ಓಲಾ ಕ್ಯಾಬ್ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ

   

Last Updated : Dec 6, 2017, 06:38 PM IST
ಓಲಾ ಕ್ಯಾಬ್ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ  title=

ಬೆಂಗಳೂರು : ರಾತ್ರಿ ನಿರ್ಜನ ಪ್ರದೇಶದಲ್ಲಿ ಕಾರಿನ ಚೈಲ್ಡ್ ಲಾಕ್ ಮಾಡಿ ಬಂಧನದಲ್ಲಿರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಓಲಾ ಕ್ಯಾಬ್ ಚಾಲಕನ ಕಪಿಮುಷ್ಠಿಯಿಂದ ಯುವತಿಯೊಬ್ಬಳು ಪಾರಾಗಿದ್ದಾಳೆ.

ಯುವತಿಯು 23 ವರ್ಷದ ಫ್ಯಾಷನ್ ಡಿಸೈನರ್ ಆಗಿದ್ದು, ಕಳೆದ ಭಾನುವಾರ ಇಂದಿರಾ ನಗರದಿಂದ ಬಿಟಿಎಂ ಲೇಔಟ್​ಗೆ ಕ್ಯಾಬ್​ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಕ್ಯಾಬ್​ ರಿಂಗ್ ರಸ್ತೆಯ ನಿರ್ಜನ ಪ್ರದೇಶ ಪ್ರವೇಶಿಸುತ್ತಿದ್ದಂತೆ ಚಾಲಕ ರಸ್ತೆ ಬದಿ ಕಾರು ನಿಲ್ಲಿಸಿ, ಕಾರಿನ ಚೈಲ್ಡ್ ಲಾಕ್ ಮಾಡಿ ಯುವತಿ ಜತೆ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿ, ದಿಢೀರನೆ ಕ್ಯಾಬ್​ ನಿಲ್ಲಿಸಿದಾಗ ಸುತ್ತ ಮುತ್ತ ಯಾರು ಇರಲಿಲ್ಲ. ತಕ್ಷಣ ಚಾಲಕ ಬಂದು ನನ್ನ ಕಾಲನ್ನು ಮುಟ್ಟಿದ. ಭಯದಿಂದಲೇ ನಾನು ಆತನಿಗೆ ಎಚ್ಚರಿಕೆ ನೀಡಿದೆ. ನಂತರ ಕಾರಿಗೆ ಹಾನಿ ಮಾಡಲು ಪ್ರಯತ್ನಿಸಿದಾಗ ಆತನೇ ಬಾಗಿಲು ತೆರೆದ. ನಂತರ ಅಲ್ಲಿಂದ 500 ಮೀಟರ್​ ಓಡಿ ಆಟೋವನ್ನು ಹಿಡಿದೆ. 

ನಂತರವೂ ಆತ ನನಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ, ಆತನ ನಂಬರ್​ ಅನ್ನು ಬ್ಲಾಕ್​ ಮಾಡಿ ಠಾಣೆಗೆ ದೂರು ನೀಡಿದೆ ಎಂದು ತಿಳಿಸಿದ್ದಾಳೆ.

Trending News