ಮಾನವೀಯತೆ ಮೆರೆದ ಸಿಎಂ ಕುಮಾರಸ್ವಾಮಿ, ಶಿಮ್ಲಾದಿಂದ ತವರಿಗೆ ಮರಳಿದ ಪದ್ಮ

'ನಾನು ಮನೆಗೆ ಹೋಗ್ಬೇಕು ನನ್ನ ಕರ್ಕೊಂಡು ಹೋಗಿ...' ಕಳೆದ ಎರಡು ವರ್ಷಗಳಿಂದ ಶಿಮ್ಲಾದಲ್ಲಿರುವ ಹಿಮಾಚಲ ಹಾಸ್ಪಿಟಲ್ ಆಫ್ ಮೆಂಟಲ್ ಹೆಲ್ತ್ ಅಂಡ್ ರಿಹೆಬಿಲಿಟೇಶನ್ (HHMHR) ನಲ್ಲಿದ್ದ ಪದ್ಮಾ ತವರಿಗೆ ಮರಳಿದ್ದಾರೆ.

Last Updated : Aug 2, 2018, 01:08 PM IST
ಮಾನವೀಯತೆ ಮೆರೆದ ಸಿಎಂ ಕುಮಾರಸ್ವಾಮಿ, ಶಿಮ್ಲಾದಿಂದ ತವರಿಗೆ ಮರಳಿದ ಪದ್ಮ title=
Pic: ANI

ಮೈಸೂರು: ಮಾನಸಿಕವಾಗಿ ಅಸ್ವಸ್ಥಳಾಗಿ ಭಾಷೆಯ ಕಾರಣದಿಂದ ಬೇರೆಯವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗದೆ ಶಿಮ್ಲಾದ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಪದ್ಮಾ ಎಂಬ ಮಹಿಳೆ, ಸಕಾಲಕ್ಕೆ ನೇರವಾಗಿ ಮಾನವೀಯತೆ ಮೆರೆದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಂದಾಗಿ ತನ್ನ ತವರಿಗೆ ಮರಳಿದ್ದಾರೆ.

ಶಿಮ್ಲಾದಿಂದ 217 ಕಿ.ಮೀ. ದೂರದಲ್ಲಿರುವ ಕಂಗ್ರಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಮಾಕನಹಳ್ಳಿಪಾಳ್ಯ, ಕಂಪಲಾಪುರ ಗ್ರಾಮದ ಪದ್ಮ ಎಂಬ ಮಹಿಳೆಯನ್ನು ಕಾಂಗ್ರಾದಲ್ಲಿರುವ ಡಾ. ರಾಜೇಂದ್ರ ಪ್ರಸಾದ್ ಎಂಬುವವರು ರಕ್ಷಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು ನಂತರ ಜೂನ್ 2016 ರಲ್ಲಿ HHMHR ನಲ್ಲಿ ದಾಖಲಿಸಿದರು. ಆಘಾತಗೊಂಡಿದ್ದರಿಂದ ಆ ಮಹಿಳೆ ಅಲ್ಲಿಗೆ ಹೇಗೆ ಬಂದರು ಎಂಬುದನ್ನು ಆಕೆಯಿಂದ ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ. 'ನಾನು ಮನೆಗೆ ಹೋಗ್ಬೇಕು ನನ್ನ ಕರ್ಕೊಂಡು ಹೋಗಿ' ಎಂದು ಪದ್ಮ ಹೇಳುತ್ತಿದ್ದರು. ಆದರೆ ಭಾಷಾ ಸಮಸ್ಯೆ ಇಂದಾಗಿ ಈಕೆ ಏನು ಹೇಳುತ್ತಿದ್ದರು ಎಂದು ಯಾರಿಗೂ ಅರ್ಥವಾಗುತ್ತಿರಲಿಲ್ಲ.

ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದ ಸಿಎಂ ಕುಮಾರಸ್ವಾಮಿ, ಮೈಸೂರು ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿ ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು, ಸೂಕ್ತ ಚಿಕಿತ್ಸೆ ಕೊಡಿಸಿ, ಆಶ್ರಯ ಒದಗಿಸುವಂತೆ ಸೂಚಿಸಿದ್ದರು.

ಇವರೆಲ್ಲರ ಪ್ರಯತ್ನದಿಂದಾಗಿ ಕೊನೆಗೂ ಪದ್ಮಾ ಅವರು ತವರಿಗೆ ಮರಳಿದ್ದಾರೆ. ಪದ್ಮಾ ಅವರ ಕುಟುಂಬ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಕರ್ನಾಟಕ ಸರ್ಕಾರ ನಿರ್ಗತಿಕ ಮಹಿಳೆಯರ ಕೇಂದ್ರ ಪದ್ಮಾ ಅವರ ಜವಾಬ್ದಾರಿ ವಹಿಸಿಕೊಂಡಿದೆ.

Trending News