ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಈಗ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರದಲ್ಲಿ ಇಟ್ಟಿದೆ.
ಯುಜಿಸಿ ಆದೇಶದಂತೆ ಅಕಾಡೆಮಿಕ್ ವರ್ಷದ ಕ್ಯಾಲೆಂಡರ್ ನ್ನು ಪಾಲಿಸಿದ್ದರೆ ಈಗಾಗಲೇ ಅಕ್ಟೋಬರ್ 1 ರಿಂದ ಕಾನೂನು ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜುಗಳು ತರಗತಿಯನ್ನು ಪ್ರಾರಂಭಿಸಬೇಕಾಗಿತ್ತು, ಆದರೆ ಈಗಾಗಲೇ ವಿದ್ಯಾರ್ಥಿಗಳು COVID-19 ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ಸೆಮಿಸ್ಟರ್ ಸಂಪೂರ್ಣವಾಗಿ ಆನ್ ಲೈನ್ ನಲ್ಲ್ಲಿನಡೆದಿದೆ, ಅಷ್ಟೇ ಅಲ್ಲದೆ ತಮ್ಮ ಸಿಲೆಬಸ್ ಕೂಡ ಮುಗಿದಿಲ್ಲ,ಹಾಗಾಗಿ ಮುಂದಿನ ಸೆಮಿಸ್ಟರ್ ಗೆ ಬಡ್ತಿ ನೀಡಬೇಕೆಂದು ಹೈಕೋರ್ಟ್ ನ ಮೊರೆಹೋಗಿದ್ದಾರೆ.
Thank you Shri. @tnprathapan MP(Thrissur LOK Sabha Constituency)#justiceforkslustudents #StudentsLivesMatter pic.twitter.com/VjkWHjHMIy
— KSLU Law Student Union Official Account (@KSLU_Students) October 8, 2021
ಇದನ್ನೂ ಓದಿ: ಕರ್ನಾಟಕ ರಾಜ್ಯ ಕಾನೂನು ವಿವಿ ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕ
ಇನ್ನೊಂದೆಡೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಸೆಪ್ಟೆಂಬರ್ 27 ರಂದು ಹೊರಡಿಸಿದ ಸುತ್ತೋಲೆಯಲ್ಲಿ 2020-21 ನೇ ಸಾಲಿಗೆ ಅನ್ವಯವಾಗುವಂತೆ ಸ್ನಾತಕ 2 ಮತ್ತು 4 ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ 2 ನೇ ಸೆಮಿಸ್ಟರ್ ನಿಯಮಿತ ವಿದ್ಯಾರ್ಥಿಗಳನ್ನು ಮುಂದಿನ ವರ್ಗಕ್ಕೆ ಬಡ್ತಿಗೊಳಿಸಿದೆ.
ಆದರೆ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಮಾತ್ರ ಇತ್ತೀಚಿಗೆ ಬಡ್ತಿ ವಿಚಾರವಾಗಿ ಪ್ರಕರಣ ಹೈಕೋರ್ಟ್ ಅಂಗಳದಲ್ಲಿ ಇನ್ನೂ ಇತ್ಯರ್ಥವಾಗದೆ ಇರುವಂತಹ ಸಂದರ್ಭದಲ್ಲಿ ಮುಂಚಿತವಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೂಲಕ ಎಲ್ಲ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿತ್ತು, ಅದರಲ್ಲೂ ಮರು ಮೌಲ್ಯ ಮಾಪನ ಹಾಗೂ ಸವಾಲು ಮೌಲ್ಯಮಾಪನ ಬಂದ ನಂತರ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಬೇಕಾಗಿತ್ತು, ಆದರೆ ಇದ್ಯಾವುದನ್ನು ಪರಿಗಣಿಸದೆ ಕಾನೂನು ವಿವಿ ಅಕ್ಟೋಬರ್ 21 ರಿಂದ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಂಡಿತ್ತು.
UGC SWRO office recived the representation from @tnprathapan MP regarding conduct of KSLU Intermediate Semester Examinations 2021. Hence UGC SWRO forwarded the same representation to @ugc_india for further actions regarding this issue. @BSBommai #justiceforkslustudents pic.twitter.com/NPpkPjd64f
— KSLU Law Student Union Official Account (@KSLU_Students) October 11, 2021
ಆದರೆ ಈಗಾಗಲೇ ಮುಂದಿನ ಸೆಮಿಸ್ಟರ್ ಗೆ ವಿದ್ಯಾರ್ಥಿಗಳನ್ನು ಬಡ್ತಿಗೊಳಿಸುವ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ನ ಧಾರವಾಡ ಮತ್ತು ಬೆಂಗಳೂರು ಪೀಠಗಳಲ್ಲಿ ರಿಟ್ ಅರ್ಜಿಗಳು ಸಲ್ಲಿಕೆಯಾಗಿರುವುದರಿಂದಾಗಿ ಹೈಕೋರ್ಟ್ ನಲ್ಲಿ ತನಗೆ ಈ ವಿಚಾರವಾಗಿ ಹಿನ್ನಡೆಯಾಗಬಹುದು ಎಂದು ಭಾವಿಸಿ ಕಾನೂನು ವಿವಿ ಈಗ ಅಕ್ಟೋಬರ್ 21 ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ವಾಪಸ್ ತೆಗೆದುಕೊಂಡಿದೆ.
— KSLU Law Student Union Official Account (@KSLU_Students) September 28, 2021
ಅಕ್ಟೋಬರ್ 13 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಮರು ಮೌಲ್ಯ ಮಾಪನ ಹಾಗೂ ಸವಾಲು ಮೌಲ್ಯಮಾಪನ ಮುಗಿದ ನಂತರ ಪರೀಕ್ಷೆಗಳನ್ನು ನಡೆಸಲು ಮುಂದಾಗಿದೆ.ಇದರ ಅನ್ವಯ ಈಗ ನವೆಂಬರ್ ಎರಡನೇ ವಾರದಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ: ಶಿಷ್ಯವೇತನಕ್ಕಾಗಿ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ
ಈಗ ಮುಂದಿನ ಸೆಮಿಸ್ಟರ್ ಗೆ ಬಡ್ತಿ ಮಾಡುವ ವಿಚಾರ ಅಕ್ಟೋಬರ್ 18 ರಂದು ಮತ್ತೆ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ.ಆದರೆ ಈಗ ವಿದ್ಯಾರ್ಥಿಗಳು ಪರೀಕ್ಷೆ ನಡೆಸಲು ಕಾನೂನು ವಿವಿ ಮಾಡುತ್ತಿರುವ ವಿಳಂಭದಿಂದಾಗಿ ಈಗ ತಮಗೆ ಒಂದು ಅಕಾಡೆಮಿಕ್ ವರ್ಷ ನಷ್ಟವಾಗುತ್ತದೆ ಎನ್ನುತ್ತಾರೆ.
"ಎಲ್ಲವೂ ಯುಜಿಸಿ ಮಾರ್ಗಸೂಚಿ ನಿಯಮಗಳಂತೆ ಸುಗಮವಾಗಿ ನಡೆದಿದ್ದರೆ, ಈಗಾಗಲೇ 2 ಹಾಗೂ 4 ನೇ ಸೆಮಿಸ್ಟರ್ ನ ಕಾನೂನು ಪದವಿಯ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ಬರೆದು ಅಕ್ಟೋಬರ್ 1 ರಿಂದ ಮುಂದಿನ ತರಗತಿಗಳಿಗೆ ಹಾಜರಾಗಬೇಕಾಗಿತ್ತು, ಆದರೆ ಈಗ ಬಂದಿರುವ ಹೊಸ ಪರೀಕ್ಷಾ ವೇಳಾ ಪಟ್ಟಿಯಿಂದಾಗಿ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಮತ್ತಷ್ಟು ವಿಳಂಬವಾಗುತ್ತದೆ .ಇದರಿಂದಾಗಿ ಈಗ ಕಾನೂನು ಪದವಿ ಪಡೆಯಲು ಮೂರು ವರ್ಷದ ಬದಲು ನಾಲ್ಕು ವರ್ಷ ಕಾಯಬೇಕಾಗುತ್ತದೆ." ಎನ್ನುತ್ತಾರೆ ಹುಬ್ಬಳ್ಳಿಯಲ್ಲಿನ ಲಾ ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ರಮೇಶ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.