ಈ ಬಾರಿ ಶಾಲಾ ಮಕ್ಕಳಿಗಿಲ್ಲ ಬೇಸಿಗೆ ರಜೆ..!?

ರಾಜ್ಯದಲ್ಲಿ ಕೊರೋನಾದಿಂದಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಏರುಪೇರಾಗಿರುವ ಪರಿಣಾಮ ಈ ಬಾರಿ ಬೇಸಿಗೆ ರಜೆಗೂ ಕೊಕ್ಕೆ ಬೀಳುವ ಸಾಧ್ಯತೆ

Last Updated : Dec 17, 2020, 08:17 PM IST
  • ರಾಜ್ಯದಲ್ಲಿ ಕೊರೋನಾದಿಂದಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಏರುಪೇರಾಗಿರುವ ಪರಿಣಾಮ ಈ ಬಾರಿ ಬೇಸಿಗೆ ರಜೆಗೂ ಕೊಕ್ಕೆ ಬೀಳುವ ಸಾಧ್ಯತೆ
  • ಕೊರೊನಾ ಮಹಾಮಾರಿ ಕಡಿಮೆಯಾಗುತ್ತಿದ್ದರೂ ಮುನ್ನೆಚ್ಚರಿಕ ಕ್ರಮವಾಗಿ ಸರ್ಕಾರ ಸದ್ಯಕ್ಕೆ ಆನ್‍ಲೈನ್ ಮೂಲಕವೇ ಪಾಠ- ಪ್ರವಚನಕ್ಕೆ ಆವಕಾಶ
  • ಡಿಸೆಂಬರ್ ತಿಂಗಳ ಅಂತ್ಯದಿಂದ ಫೆಬ್ರವರಿ ತಿಂಗಳವರೆಗೂ ರಾಜ್ಯದಲ್ಲಿ ಎರಡನೇ ಕೋವಿಡ್ ಆಲೆ ಬರಬಹುದೆಂದು ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ
ಈ ಬಾರಿ ಶಾಲಾ ಮಕ್ಕಳಿಗಿಲ್ಲ ಬೇಸಿಗೆ ರಜೆ..!? title=

ಬೆಂಗಳೂರು: ರಾಜ್ಯದಲ್ಲಿ ಕೊರೋನಾದಿಂದಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಏರುಪೇರಾಗಿರುವ ಪರಿಣಾಮ ಈ ಬಾರಿ ಬೇಸಿಗೆ ರಜೆಗೂ ಕೊಕ್ಕೆ ಬೀಳುವ ಸಾಧ್ಯತೆ ಇದೆ. ಡಿಸೆಬರ್ ತಿಂಗಳು ಮುಗಿಯುತ್ತಾ ಬಂದರೂ ರಾಜ್ಯದಲ್ಲಿ ಈ ವರೆಗೂ ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಕೊರೊನಾ ಮಹಾಮಾರಿ ಕಡಿಮೆಯಾಗುತ್ತಿದ್ದರೂ ಮುನ್ನೆಚ್ಚರಿಕ ಕ್ರಮವಾಗಿ ಸರ್ಕಾರ ಸದ್ಯಕ್ಕೆ ಆನ್‍ಲೈನ್ ಮೂಲಕವೇ ಪಾಠ- ಪ್ರವಚನಕ್ಕೆ ಆವಕಾಶ ನೀಡಿದೆ.

ಮುಚ್ಚಿರುವ ಶಾಲೆಗಳನ್ನು ಆರಂಭಿ ಸುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಸರ್ಕಾರ ಕೂಡ ಈವರೆಗೂ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಿಸೆಂಬರ್ ತಿಂಗಳ ಅಂತ್ಯದಿಂದ ಫೆಬ್ರವರಿ ತಿಂಗಳವರೆಗೂ ರಾಜ್ಯದಲ್ಲಿ ಎರಡನೇ ಕೋವಿಡ್(Covid-19) ಆಲೆ ಬರಬಹುದೆಂದು ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ವಿದ್ಯಾರ್ಥಿ ವೇತನಕ್ಕೆ ವಿಕಲಚೇತನರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಹೀಗಾಗಿ ಸರ್ಕಾರವು ಮುಂಜಾಗೃತ ಕ್ರಮವಾಗಿ ಹಲವು ತ್ವರಿತ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ವರ್ಷಾರಣೆ ನಡೆಸದಂತೆ ಈಗಾಗಲೇ ನಿರ್ಬಂಧ ಹಾಕಲಾಗಿದೆ. ಇದರ ನಡುವೆ ಈ ಬಾರಿ ಶೈಕ್ಷಣಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಮುಗಿಯದ ಹಿನ್ನಲೆ, ಬೇಸಿಗೆ ರಜೆಯಲ್ಲೂ ಆನ್ ಲೈನ್ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ.

ಕೈಲಾಸಕ್ಕೆ ಬರಲು ವೀಸಾ ಆಫರ್ ನೀಡಿದ ನಿತ್ಯಾನಂದ..!

ಒಂದು ವೇಳೆ ಇದು ಜಾರಿಯಾದರೆ, ಕೋವಿಡ್ ಕಾರಣ ಕಳೆದ ಏಳೆಂಟು ತಿಂಗಳಿಂದ ರಜೆಯಲ್ಲಿರುವ ವಿದ್ಯಾರ್ಥಿಗಳು ಮುಂದಿನ ವರ್ಷ ಬೇಸಿಗೆ ರಜೆಯಲ್ಲಿಯೂ ಶಾಲೆಗೆ ಹೋಗಬೇಕಾಗಿ ಬರಬಹುದು. ಬಹುತೇಕ ಜನವರಿಯಿಂದ ಶಾಲಾ ತರಗತಿಗಳನ್ನು ಹಂತಹಂತವಾಗಿ ಆರಂಭವಾಗುವ ಸಾಧ್ಯತೆ ಇದ್ದು ಬೇಸಿಗೆ ರಜೆ ಕಡಿತ ಮಾಡಿ ಪಾಠ ಪ್ರವಚನ ಮುಂದುವರಿಸುವುದು ಸರಕಾರದ ಐಡಿಯಾ ಆಗಿದೆ.

'ಜನವರಿ ಮೊದಲ ವಾರವೇ ಸಂಪುಟ ವಿಸ್ತರಣೆ'

ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳು ಪಾಠ ಕಲಿಕೆಯಿಂದ ವಂಚಿತರಾಗುವುದನ್ನು ತಪ್ಪಿಸಬಹುದು ಎಂಬುದು ಶಿಕ್ಷಣ ಅಧಿಕಾರಿಗಳ ಎಣಿಕೆ. ಶೈಕ್ಷಣಿಕ ವರ್ಷವನ್ನು ಹಿಗ್ಗಿಸುವ ಮೂಲಕ ಕಳೆದುಹೋದ ಸಮಯವನ್ನು ಆದಷ್ಟೂ ಸರಿದೂಗಿಸಬಹುದು ಎಂಬ ಚಿಂತನೆ ಸರಕಾರದ ಮಟ್ಟದಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಕೋವಿಡ್‍ನಿಂದಾಗಿ ಮುಚ್ಚಿರುವ ಶಾಲೆಗಳ ಪುನಾರಾಂಭದ ಬಗ್ಗೆ ಮಾಸಾಂತ್ಯಕ್ಕೆ ಸರಕಾರದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಮೂರು ತಿಂಗಳಲ್ಲಿ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ - ಸಚಿವ ಸಿ.ಸಿ.ಪಾಟೀಲ

Trending News