ಬೆಂಗಳೂರು: ಕೋಮುದ್ವೇಷ ಕಕ್ಕುವುದು ಮತ್ತು ಎಲ್ಲದಕ್ಕೂ ನನ್ನ ಹೆಸರು ಎಳೆದು ತರುವುದು ಸಿ.ಟಿ.ರವಿ(CT Ravi) ಅವರಿಗೆ ಮಾನಸಿಕ ರೋಗವಾಗಿಬಿಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಕಿಡಿಕಾರಿದ್ದಾರೆ. #ArrestCTRavi ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ಗೋರಿಪಾಳ್ಯದ ಚಂದ್ರು ಮರ್ಡರ್ ಕೇಸ್(Goripalya Chandru Murder Case) ಸಂಬಂಧಿಸಿದಂತೆ ಸಿಟಿ ರವಿ ನೀಡಿದ್ದ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಬೈಕ್ ಡಿಕ್ಕಿಗೆ ಸಂಬಂಧಿಸಿದ ಗಲಾಟೆಯಲ್ಲಿ ನಡೆದ ಕೊಲೆಯಲ್ಲೂ ಭಾಷೆ, ಧರ್ಮ ಎಳೆದುತಂದು ಸಮಾಜಕ್ಕೆ ಬೆಂಕಿ ಹಚ್ಚುವ ಸಿಟಿ ರವಿ(CT Ravi)ಯಂತಹ ಕೋಮು ತಂಟೆಕೋರರ ವಿರುದ್ಧ ಪೊಲೀಸರು ಮೊದಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಗೋರಿಪಾಳ್ಯದ ಕೊಲೆ ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸ್ ಮಹಾನಿರ್ದೇಶಕರು ಹೇಳಿಕೆ ನೀಡಿ, ಇದು ವೈಯಕ್ತಿಕ ಘರ್ಷಣೆಯಿಂದ ನಡೆದ ಹತ್ಯೆ, ಭಾಷೆ ವಿಚಾರಕ್ಕೆ ಅಲ್ಲ ಎಂದು ಹೇಳಿದ್ದಾರೆ.
ಕೋಮುದ್ವೇಷ ಕಕ್ಕುವುದು ಮತ್ತು ಎಲ್ಲದಕ್ಕೂ ನನ್ನ ಹೆಸರು ಎಳೆದು ತರುವುದು @CTRavi_BJP ಅವರಿಗೆ ಮಾನಸಿಕ ರೋಗವಾಗಿ ಬಿಟ್ಟಿದೆ. 2/3#ArrestCTRavi
— Siddaramaiah (@siddaramaiah) April 6, 2022
ಇದನ್ನೂ ಓದಿ: ಕುಮಾರಸ್ವಾಮಿ ಬಳಿ ಕಣ್ಣೀರು ಮತ್ತು ಸುಳ್ಳಿಗೆ ಬರವಿಲ್ಲ!: ಬಿಜೆಪಿ ವ್ಯಂಗ್ಯ
‘ಗೋರಿಪಾಳ್ಯದ ಕೊಲೆ ಪ್ರಕರಣ(Goripalya Murder Case)ದ ಬಗ್ಗೆ ಈಗಾಗಲೇ ಪೊಲೀಸ್ ಮಹಾನಿರ್ದೇಶಕರು ಹೇಳಿಕೆ ನೀಡಿ, ಇದು ವೈಯಕ್ತಿಕ ಘರ್ಷಣೆಯಿಂದ ನಡೆದ ಹತ್ಯೆ, ಭಾಷೆ ವಿಚಾರಕ್ಕೆ ಅಲ್ಲ ಎಂದು ಹೇಳಿದ್ದಾರೆ. ಕೋಮುದ್ವೇಷ ಕಕ್ಕುವುದು ಮತ್ತು ಎಲ್ಲದಕ್ಕೂ ನನ್ನ ಹೆಸರು ಎಳೆದು ತರುವುದು ಸಿಟಿ ರವಿ(CT Ravi)ಯವರಿಗೆ ಮಾನಸಿಕ ರೋಗವಾಗಿ ಬಿಟ್ಟಿದೆ’ ಎಂದು ಟೀಕಿಸಿದ್ದಾರೆ.
ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿಷಯದಲ್ಲಿ ಮೌನವಾಗಿದ್ದು ತಮಿಳುನಾಡಿಗೆ ನೆರವಾಗುವ, ಕನ್ನಡ ಭಾಷೆಯನ್ನು ಹತ್ತಿಕ್ಕಿ ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ದಮನಕಾರಿ ನಿಲುವನ್ನು ಬೆಂಬಲಿಸುವ @CTRavi_BJP ಅವರ ಒಂದು ಕಾಲು ಹೇಗೂ ರಾಜ್ಯದ ಹೊರಗಿದೆ, ಇನ್ನೊಂದು ಕಾಲನ್ನೂ ಎತ್ತಿ ಹೊರಗೆ ಹೋದರೆ ರಾಜ್ಯಕ್ಕೆ ಕ್ಷೇಮ. 3/3#ArrestCTRavi
— Siddaramaiah (@siddaramaiah) April 6, 2022
‘ಮೇಕೆದಾಟು(Mekedatu Project) ಕುಡಿಯುವ ನೀರಿನ ಯೋಜನೆ ವಿಷಯದಲ್ಲಿ ಮೌನವಾಗಿದ್ದು ತಮಿಳುನಾಡಿಗೆ ನೆರವಾಗುವ, ಕನ್ನಡ ಭಾಷೆಯನ್ನು ಹತ್ತಿಕ್ಕಿ ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ದಮನಕಾರಿ ನಿಲುವನ್ನು ಬೆಂಬಲಿಸುವ ಸಿಟಿ ರವಿಯವರ ಒಂದು ಕಾಲು ಹೇಗೂ ರಾಜ್ಯದ ಹೊರಗಿದೆ, ಇನ್ನೊಂದು ಕಾಲನ್ನೂ ಎತ್ತಿ ಹೊರಗೆ ಹೋದರೆ ರಾಜ್ಯಕ್ಕೆ ಕ್ಷೇಮ’ವೆಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ಕೋಮು ದ್ವೇಷಕ್ಕೆ ಕುಮ್ಮಕ್ಕು ನೀಡುವ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಲಿ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.