ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿಯನ್ನು ಪದಚ್ಯುತಿಗೊಳಿಸುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಪ್ರಸ್ತುತ ಕುಲಪತಿ ಈಶ್ವರ ಭಟ್ ಅವರು ವಯೋಮಿತಿ ಮೀರಿದ್ದರೂ ಅವರು ಆ ಹುದ್ದೆಯಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರನ್ನು ಕುಲಪತಿ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ಕೋರಿ ಕಾನೂನು ವಿದ್ಯಾರ್ಥಿಗಳ ಸಂಘ ಹೈಕೋರ್ಟ್ ಮೊರೆ ಹೋಗಿದೆ.

Written by - Zee Kannada News Desk | Last Updated : Feb 18, 2022, 06:39 PM IST
  • ಫೆಬ್ರವರಿ 18 ಶುಕ್ರವಾರದಂದು ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ನಡೆಸಿತು, ಕಾನೂನು ವಿದ್ಯಾರ್ಥಿಗಳ ಸಂಘದ ಪರವಾಗಿಹಾಜರಾದ ವಕೀಲ ವಿಠಲ್ ಬಿ.ಆರ್ ಅವರು 2020 ರಲ್ಲಿ ಪ್ರಸ್ತುತ ಕುಲಪತಿಗಳ 65 ರ ವಯೋಮೀತಿ ಮುಗಿದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
  • ಈಗ ಅರ್ಜಿದಾರರು ಕುಲಪತಿಗಳಿಗೆ 66 ವರ್ಷ ತುಂಬಿದ ನಂತರ ಪಾವತಿಸಿದ ವೇತನವನ್ನು ಮರುಪಡೆಯಲು ಕೋರಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿಯನ್ನು ಪದಚ್ಯುತಿಗೊಳಿಸುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ  title=

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಪ್ರಸ್ತುತ ಕುಲಪತಿ ಈಶ್ವರ ಭಟ್ ಅವರು ವಯೋಮಿತಿ ಮೀರಿದ್ದರೂ ಆ ಹುದ್ದೆಯಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರನ್ನು ಕುಲಪತಿ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ಕೋರಿ ಕಾನೂನು ವಿದ್ಯಾರ್ಥಿಗಳ ಸಂಘ (Law Students Association) ಹೈಕೋರ್ಟ್ ನ ಮೊರೆ ಹೋಗಿದೆ.

ಫೆಬ್ರವರಿ 18 ಶುಕ್ರವಾರದಂದು ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ನಡೆಸಿತು, ಕಾನೂನು ವಿದ್ಯಾರ್ಥಿಗಳ ಸಂಘ (Law Students Association) ದ ಪರವಾಗಿ ಹಾಜರಾದ ವಕೀಲ ವಿಠಲ್ ಬಿ.ಆರ್ ಅವರು 2020 ರಲ್ಲಿ ಪ್ರಸ್ತುತ ಕುಲಪತಿಗಳ 65 ರ ವಯೋಮೀತಿ ಮುಗಿದಿದೆ, ಆದ್ದರಿಂದ ಕುಲಪತಿಗಳಿಗೆ 66 ವರ್ಷ ತುಂಬಿದ ನಂತರ ಪಾವತಿಸಿದ ವೇತನವನ್ನು ಮರುಪಡೆಯಲು ಕೋರಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಕಾನೂನು ವಿವಿಯ ಚೆಲ್ಲಾಟ, ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ..!

ಕಾಯಿದೆಯ ಸೆಕ್ಷನ್ 14 (5) ಪ್ರಕಾರ ಅರವತ್ತೈದು ವರ್ಷ ವಯಸ್ಸಿನವರೆಗೆ ಕುಲಪತಿಗಳು ಅಧಿಕಾರದಲ್ಲಿರಬಹುದಾಗಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾಯಿದೆ, 2009 (ಕರ್ನಾಟಕ ಅಧಿನಿಯಮ 2009 ರ ಕರ್ನಾಟಕ ಕಾಯಿದೆ ಸಂಖ್ಯೆ 11) ಕುಲಪತಿಗಳ ಗರಿಷ್ಠ ವಯೋಮೀತಿಯನ್ನು 65 ಕ್ಕೆ ನಿಗದಿಪಡಿಸಿದೆ.

ಶುಕ್ರವಾರದಂದು ನಡೆದ ವಿಚಾರಣೆಯಲ್ಲಿ, ಅರ್ಜಿದಾರರು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾದ ಮಾಹಿತಿಯನ್ನು ಅವಲಂಬಿಸಿರುವುದಾಗಿ ಹೇಳಿದ್ದಾರೆ, ಅದರಲ್ಲಿ ಈಶ್ವರ ಭಟ್ 1955 ರಲ್ಲಿ ಜನಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.ಈಗ ಕುಲಪತಿಗಳ ಅವಧಿ ವಿಸ್ತರಣೆಯನ್ನು ಕ್ರಮಬದ್ಧಗೊಳಿಸಲು ವಿಶ್ವವಿದ್ಯಾನಿಲಯವು ತೆಗೆದುಕೊಂಡ ನಿರ್ಧಾರದ ವಿವರಗಳನ್ನು ಕೋರಿ ಜನವರಿ 27 ರಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಕೋರಲಾಗಿದೆ, ಆದರೆ ಇದುವರೆಗೆ ವಿಶ್ವವಿದ್ಯಾನಿಲಯವು ಯಾವುದೇ ಉತ್ತರವನ್ನು ನೀಡಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ. ಮಾರ್ಚ್ 2 ರಂದು ಹೈಕೋರ್ಟ್ನಲ್ಲಿ ಈ ಅರ್ಜಿ ಮತ್ತೆ ವಿಚಾರಣೆಗೆ ಬರಲಿದೆ.

ಇದನ್ನೂ ಓದಿ: ಕರ್ನಾಟಕ ಕಾನೂನು ವಿವಿಯ ಸರ್ವಾಧಿಕಾರಿ ಧೋರಣೆ ಖಂಡಿಸಿ ವಿದ್ಯಾರ್ಥಿಗಳಿಂದ ಸುವರ್ಣ ಸೌಧ ಚಲೋ

ಪ್ರಸ್ತುತ ಕುಲಪತಿ ಈಶ್ವರ್ ಭಟ್ ಅವರು  ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಪರವಾಗಿ ತಮ್ಮ ನಿವೃತ್ತಿ ವಯೋಮಿತಿ ಮೀರಿದೆ ಎನ್ನುವ ಅರಿವಿದ್ದರೂ ಕೂಡ ವಿಶ್ವವಿದ್ಯಾನಿಲಯ ನಿಧಿಯನ್ನು ಖರ್ಚು ಮಾಡುವುದು ಸೇರಿದಂತೆ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News