ಪ್ರಕಾಶ್‌ ರಾಜ್, ಕಮಲ್ ಹಾಸನ್‌ಗೆ ಶೇ.1ರಷ್ಟು ಜನರೂ ಬೆಂಬಲಿಸಲ್ಲ : ಪ್ರಹ್ಲಾದ ಜೋಶಿ ತಿರುಗೇಟು

ಬಿಜೆಪಿ ಇಂದು 18 ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿದೆ. ಆದರೆ, ಪ್ರಕಾಶ ರಾಜ್ ಮತ್ತು ಕಮಲ್ ಹಾಸನ್ ಅವರಿಗೆ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗಿಲ್ಲ ಸಚಿವ ಜೋಶಿ ತಿರುಗೇಟು ನೀಡಿದರು.

Written by - Prashobh Devanahalli | Edited by - Krishna N K | Last Updated : Apr 10, 2024, 04:31 PM IST
    • ಪ್ರಕಾಶ್‌ ರಾಜ್‌ ಕಮಲ್‌ ಹಾಸನ್‌ ಹೇಳಿಕೆಯಲ್ಲಿ ಯಾವುದೇ ಸತ್ಯಾಸತ್ಯತೆ ಇಲ್ಲ
    • ಪ್ರಕಾಶ ರಾಜ್ ಒಬ್ಬ ಅಹಂಕಾರದ ಸ್ವಭಾವ ಉಳ್ಳ ವ್ಯಕ್ತಿ
    • ಕಾಶ ರಾಜ್ ಮತ್ತು ಕಮಲ್ ಹಾಸನ್ ಅವರಿಗೆ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಿಲ್ಲ
ಪ್ರಕಾಶ್‌ ರಾಜ್, ಕಮಲ್ ಹಾಸನ್‌ಗೆ ಶೇ.1ರಷ್ಟು ಜನರೂ ಬೆಂಬಲಿಸಲ್ಲ : ಪ್ರಹ್ಲಾದ ಜೋಶಿ ತಿರುಗೇಟು title=

ಹುಬ್ಬಳ್ಳಿ : ಚಿತ್ರ ನಟರಾದ ಪ್ರಕಾಶ ರಾಜ್ ಮತ್ತು ಕಮಲ್ ಹಾಸನ್ ಅವರನ್ನು ಶೇ.1 ರಷ್ಟು ಜನರೂ ಬೆಂಬಲಿಸುವುದಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ಈ ಇಬ್ಬರೂ ನಟರು ನೀಡಿರುವ ಹೇಳಿಕೆಗಳಲ್ಲಿ ಯಾವುದೇ ಸತ್ಯಾಸತ್ಯತೆ ಇಲ್ಲವೆಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯೊಂದೇ 400 ಸ್ಥಾನಗಳನ್ನು ಗೆಲ್ಲಲು ಸಾಧ್ಯವೇ ಇಲ್ಲ ಎಂದಿರುವ ಪ್ರಕಾಶ ರಾಜ್ ಹೇಳಿಕೆಗೆ, ಪ್ರಕಾಶ ರಾಜ್ ಒಬ್ಬ ಅಹಂಕಾರದ ಸ್ವಭಾವ ಉಳ್ಳ ವ್ಯಕ್ತಿ ಎಂದು ಟೀಕಿಸಿದರು.

ಇದನ್ನೂ ಓದಿ:ಸುಳ್ಳು ಶಾಸ್ತ್ರ ಹೇಳಿಸಿದ ಶಾಕುಂತಲ: ಭೂಮಿಕಾಗೆ ಅತ್ತೆಯ ಕುತಂತ್ರದ ಬಗ್ಗೆ

ಬಿಜೆಪಿ ಇಂದು 18 ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿದೆ. ಆದರೆ, ಪ್ರಕಾಶ ರಾಜ್ ಮತ್ತು ಕಮಲ್ ಹಾಸನ್ ಅವರಿಗೆ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗಿಲ್ಲ ಸಚಿವ ಜೋಶಿ ತಿರುಗೇಟು ನೀಡಿದರು. ಪ್ರಕಾಶ್ ಒಬ್ಬ ಅತೃಪ್ತ ಜೀವಿ. ರಾಜಕಾರಣದಲ್ಲಿ ಅವರ ಸ್ಥಾನಮಾನ ಏನು? ಎಂದು ಜೋಶಿ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಚಿತ್ರ ನಟ ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಮಾಡಿರುವ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದೂ ಹೇಳಿದರು.

ಇನ್ನೊಂದೆಡೆ, ತಮಿಳುನಾಡಿನ ಜನತೆ ಬಿಜೆಪಿಯನ್ನು ತಿರಸ್ಕರಿಸುವಂತೆ ನಟ ಕಮಲ್ ಹಾಸನ್ ಕರೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿ,'ಅವರು ಮಾಡುವ ಆರೋಪಗಳಲ್ಲಿ ಕಿಂಚಿತ್ತೂ ಸತ್ಯಾಂಶವಿಲ್ಲ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News