BS Yediyurappa: 'ರಾಜ್ಯದಲ್ಲಿ ಕೊರೋನಾ ಪರಸ್ಥಿತಿ ಕೈ ಮೀರಿದೆ'

ವೈದ್ಯರ ಸಲಹೆಯ ಮೇರೆಗೆ ಮುಂದಿನ ಎರಡು ದಿನಗಳವರೆಗೆ ಮನೆಯಲ್ಲೇ ಇರುವ ಸಾಧ್ಯತೆ

Last Updated : Apr 22, 2021, 05:48 PM IST
  • ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್
  • ಕೋವಿಡ್ -19 ಪಾಸಿಟಿವ್ ಬಂದ ಕಾರಣ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು.
  • ವೈದ್ಯರ ಸಲಹೆಯ ಮೇರೆಗೆ ಮುಂದಿನ ಎರಡು ದಿನಗಳವರೆಗೆ ಮನೆಯಲ್ಲೇ ಇರುವ ಸಾಧ್ಯತೆ
BS Yediyurappa: 'ರಾಜ್ಯದಲ್ಲಿ ಕೊರೋನಾ ಪರಸ್ಥಿತಿ ಕೈ ಮೀರಿದೆ' title=

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ -19  ಪಾಸಿಟಿವ್ ಬಂದ ಕಾರಣ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು(BS Yediyurappa), ಇದು "ಅನಿಯಂತ್ರಿತ" ವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬೆಂಗಳೂರಿಗೆ ಗುಡ್ ನ್ಯೂಸ್ : ಮೆಟ್ರೋ ರೈಲು 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಅನುಮೋದನೆ

“ನಾನು ಉಷಾರಾಗಿದ್ದಾನೆ. ಇಂದು ಮನೆಯಲ್ಲಿ ಸಂಜೆ ಎಲ್ಲ ಮಂತ್ರಿಗಳ ಸಭೆ ಕರೆದಿದ್ದೇನೆ. ಅವರು ಜಿಲ್ಲೆಗಳಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್(P Ravi kumar) ನಿರ್ದೇಶನಗಳನ್ನು ನೀಡಲಾಗುತ್ತದೆ. ನಾನು ಸಚಿವರು ಮತ್ತು ಇತರರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : "ರಾಜ್ಯಗಳಿಗೆ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ"

ಸಿಎಂ ಯಡಿಯುರಪ್ಪ ಅವರು ವೈದ್ಯರ(Doctore) ಸಲಹೆಯ ಮೇರೆಗೆ ಮುಂದಿನ ಎರಡು ದಿನಗಳವರೆಗೆ ಮನೆಯಲ್ಲೇ ಇರುವ ಸಾಧ್ಯತೆ ಇದೆ. ಅವರ ಮನೆಯಲ್ಲೂ 3-4 ಜನರು ಸೋಂಕಿಗೆ ಒಳಗಾಗಿದ್ದಾರೆ. 

ಇದನ್ನೂ ಓದಿ : ರಾಜ್ಯದಾದ್ಯಂತ ನೈಟ್ ಕರ್ಪ್ಯೂ ಜಾರಿಗೊಳಿಸಿದ ಸರ್ಕಾರ

ನಾನು ಜನರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ: ಅನಗತ್ಯವಾಗಿ ನಿಮ್ಮ ಮನೆಗಳಿಂದ ಹೊರಹೋಗಬೇಡಿ. ಸಧ್ಯ  ಪರಿಸ್ಥಿತಿ ಕೈ ಮೀರಿ ಹೋಗಿದೆ. ನಮ್ಮ ಕೈಲಾದ ಎಲ್ಲ ರೀತಿಯ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ. ನೀವು ಮುಖಕ್ಕೆ ಮಾಸ್ಕ್(Mask) ಧರಿಸುವುದು, ಸ್ವಚ್ಛತೆಯಿಂದ ಇರುವುದು ಮತ್ತುಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಮಹತ್ವದಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : S Suresh Kumar: 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು : ರಾಜ್ಯ ಶಿಕ್ಷಣ ಇಲಾಖೆ ಆದೇಶ!

ಸರ್ಕಾರ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಂಡಿದೆ, ವಾರಾಂತ್ಯದ ಕರ್ಫ್ಯೂ(weekend curfew) ಅನ್ನು ಉಲ್ಲೇಖಿಸಿ ಅವರು ಹೇಳಿದರು. “ಪೊಲೀಸರು ಕ್ರಮ ತೆಗೆದುಕೊಳ್ಳುವಂತೆ ಮಾಡಬೇಡಿ. ನಾಗರಿಕರು ಸಹಕರಿಸುವಂತೆ ನಾನು ವಿನಂತಿಸುತ್ತೇನೆ.

ಇದನ್ನೂ ಓದಿ : K Sudhakar: 'ಕರ್ನಾಟಕದ ಕೊರೋನಾ ಕೇಂದ್ರಬಿಂದುವಾಗಿದೆ ಬೆಂಗಳೂರು'

ಸಿಎಂ ಯಡಿಯೂರಪ್ಪ ಅವರು ಏಪ್ರಿಲ್ 16 ರಂದು ಕರೋನವೈರಸ್ ಸೋಂಕಿ(Covid-19)ಗೆ ಒಳಗಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಳಗಾಗಿದ್ದರು, ಇದು ಒಂಬತ್ತು ತಿಂಗಳಲ್ಲಿ ಅವರಿಗೆ ಎರಡನೇ ಬಾರಿಗೆ ಕೋರೋಣ ಪಾಸಿಟಿವ್ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News