ಕಬಾಬ್ ಗಳ ತಯಾರಿಕೆಯಲ್ಲಿ ಕೃತಕ ಬಣ್ಣ ನಿಷೇಧ; ಉಲ್ಲಂಘಿಸಿದರೆ 10 ಲಕ್ಷ ರೂ. ದಂಡ 

ಆಹಾರ ತಯಾರಕರು/ವ್ಯಾಪಾರಿಗಳು ನೋಂದಣಿ / ಪರವಾನಿಗಿ ಪಡೆದಿರಬೇಕು ಇಲ್ಲವಾದಲ್ಲಿ ಆಹಾರ ವಸ್ತುಗಳ ವಹಿವಾಟು ನಡೆಸುವಂತಿಲ್ಲ. ಇದರ ಉಲ್ಲಂಘನೆಯು ರೂ. 10 ಲಕ್ಷದವರೆಗೆ ದಂಡವಿಧಿಸಬಹುದಾದ ಅಪರಾಧವಾಗುತ್ತದೆ. 

Written by - Manjunath N | Last Updated : Aug 31, 2024, 04:36 PM IST
  • ಆಹಾರ ತಯಾರಕರು/ವ್ಯಾಪಾರಿಗಳು ನೋಂದಣಿ / ಪರವಾನಿಗಿ ಪಡೆದಿರಬೇಕು ಇಲ್ಲವಾದಲ್ಲಿ ಆಹಾರ ವಸ್ತುಗಳ ವಹಿವಾಟು ನಡೆಸುವಂತಿಲ್ಲ
  • ಇದರ ಉಲ್ಲಂಘನೆಯು ರೂ. 10 ಲಕ್ಷದವರೆಗೆ ದಂಡವಿಧಿಸಬಹುದಾದ ಅಪರಾಧವಾಗುತ್ತದೆ
  • ಇದರಂತೆ ವೆಜ್/ಚಿಕನ್/ಫಿಶ್ ಇತರೆ ಕಬಾಬ್ ಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುವುದು ನಿಷೇಧಿಸಲಾಗಿದೆ
 ಕಬಾಬ್ ಗಳ ತಯಾರಿಕೆಯಲ್ಲಿ ಕೃತಕ ಬಣ್ಣ ನಿಷೇಧ; ಉಲ್ಲಂಘಿಸಿದರೆ 10 ಲಕ್ಷ ರೂ. ದಂಡ  title=

ಶಿವಮೊಗ್ಗ: ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಹಾಗೂ ಅದರಡಿ ರಚಿಸಲಾಗಿರುವ ನಿಯಮಗಳು ಮತ್ತು ನಿಬಂಧನೆಗಳು 2011, 2011 ಆಗಸ್ಟ್ 5 ರಿಂದ ಜಾರಿಗೆ ಬಂದಿರುತ್ತದೆ.

ಆಹಾರ ತಯಾರಕರು/ವ್ಯಾಪಾರಿಗಳು ನೋಂದಣಿ / ಪರವಾನಿಗಿ ಪಡೆದಿರಬೇಕು ಇಲ್ಲವಾದಲ್ಲಿ ಆಹಾರ ವಸ್ತುಗಳ ವಹಿವಾಟು ನಡೆಸುವಂತಿಲ್ಲ. ಇದರ ಉಲ್ಲಂಘನೆಯು ರೂ. 10 ಲಕ್ಷದವರೆಗೆ ದಂಡವಿಧಿಸಬಹುದಾದ ಅಪರಾಧವಾಗುತ್ತದೆ. ಇದರಂತೆ ವೆಜ್/ಚಿಕನ್/ಫಿಶ್ ಇತರೆ ಕಬಾಬ್ ಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುವುದು ನಿಷೇಧಿಸಲಾಗಿದೆ.

ಇದನ್ನೂ ಓದಿ- K-SET: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 28 ರವರೆಗೆ ಅವಕಾಶ..!

ರಸ್ತೆ ವ್ಯಾಪಾರಿಗಳು ತಳ್ಳುಗಾಡಿ ವ್ಯಾಪಾರಿಗಳ ಗೃಹ ಆಧಾರಿತ ಕ್ಯಾಂಟಿನ್ ಗಳು, ಟೀ ಅಂಗಡಿಗಳು, ತಂಪು ಪಾನೀಯ ತಯಾರಿಕ ಘಟಕಗಳು, ಕ್ಯಾಟರಿಂಗ್, ಕ್ಲಬ್ / ಕ್ಯಾಂಟಿನ್ ಗಳು/ಹೋಂಸ್ಟೇ ಆಹಾರ ವಿತರಕರು/ಶಾಲಾ, ಕಾಲೇಜು ಕ್ಯಾಂಟಿನ್ ಗಳು, ಹೋಟೆಲ್ ರೆಸ್ಟೋರೆಂಟ್ ಗಳು ರೆಸಾರ್ಟ್, ವೈನ್ ಸ್ಟೋರ್ ಗಳು ಬಾರ್ ಮತ್ತು ರೆಸ್ಟೋರೆಂಟ್ ಗಳು ಊಟದ ಸಂಯೋಜಕರು(ಕ್ಯಾಟರರ್ಸ್) ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮ 2011 ನಿಬಂಧನೆಗಳು ಸಂಖ್ಯೆ 2.1.3 ಶೆಡ್ಯಾಲ್ ಐವಿ ಅನ್ವಯ ನೈರ್ಮಲ್ಯತೆಯಿಂದ ಕೂಡಿರುವ ಸ್ಥಳದಲ್ಲಿ ಗುಣಮಟ್ಟ ಆಹಾರವನ್ನು ತಯಾರಿಸಿ ನೀಡುವುದು ಇಲ್ಲವಾದಲ್ಲಿ ಸೆಕ್ಷನ್ 51, 54,56, 59 ರಂತೆ ಕ್ರಮ ಕೈಗೊಳ್ಳಲಾಗುವುದು.

ಇದರಂತೆ ದಿನಾಂಕ:30.08.2024 ಮತ್ತು 31.08.2024 ರಂದು ಜಿಲ್ಲೆಯಾದ್ಯಂತ ವಿವಿಧ ಬೇಕರಿ ಉತ್ಪನ್ನ ಮೀಟ್ ಚಿಕನ್ ಮತ್ತು ಎಲ್ಲಾ ಉತ್ಪನ್ನಗಳನ್ನು ವಿಶೇಷ ಆಂದೋಲನದ ಮೂಲಕ ವಿಶ್ಲೇಷಣೆಗಾಗಿ ಕಳುಹಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News