ಗ್ರಾಹಕನ ಉಳಿತಾಯ ಖಾತೆಯಲ್ಲಿರುವ ಹಣ ನೀಡದ ಬ್ಯಾಂಕ್‍ಗೆ ದಂಡ 

ಹುಬ್ಬಳ್ಳಿಯ ಶ್ರೀ. ಮಂಜುನಾಥ ಕೊಪ್ಪದ ಎಂಬುವವರು ಕಲಘಟಗಿಯ ಮಲಪ್ರಭಾ ಗ್ರಾಮೀಣ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದರು. 

Written by - Manjunath N | Last Updated : Nov 4, 2023, 10:47 PM IST
  • ಹಣ ಸಂದಾಯವಾಗುವವರೆಗೆ ಆ ಹಣದ ಮೇಲೆ ಬಡ್ಡಿ ನೀಡುವಂತೆ ಬ್ಯಾಂಕಿಗೆ ಆಯೋಗ ನಿರ್ದೇಶಿಸಿದೆ.
  • ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಕೆ.ವಿ.ಜಿ ಬ್ಯಾಂಕಿಗೆ ಆಯೋಗ ಆದೇಶಿಸಿದೆ.
ಗ್ರಾಹಕನ ಉಳಿತಾಯ ಖಾತೆಯಲ್ಲಿರುವ ಹಣ ನೀಡದ ಬ್ಯಾಂಕ್‍ಗೆ ದಂಡ  title=
ಸಾಂದರ್ಭಿಕ ಚಿತ್ರ

ಧಾರವಾಡ: ಹುಬ್ಬಳ್ಳಿಯ ಶ್ರೀ. ಮಂಜುನಾಥ ಕೊಪ್ಪದ ಎಂಬುವವರು ಕಲಘಟಗಿಯ ಮಲಪ್ರಭಾ ಗ್ರಾಮೀಣ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದರು. 

ದಿ:22/04/2006 ರವರೆಗೆ ದೂರುದಾರ ಸದರಿ ಬ್ಯಾಂಕಿನ ಜೊತೆ ವ್ಯವಹಾರ ಮಾಡಿದ್ದು ಅವರ ಖಾತೆಯಲ್ಲಿ ರೂ.32,366/- ಜಮಾ ಇತ್ತು. ದೂರುದಾರರಿಗೆ  ಪಾಶ್ರ್ವವಾಯು ತಗಲಿ ಸುಮಾರು 2 ವರ್ಷದವರೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕಾರಣ ಅವರು ತಮ್ಮ ಬ್ಯಾಂಕ್ ಖಾತೆಯನ್ನು  ಉಪಯೋಗಿಸಿದ್ದಿಲ್ಲ. ಈ ಮಧ್ಯದಲ್ಲಿ ಸರ್ಕಾರದ ಆದೇಶದಂತೆ ಮಲಪ್ರಭಾ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ವಿಲೀನವಾಯಿತು. ದೂರುದಾರನ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಅವರು ಎದುರುದಾರರ ಕೆ.ವಿ.ಜಿ. ಬ್ಯಾಂಕಿಗೆ ಸಾಕಷ್ಟು ಸಲ ಭೇಟಿ ಕೊಟ್ಟು ತನ್ನ ಖಾತೆಯ ವಿವರವನ್ನು ಕೇಳಿದ್ದರು. 

ಇದನ್ನೂ ಓದಿ-ವರುಣ್ ತೇಜ್, ಲಾವಣ್ಯ ತ್ರಿಪಾಠಿ ಸೇರಿದಂತೆ ಪ್ರೀತಿಸಿ ಮದುವೆಯಾದ ನಟ-ನಟಿಯರಿವರು!

ಲಿಖಿತ ಅರ್ಜಿ ಕೊಟ್ಟು ಬ್ಯಾಂಕಿನಿಂದ ತನ್ನ ಖಾತಾ ಮಾಹಿತಿ ಕೇಳಿದ್ದರು. ಆದರೆಎದುರುದಾರರು ತನ್ನ ಉಳಿತಾಯ ಖಾತೆಯ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ ಮತ್ತು ತನ್ನ ಉಳಿತಾಯ ಖಾತೆಯಲ್ಲಿರುವ ರೂ.32,366/- ತನಗೆ ವಾಪಸ್ಸು ಕೊಡುತ್ತಿಲ್ಲ ಅಂತಾ ಹೇಳಿ ಕೆ.ವಿ.ಜಿ. ಬ್ಯಾಂಕಿನ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಬ್ಯಾಂಕಿನ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಫಿರ್ಯಾದಿದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:10/01/2023 ರಂದು ದೂರು ಸಲ್ಲಿಸಿದ್ದರು. 

ದೂರುದಾರ ತನ್ನ ಉಳಿತಾಯ ಖಾತೆಯ ಪಾಸ್‍ಬುಕ್ ಹಾಗೂ ಎದುರುದಾರ ಬ್ಯಾಂಕಿಗೆ ಕೊಟ್ಟ ಅರ್ಜಿ ನಕಲನ್ನುಆಯೋಗದ ಮುಂದೆ ಹಾಜರುಪಡಿಸಿದ್ದರು.ಕೆಲವು ಖಾತೆದಾರರು ಪಾಸ್‍ಪುಸ್ತಕ ತರದೇ ಬ್ಯಾಂಕ್ ಮ್ಯಾನೇಜರನಿಂದ ಹಣ ತೆಗೆದುಕೊಂಡು ಹೋಗಿರುತ್ತಾರೆ. ಅದೇ ರೀತಿ ದೂರುದಾರ ತನ್ನ ಖಾತೆಯಲ್ಲಿರುವ ಹಣ ತೆಗೆದುಕೊಂಡು ಹೋಗಿರಬಹುದು. ಮಲಪ್ರಭಾ ಗ್ರಾಮೀಣ ಬ್ಯಾಂಕಿನ ದೂರುದಾರರ ಉಳಿತಾಯ ಖಾತೆಯ ದಾಖಲೆಗಳು ತಮ್ಮಲ್ಲಿ ಇಲ್ಲದ ಕಾರಣ ತಮ್ಮಿಂದ ಸೇವಾ ನ್ಯೂನ್ಯತೆ ಆಗಿಲ್ಲ ಅಂತಾ ಕೆ.ವಿ.ಜಿ. ಬ್ಯಾಂಕಿನವರು ಆಕ್ಷೇಪಣೆಎತ್ತಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ  ಈಶಪ್ಪ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಚ ಹಿರೇಮಠ ಅವರು ದೂರುದಾರರ ಉಳಿತಾಯ ಖಾತೆಯ ಮಲಪ್ರಭಾ ಗ್ರಾಮೀಣ ಬ್ಯಾಂಕಿನಲ್ಲಿ ಇದ್ದು ಆ ಬ್ಯಾಂಕ್ ಕೆ.ವಿ.ಜಿ. ಬ್ಯಾಂಕಿನಲ್ಲಿ ವಿಲೀನವಾಗಿರುವುದರಿಂದ ರಿಸರ್ವ್ ಬ್ಯಾಂಕ್ ನಿಯಮಾವಳಿಯಂತೆ ಹಳೆಯ ಬ್ಯಾಂಕಿನ ಎಲ್ಲ ಉಳಿತಾಯ ಖಾತೆಗಳ ದಾಖಲೆಗಳನ್ನು ಕನಿಷ್ಟ 10 ವರ್ಷ ಕಾಯ್ದಿಡಬೇಕಾದುದು ಕೆ.ವಿ.ಜಿ. ಬ್ಯಾಂಕಿನವರ ಕರ್ತವ್ಯ ಆಗಿರುತ್ತದೆ. ಉಳಿತಾಯ ಖಾತೆದಾರ ತನ್ನ ಹಣ ಕೇಳದಿದ್ದರೂ ಅಂತಹ ಹಣವನ್ನು ಕ್ರೂಡಿಕರಿಸಿ ರಿಸರ್ವ ಬ್ಯಾಂಕಿಗೆ ಕಳುಹಿಸಬೇಕು. ನಂತರ ಯಾವಾಗ ಖಾತೆದಾರರು ಬ್ಯಾಂಕಿಗೆ ಬಂದು ತಮ್ಮ ಉಳಿತಾಯ ಖಾತೆ ಹಣ ಕೇಳುತ್ತಾರೋ ಆಗ ಸದರಿ ಬ್ಯಾಂಕಿನವರು ರಿಸರ್ವ್ ಬ್ಯಾಂಕಿನಿಂದ ಆ ಹಣವನ್ನು ತರಿಸಿ ಬಡ್ಡಿ ಸಮೇತ ಖಾತೆದಾರನಿಗೆ ಕೊಡಬೇಕು ಅನ್ನುವ ನಿಯಮ ಇದೆ. ಆದರೆ ದೂರುದಾರರ ಉಳಿತಾಯ ಖಾತೆಯ ದಾಖಲೆ ಅಥವಾ ಮಾಹಿತಿ ಕೊಡಲು ಎದುರುದಾರ ಕೆ.ವಿ.ಜಿ. ಬ್ಯಾಂಕಿನವರು ವಿಫರಾಗಿರುವುದರಿಂದ ಗ್ರಾಹಕನಾದ ದೂರುದಾರನಿಗೆ ಅವರು ತಮ್ಮ ಮೇಲೆ ಹೇಳಿದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಕೆ.ವಿ.ಜಿ. ಬ್ಯಾಂಕಿನವರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. 

ಇದನ್ನೂ ಓದಿ-ಟೀಸರ್‌ನಿಂದಲೇ ಮೋಡಿಮಾಡಿದ "ದಿಲ್ ಖುಷ್" : ಚಿತ್ರತಂಡಕ್ಕೆ ಶುಭಕೋರಿದ ಡಾರ್ಲಿಂಗ್ ಕೃಷ್ಣ

ಅನಾರೋಗ್ಯದಿಂದ ಬಳಲುತ್ತಿರುವ ದೂರುದಾರರ ಉಳಿತಾಯ ಖಾತೆಯ ಹಣ ಅವನಿಗೆ ಕೊಡದೇ ಸತಾಯಿಸಿರುವುದು ಕೆ.ವಿ.ಜಿ. ಬ್ಯಾಂಕಿನವರ ತಪ್ಪು ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ಕೆ.ವಿ.ಜಿ. ಬ್ಯಾಂಕಿನವರಿಂದ ದೂರುದಾರನಿಗೆ ತುಂಬಾ ತೊಂದರೆ ಮತ್ತು ಅನಾನುಕೂಲವಾಗಿರುವುದನ್ನು ಪರಿಗಣಿಸಿ ಅವರ ಪಾಸ್ ಪುಸ್ತಕದಲ್ಲಿ ಕಾಣಿಸಿದ ರೂ.32,366/- ಮತ್ತು ಅದರ ಮೇಲೆ ದಿ:22/04/2006 ರಿಂದ ಶೇ.10 ರಂತೆ 17 ವರ್ಷ 6 ತಿಂಗಳಿನ ಬಡ್ಡಿ ರೂ.56,640/- ಲೆಕ್ಕ ಹಾಕಿ ಒಟ್ಟು ರೂ.89,006/- ದೂರುದಾರರಿಗೆ ಕೊಡುವಂತೆ ಆಯೋಗ ಆದೇಶಿಸಿದೆ. ನಂತರ ಹಣ ಸಂದಾಯವಾಗುವವರೆಗೆ ಆ ಹಣದ ಮೇಲೆ ಬಡ್ಡಿ ನೀಡುವಂತೆ ಬ್ಯಾಂಕಿಗೆ ಆಯೋಗ ನಿರ್ದೇಶಿಸಿದೆ. ಅಂಗವಿಕಲರಾದ ದೂರುದಾರನಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಕೆ.ವಿ.ಜಿ ಬ್ಯಾಂಕಿಗೆ ಆಯೋಗ ಆದೇಶಿಸಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News