ಎಮರ್ಜೆನ್ಸಿ ವಾರ್ಡ್ ಫುಲ್.. ಬೆಡ್ ಇಲ್ಲ! ನಿಮ್ಹಾನ್ಸ್ ನಲ್ಲಿ ಗಂಟೆಗಟ್ಟಲೇ ಕಾಯ್ದರು ಸಿಗ್ತಿಲ್ಲ ಚಿಕಿತ್ಸೆ, ಇವರ ಗೋಳು ಕೇಳೋರು ಯಾರು?

Nimhans Hospital: ನರಳುತ್ತಾ ಜೀವ ಕೈಯಲ್ಲಿ ಹಿಡಿದು ಬರುವ ಜನರು ಗಂಟೆಗಟ್ಟಲೆ ಆಂಬುಲೆನ್ಸ್ ನಲ್ಲಿಯೇ ಕಾಯುವ ಸ್ಥಿತಿ. ಎಮರ್ಜೆನ್ಸಿ ವಾರ್ಡ್ ಫುಲ್.. ಬೆಡ್ ಇಲ್ಲ ಅಂತಾ ವೈದ್ಯರು. ಇದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಪರಿಸ್ಥಿತಿ.

Edited by - Chetana Devarmani | Last Updated : Feb 2, 2022, 10:52 AM IST
  • ಗಂಟೆಗಟ್ಟಲೆ ಆಂಬುಲೆನ್ಸ್ ನಲ್ಲಿಯೇ ಕಾಯುವ ಸ್ಥಿತಿ
  • ಎಮರ್ಜೆನ್ಸಿ ವಾರ್ಡ್ ಫುಲ್.. ಬೆಡ್ ಇಲ್ಲ ಅಂತಾರೆ ವೈದ್ಯರು
  • ಇದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಪರಿಸ್ಥಿತಿ
ಎಮರ್ಜೆನ್ಸಿ ವಾರ್ಡ್ ಫುಲ್.. ಬೆಡ್ ಇಲ್ಲ! ನಿಮ್ಹಾನ್ಸ್ ನಲ್ಲಿ ಗಂಟೆಗಟ್ಟಲೇ ಕಾಯ್ದರು ಸಿಗ್ತಿಲ್ಲ ಚಿಕಿತ್ಸೆ, ಇವರ ಗೋಳು ಕೇಳೋರು ಯಾರು? title=
ನಿಮ್ಹಾನ್ಸ್ ಆಸ್ಪತ್ರೆ

ಬೆಂಗಳೂರು: ವೈದ್ಯೋ ನಾರಾಯಣೋ ಹರಿಃ... ಎಂಬ ಮಾತಿದೆ. ಅಂದ್ರೆ ಎಲ್ಲರಿಗಿಂತ ಮಿಗಿಲಾದ ದೇವರಿಗೆ ಇಲ್ಲಿ ವೈದ್ಯರನ್ನು ಹೋಲಿಸುತ್ತಾರೆ. ಜೀವ ಕೊಡುವ ಶಕ್ತಿ ಆ ಭಗವಂತನಿಗೆ ಇದ್ದಾರೆ, ಅದನ್ನು ಉಳಿಸುವ ತಾಕತ್ತು ಇರುವುದು ವೈದ್ಯನಿಗೆ. ದೇವಾಲಯಗಳಿಗಿಂತ ಹೆಚ್ಚು ಪ್ರಾರ್ಥನೆಯನ್ನು ಆಸ್ಪತ್ರೆಯ ಗೋಡೆಗಳು ಕೇಳಿರುತ್ತವೆ. ಅದು ಕೇವಲ ತನಗೆ ಬೇಕಾದ ಜೀವ ಉಳಿಸು ಎಂಬ ನಿಸ್ವಾರ್ಥದ ಬೇಡಿಕೆ.

ಆಗುತ್ತಿರುವ ನೋವನ್ನು ತಡೆದುಕೊಂಡು, ತನ್ನ ಪ್ರಾಣ ಉಳಿಯುತ್ತೆ ಎಂಬ ಭರವಸೆಯಿಂದ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಆದರೆ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಅವರ ಪಾಡು ದೇವನಿಗೆ ಪ್ರಿಯ ಎಂಬಂತಾಗುತ್ತದೆ. ಇಲ್ಲಿಯೂ ಅದೇ ಕತೆ. 

ನರಳುತ್ತಾ ಜೀವ ಕೈಯಲ್ಲಿ ಹಿಡಿದು ಬರುವ ಜನರು ಗಂಟೆಗಟ್ಟಲೆ ಆಂಬುಲೆನ್ಸ್ ನಲ್ಲಿಯೇ ಕಾಯುವ ಸ್ಥಿತಿ. ಎಮರ್ಜೆನ್ಸಿ ವಾರ್ಡ್ ಫುಲ್.. ಬೆಡ್ ಇಲ್ಲ ಅಂತಾರೆ ವೈದ್ಯರು. ಇದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ (Nimhans Hospital) ಪರಿಸ್ಥಿತಿ.

ಇದನ್ನೂ ಓದಿ: ಆಡಳಿತದಲ್ಲಿ ಆಧುನಿಕತೆ ತರುವ, ಆರ್ಥಿಕತೆ ಸುಧಾರಣೆ ಮಾಡುವ ಬಜೆಟ್: ಸಿಎಂ ಬೊಮ್ಮಾಯಿ

ಆ್ಯಂಬುಲೆನ್ಸ್ ನಲ್ಲೇ (Ambulance) ಗಂಟೆಗಟ್ಟಲೇ ರೋಗಿಗಳು ಮಲಗಿ ಒದ್ದಾಡುವ ದೃಶ್ಯ ಕರಳು ಹಿಂಡುವಂತಿರುತ್ತೆ. ನರಳಿ ನರಳಿ ಪ್ರಾಣಬಿಟ್ರು ಹೇಳೋರಿಲ್ಲ ಕೇಳೋರಿಲ್ಲ. ಅಪಘಾತವಾಗಿ ಬರೊ ರೋಗಿಗಳಿಗೆ ಸಾವು ಒಂದೇ ದಾರಿ ಎಂಬ ದುಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ರೋಗಿಯ ನರಳಾಟ ಕಂಡು ಸಂಬಂಧಿಕರು ಕಣ್ಣೀರು ಹಾಕುವುದು ಸಾಮಾನ್ಯ ಎಂಬಂತಾಗಿದೆ. ಇತ್ತ ಆ್ಯಂಬುಲೆನ್ಸ್ ನಲ್ಲಿ ಮಲಗಿರುವ ರೋಗಿ ಕಡೆ ತಿರುಗಿಯೂ ನೋಡದ ವೈದ್ಯರು, ಬೇರೆ ಆಸ್ಪತ್ರೆಗೆ ರೆಫರ್ ಮಾಡಿ ಕಳುಹಿಸಲು ಕೂಡ ಯೋಚಿಸಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. 

ಅಪಘಾತವಾದ (Accident) ವ್ಯಕ್ತಿ ಜೊತೆಗೆ ಪೊಲೀಸರೇ ಬಂದರು ಕೇರ್ ಮಾಡುವವರು ಇಲ್ಲದಂತಾಗಿದೆ. ಜೀವನ್ ಭೀಮಾನಗರ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಗೆ ಅಪಘಾತವಾಗಿತ್ತು. ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ಈಚರ್ ವಾಹನ ಗುದ್ದಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ತಲೆಗೆ ಪೆಟ್ಟಾಗಿದ್ದರಿಂದ ಅಲ್ಲಿನ ವೈದ್ಯರು ನಿಮ್ಹಾನ್ಸ್ ಗೆ ರೆಫರ್ ಮಾಡಿದ್ದರು .

ಬೆಳಗ್ಗೆ 8 ಗಂಟೆಗೆ ಬಂದರೆ ಮಧ್ಯಾಹ್ನ 1 ಗಂಟೆ ಆದರು ಆಸ್ಪತ್ರೆ ಒಳಗೆ ಕರೆದು ಚಿಕಿತ್ಸೆ ನೀಡಿಲ್ಲ. ಬೆಡ್ ಭರ್ತಿಯಾಗಿದೆ (Bed Full) ಎಂದು ಹೊರಗೆಯೇ ಮಲಗಿಸಲಾಗಿತ್ತು. ಬೇರೆ ಆಸ್ಪತ್ರೆಗೆ ರೆಫರ್ ಮಾಡಿ ಬರೆದುಕೊಟ್ಟಿರಲಿಲ್ಲ. ಬಳಿಕ ಮಾಧ್ಯಮದವರನ್ನು ಕಂಡ ಆಸ್ಪತ್ರೆ ಸಿಬ್ಬಂದಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರೆಫರ್ ಮಾಡಿದರು.  

ಸಂಜೆ 5 ಗಂಟೆಗೆ ಅಪಘಾತವಾದ ವ್ಯಕ್ತಿ ಬಂದಿದ್ರು. ರಾತ್ರಿ 12 ಗಂಟೆ ಆದರೂ ನಿಮ್ಹಾನ್ಸ್ ಆಸ್ಪತ್ರೆ ಹೊರಗೆ ಮಲಗಿ, ನರಳಾಡುತ್ತಿದ್ದರು. ಒಂದರ ಹಿಂದೆ ಒಂದರಂತೆ 8 ಕ್ಕೂ ಹೆಚ್ಚು ಆಂಬುಲೆನ್ಸ್ ಬಂದಿದ್ವು. ಯಾರಿಗೂ ಚಿಕಿತ್ಸೆ ನೀಡದೇ ಆ್ಯಂಬುಲೆನ್ಸ್ ನಲ್ಲಿಯೇ ಇರಿಸಲಾಗಿತ್ತು. ಇದು ನಿಮ್ಹಾನ್ಸ್ ಆಸ್ಪತ್ರೆಯ ನೈಜ ಚಿತ್ರಣ. 

ಇದನ್ನೂ ಓದಿ: ಹೊಯ್ಸಳರ ದೇಗುಲಗಳನ್ನು ವಿಶ್ವ ಪಾರಂಪರಿಕ ಕೇಂದ್ರವೆಂದು ಪರಿಗಣಿಸಲು ನಾಮನಿರ್ದೇಶನ

ವಿಕ್ಟೋರಿಯಾಗೆ (Victoria) ಹೋದರೆ ಇಲ್ಲಿಗೆ ಕಳುಹಿಸ್ತಾರೆ. ಇಲ್ಲಿ ಬಂದ್ರೆ ಯಾರು ಕೇರ್ ಕೂಡ ಮಾಡೋದಿಲ್ಲ ಎಂದು ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ರೋಗಿಗಳ ಸಂಬಂಧಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. 

ಈಗಲಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಿದೆ. ಸೂಕ್ತ ಚಿಕಿತ್ಸೆ ಸಿಗದೇ ಆಸ್ಪತ್ರೆ ಬಾಗಿಲಲ್ಲಿ ಗಂಟೆಗಟ್ಟಲೇ ಕಾದು, ಪ್ರಾಣ ಕಳೆದುಕೊಳ್ಳುತ್ತಿರುವವರನ್ನು ರಕ್ಷಿಸಬೇಕಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News