿ ಬಂದ ಬಳಿಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವ ಸರ್ಕಾರಿ ಕಚೇರಿ ಬಾಗಿಲು ತಟ್ಟಿದರೂ ಸಾಕು ಅಧಿಕಾರಿಗಳು ಕಾಸು-ಕಾಸು ಎಂದು ಲಂಚ ಕೇಳುತ್ತಾರೆ. ಕಮಿಷನ್ ಪಡೆಯುವುದು 40% ಗೆ ತಲುಪಿದೆ. ಸರ್ಕಾರಿ ನೌಕರಿ ಪಡೆಯಬೇಕಾದರೇ 50,60 ಲಕ್ಷ 1 ಕೋಟಿ ಕೊಟ್ಟಿದ್ದಾರೆ. ಪೊಲೀಸ್ ನೇಮಕಾತಿಯಲ್ಲಿ ಉತ್ತರ ಪತ್ರಿಕೆಗಳೇ ಬದಲಾಗಿದೆ, ಕೋಟಿ ಕೊಟ್ಟು ಕೆಲಸ ತೆಗೆದುಕೊಂಡಾತ ಸುಮ್ಮನಿರ್ತಾನಾ ಎಂದು ಪ್ರಶ್ನಿಸಿದರು. 

ಇದನ್ನೂ ಓದಿ- "ಕನ್ನಡ ಕಡ್ಡಾಯ" ಕಾನೂನು ಇದೇ ಅಧಿವೇಶನದಲ್ಲಿ ಮಂಡನೆ: ಸಿಎಂ ಬೊಮ್ಮಾಯಿ

ಒಂದು ಕ್ಷೇತ್ರದಿಂದ ಕನಿಷ್ಠ 10 ಸಾವಿರ ಬರಬೇಕು: 
ರಾಜ್ಯದಲ್ಲಿ ಗುಂಡ್ಲುಪೇಟೆ ಮಾರ್ಗದ ಮೂಲಕ ಭಾರತ್ ಜೋಡೋ ಯಾತ್ರೆ ಆರಂಭಗೊಳ್ಳುತ್ತಿದ್ದು ಜಿಲ್ಲೆಯ ಒಂದೊಂದು ಕ್ಷೇತ್ರಗಳಿಂದ ಕನಿಷ್ಠ 10 ಸಾವಿರ ಮಂದಿ ಕಾರ್ಯಕರ್ತರು ಭಾಗಿಯಾಗಬೇಕು, ಮದುವೆಗೆ ಕರೆದಂತೆ ಕರಪತ್ರ ಹಿಡಿದು ಜನರಿಗೆ ಈ ಯಾತ್ರೆ ವಿಚಾರ ಮುಟ್ಟಿಸಿ ಕರೆತನ್ನಿ ಎಂದು ಮುಖಂಡರಿಗೆ ಸೂಚಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ಕೇರಳದ ಕಾಂಗ್ರೆಸ್ ಶಾಸಕ ರೋಸ್ ಜಾನ್ ಇದ್ದರು. ಕೊಳ್ಳೇಗಾಲ ಕಾರ್ಯಕ್ರಮ ಬಳಿಕ ಚಾಮರಾಜನಗರ, ಗುಂಡ್ಲುಪೇಟೆಯಲ್ಲೂ ಫೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News