ಸೇವಾ ನ್ಯೂನ್ಯತೆ ಎಸಗಿದ ಸಿಲ್ವರ್ ಬ್ರಿಕ್ ಬಿಲ್ಡರ್ ಮತ್ತು ಡೆವಲ್ಪರ್‍ಗೆ ದಂಡ ಮತ್ತು ಪರಿಹಾರ

ಹುಬ್ಬಳ್ಳಿಯ ಕೇಶ್ವಾಪುರ ನಗರದ ನೂತನ್‍ಜೈನ್ ಹಾಗೂ ಕಮಲೇಶ ಬಗ್ರೆಚಾ ಇಬ್ಬರೂ ದೂರುದಾರರು ಒಂದೇ ಕುಟುಂಬದವರಾಗಿದ್ದು, ಎದುರು ದಾರರಾದ ಸಿಲ್ವರ್ ಬ್ರಿಕ್ ಬಿಲ್ಡರ್ ಮತ್ತು ಡೆವಲ್ಪರ್‍ನ ಮಾಲೀಕ ಅವಿನಾಶ ಸವಣೂರರವರು ಹುಬ್ಬಳ್ಳಿಯ ಬೆಂಗೇರಿ ಗ್ರಾಮದಲ್ಲಿ ನಿರ್ಮಿಸುತ್ತಿದ್ದ ಲಕ್ಸೋಎನ್‍ಟಿಗೊ ಅಪಾರ್ಟಮೆಂಟನಲ್ಲಿ ತಲಾ ಒಂದು ಪ್ಲ್ಯಾಟ್ ಖರೀದಿಸಿದ್ದರು. ಅದಕ್ಕೆ ಇಬ್ಬರೂ ದೂರುದಾರರು ಎದುರು ದಾರರಿಗೆ ಮುಂಗಡವಾಗಿ ರೂ.28,09,000/- ಮತ್ತು ರೂ.23,79,000/- ಸಂದಾಯ ಮಾಡಿದ್ದರು.

Written by - Manjunath N | Last Updated : Jan 25, 2024, 06:26 PM IST
  • ಸದರಿ ಪ್ಲ್ಯಾಟ್‍ಗಳನ್ನು ದೂರುದಾರರ ಗಮನಕ್ಕೆ ತರದೇ ಬೇರೆಯವರಿಗೆ ಮಾರಾಟ ಮಾಡಿದ್ದರು.
  • ದೂರುದಾರರು ಕೇಶ್ವಾಪುರ ಪೋಲಿಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
  • ದೊಡ್ಡ ಮೊತ್ತದ ಹಣ ಪಡೆದುಕೊಂಡು ಅವರಿಗೆ ಬುಕ್ ಮಾಡಿದ ಪ್ಲ್ಯಾಟ್‍ಗಳನ್ನು ನೀಡದೆ ಮೋಸ ಮಾಡಿರುತ್ತಾರೆ.
ಸೇವಾ ನ್ಯೂನ್ಯತೆ ಎಸಗಿದ ಸಿಲ್ವರ್ ಬ್ರಿಕ್ ಬಿಲ್ಡರ್ ಮತ್ತು ಡೆವಲ್ಪರ್‍ಗೆ ದಂಡ ಮತ್ತು ಪರಿಹಾರ title=

ಧಾರವಾಡ: ಹುಬ್ಬಳ್ಳಿಯ ಕೇಶ್ವಾಪುರ ನಗರದ ನೂತನ್‍ಜೈನ್ ಹಾಗೂ ಕಮಲೇಶ ಬಗ್ರೆಚಾ ಇಬ್ಬರೂ ದೂರುದಾರರು ಒಂದೇ ಕುಟುಂಬದವರಾಗಿದ್ದು, ಎದುರು ದಾರರಾದ ಸಿಲ್ವರ್ ಬ್ರಿಕ್ ಬಿಲ್ಡರ್ ಮತ್ತು ಡೆವಲ್ಪರ್‍ನ ಮಾಲೀಕ ಅವಿನಾಶ ಸವಣೂರರವರು ಹುಬ್ಬಳ್ಳಿಯ ಬೆಂಗೇರಿ ಗ್ರಾಮದಲ್ಲಿ ನಿರ್ಮಿಸುತ್ತಿದ್ದ ಲಕ್ಸೋಎನ್‍ಟಿಗೊ ಅಪಾರ್ಟಮೆಂಟನಲ್ಲಿ ತಲಾ ಒಂದು ಪ್ಲ್ಯಾಟ್ ಖರೀದಿಸಿದ್ದರು. ಅದಕ್ಕೆ ಇಬ್ಬರೂ ದೂರುದಾರರು ಎದುರು ದಾರರಿಗೆ ಮುಂಗಡವಾಗಿ ರೂ.28,09,000/- ಮತ್ತು ರೂ.23,79,000/- ಸಂದಾಯ ಮಾಡಿದ್ದರು.

ಆದರೆ ಎದುರುದಾರ ಅವಿನಾಶ ಸವಣೂರರವರು ಸದರಿ ಪ್ಲ್ಯಾಟ್‍ಗಳನ್ನು ದೂರುದಾರರ ಗಮನಕ್ಕೆ ತರದೇ ಬೇರೆಯವರಿಗೆ ಮಾರಾಟ ಮಾಡಿದ್ದರು. ಆ ಸಂಗತಿ ಗಮನಕ್ಕೆ ಬಂದ ಮೇಲೆ ದೂರುದಾರರು ಕೇಶ್ವಾಪುರ ಪೋಲಿಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಎದುರುದಾರರು ದೂರುದಾರರಿಂದ ದೊಡ್ಡ ಮೊತ್ತದ ಹಣ ಪಡೆದುಕೊಂಡು ಅವರಿಗೆ ಬುಕ್ ಮಾಡಿದ ಪ್ಲ್ಯಾಟ್‍ಗಳನ್ನು ನೀಡದೆ ಮೋಸ ಮಾಡಿರುತ್ತಾರೆ. ಇಂತಹ ಎದುರುದಾರ ಸಿಲ್ವರ್ ಬ್ರಿಕ್‍ಅವರ ನಡಾವಳಿಕೆ ಗ್ರಾಹಕ ರಕ್ಷಣಾ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ.31/05/2023 ರಂದು ಈ ದೂರುನ್ನು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಇದನ್ನೂ ಓದಿ: India's Richest Temple: ಭಾರತದ ಶ್ರೀಮಂತ ದೇವಾಲಯಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? 

ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು.ಸಿ.ಹಿರೇಮಠ ಸದಸ್ಯರು, ಇಬ್ಬರೂ ದೂರು ದಾರರಿಂದ ಒಟ್ಟು ರೂ.51 ಲಕ್ಷ 88 ಸಾವಿರ ಹಣ ಪಡೆದುಕೊಂಡು ಎದುರು ದಾರರು ದೂರುದಾರರಿಗೆ ಅವರು ಬುಕ್ ಮಾಡಿದ ಲಕ್ಸೋಎನ್‍ಟಿಗೊ ಅಪಾರ್ಟಮೆಂಟನಲ್ಲಿನ ಪ್ಲ್ಯಾಟ್‍ಗಳನ್ನು ಕೊಟ್ಟಿರುವುದಿಲ್ಲ. ಅವರಿಗೆ ತಿಳಿಸದೆ ಅದೇ ಪ್ಲ್ಯಾಟಗಳನ್ನು ಬೇರೆಯವರಿಗೆ ಮಾರಾಟ ಮಾಡಿರುವ ಎದುರುದಾರ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಜೊತೆಗೆ ವ್ಯಾಪಾರದ ಅನುಚಿತ ವರ್ತನೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಇಬ್ಬರೂ ದೂರುದಾರರು ಸಂದಾಯ ಮಾಡಿದ ಒಟ್ಟು ರೂ.51,88,000/- ಮೇಲೆ ಅವರು ಹಣ ಸಂದಾಯ ಮಾಡಿ ದಿನಾಂಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದಒಂದು ತಿಂಗಳ ಒಳಗಾಗಿ ಕೊಡುವಂತೆಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ತಲಾ ರೂ.30,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎದುರುದಾರರಾದ ಸಿಲ್ವರ್ ಬ್ರಿಕ್ ಬಿಲ್ಡರ್ ಮತ್ತು ಡೆವಲ್ಪರ್‍ನ ಮಾಲೀಕ ಅವಿನಾಶ ಸವಣೂರ ರವರಿಗೆ ಆಯೋಗ ನಿರ್ದೇಶಿಸಿದೆ.

ಇದನ್ನೂ ಓದಿ: ʼಬಾಬ್ರಿ ಮಸೀದ್‌ ಜೀವಂತವಾಗಿದೆʼ ಭಾರತದಲ್ಲಿ ಕೋಮುಗಲಭೆ ಎಬ್ಬಿಸಲು ʼಪಾಕ್‌ʼ ಸಂಚು.!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News