Rainwater Harvesting: ಬೆಂಗಳೂರು: ಏಪ್ರಿಲ್ 30 ಬೆಂಗಳೂರು ನಗರವು ತೀವ್ರ ರೀತಿಯಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದಕ್ಕೆ ಪರಿಹಾರ ಎಂಬಂತೆ ಬೆಂಗಳೂರಿನ ಮತ್ತೊಂದು ಅಪಾರ್ಟ್ಮೆಂಟ್ ಒಂದು ನೀರಿನ ಸಂರಕ್ಷಣೆಯತ್ತ ಹೊಸ ಹೆಜ್ಜೆ ಇಟ್ಟಿದೆ. ಜಿಗಣಿಯ ಅರಾಟ್ ಅಮೋರಾ ಈ ಅಪಾರ್ಟ್ಮೆಂಟ್. ಬೋಸಾನ್ ವೈಟ್ ವಾಟರ್ ನ ಸುಧಾರಿತ 11-ಹಂತದ ನೀರಿನ ಮರುಬಳಕೆ ತಂತ್ರಜ್ಞಾನವನ್ನು ಈ ಅಪಾರ್ಟ್ಮೆಂಟ್ ಅಳವಡಿಸಿಕೊಂಡಿದ್ದು, ಒಳಚರಂಡಿ ಸಂಸ್ಕರಣಾ ಘಟಕದಲ್ಲಿ (ಎಸ್ಟಿಪಿ) ಸಂಸ್ಕರಿಸಿದ ತ್ಯಾಜ್ಯ ನೀರನ್ನು ವೈಟ್ ವಾಟರ್ ಎಂದು ಕರೆಯಲಾಗುವ ಉತ್ತಮ ಗುಣಮಟ್ಟದ ನೀರಾಗಿ ಪರಿವರ್ತಿಸುತ್ತಿದೆ. ಪ್ರತಿದಿನ ಇಲ್ಲಿ 50,000 ಲೀಟರ್ (50 ಕಿಲೋ ಲೀಟರ್) ಶುದ್ಧ ನೀರನ್ನು ಎಸ್ಟಿಪಿ ನೀರಿನಿಂದ ಪಡೆಯಲಾಗುತ್ತಿದೆ.
160ಕ್ಕೂ ಹೆಚ್ಚು ವಿಲ್ಲಾಗಳನ್ನು ಒಳಗೊಂಡಿರುವ ಅರಾಟ್ ಅಮೋರಾದಲ್ಲಿ ಪ್ರತಿದಿನ ಸರಿಸುಮಾರು 70 ಲೋಲೀಟರ್ (70,000 ಲೀಟರ್) ತ್ಯಾಜ್ಯ ನೀರು ಉತ್ಪಾದನೆಯಾಗುತ್ತದೆ. ಈ ನೀರನ್ನು ಬಳಸಲಾಗುತ್ತಿದ್ದರೂ ಹೆಚ್ಚುವರಿ ನೀರನ್ನು ಸಂಸ್ಕರಣೆಯ ನಂತರ ಬಳಸದೇ ವ್ಯರ್ಥವಾಗುತ್ತಿತ್ತು. ಹೀಗಾಗಿ ಅಪಾರ್ಟ್ ಮೆಂಟ್ ಸಮುದಾಯವು ಬೋಸಾನ್ ವೈಟ್ ವಾಟರ್ ವ್ಯವಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿತು. ಇದು ಸಮರ್ಥ ಬಳಕೆ ಮತ್ತು ಭವಿಷ್ಯದ ಮರುಬಳಕೆ ಸಾಧ್ಯತೆಗಳನ್ನು ಗುರಿಯಾಗಿಸಿಕೊಂಡಿರುವ ತಾಂತ್ರಿಕತೆಯಾಗಿದೆ. ಈ ಬಳಿ ಅಪಾರ್ಟ್ಮೆಂಟ್ ಸಂಕೀರ್ಣವು ಈಗ ಪ್ರತಿದಿನ 50 ಕಿಲೋಲೀಟರ್ ಶುದ್ಧ ನೀರನ್ನು ಉತ್ಪಾದಿಸುತ್ತದೆ, ಇದು ಜಿಗಣಿ ಕೈಗಾರಿಕಾ ಪ್ರದೇಶದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಹತ್ತಿರದ ಕೈಗಾರಿಕೆಗಳ ನೀರಿನ ಅಗತ್ಯಗಳನ್ನು ನೀಗಿಸುತ್ತಿದೆ.
ಈ ಬಗ್ಗೆ ಮಾತನಾಡಿದ ಬೋಸಾನ್ ವೈಟ್ ವಾಟರ್ನ ಸಿಇಒ ಮತ್ತು ಸಹ-ಸಂಸ್ಥಾಪಕ ವಿಕಾಸ್ ಬ್ರಹ್ಮಾವರ, "ನಗರದ ಅನೇಕ ಪ್ರದೇಶಗಳಲ್ಲಿ ನೀರಿನ ಕೊರತೆ ಪ್ರಮುಖ ಸಮಸ್ಯೆಯಾಗಿ ಮುಂದುವರಿದಿದಿದೆ. ಅನೇಕ ವಸತಿ ಸಮುದಾಯಗಳು ತ್ಯಾಜ್ಯ ನೀರಿನಿಂದ ಕುಡಿಯುವ ನೀರನ್ನು ಮರುಪಡೆಯಲು ಉಪಕ್ರಮಗಳನ್ನು ಜಾರಿಗೆ ತಂದಿವೆ. ಅವರು ಪ್ರತಿದಿನ ಲಕ್ಷಾಂತರ ಲೀಟರ್ ತ್ಯಾಜ್ಯ ನೀರನ್ನು ಶುದ್ಧ ಮತ್ತು ಮರುಬಳಕೆ ಮಾಡಬಹುದಾದ ನೀರಾಗಿ ಪರಿಣಾಮಕಾರಿಯಾಗಿ ಪರಿವರ್ತಿಸುತ್ತಿದ್ದಾರೆ. ಬೆಂಗಳೂರಿನ ಅಪಾರ್ಟ್ಮೆಂಟ್ ಸಮುದಾಯಗಳಲ್ಲಿ ನೀರಿನ ಉಳಿತಾಯ ಉಪಕ್ರಮಗಳಲ್ಲಿ ಆಸಕ್ತಿ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇನ್ನೂ ಅನೇಕ ವಸತಿ ಸಮುದಾಯಗಳು ತ್ಯಾಜ್ಯನೀರಿನ ಮರುಬಳಕೆಯನ್ನು ಆಯ್ಕೆ ಮಾಡಲು ಮುಂದೆ ಬರಲಿವೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Avneet Kaur: "ಬಂಟಿ ನಿಮ್ಮ ಸೋಪು ಸ್ಲೋನಾ" ಅಂತ ಡೈಲಾಗ್ ಹೊಡೆದ ಲೈಫ್‌ಬಾಯ್ ಬೆಡಗಿ ಈಗ ಹೇಗಿದ್ದಾರೆ ಗೊತ್ತೇ??
ಅರಟ್ ಅಮೋರಾ ನಿವಾಸಿಯೊಬ್ಬರು ಮಾತನಾಡಿ "ಅರಾಟ್ ಅಮೋರಾದಲ್ಲಿ ನಮ್ಮದೇ ಆದ ಸ್ವಂತ ನೀರಿನ ಮೂಲಗಳನ್ನು ಹೊಂದಿರುವುದಕ್ಕೆ ನಾವು ನಂಬಲಾಗದಷ್ಟು ಅದೃಷ್ಟವಂತರಾಗಿದ್ದೇವೆ. ನಮ್ಮ ಒಳಚರಂಡಿ ಸಂಸ್ಕರಣಾ ಘಟಕದಿಂದ (ಎಸ್ಟಿಪಿ) ಸಂಸ್ಕರಿಸಿದ ತ್ಯಾಜ್ಯ ನೀರನ್ನು ತೋಟಗಾರಿಕೆ ಮತ್ತು ನಿರ್ವಹಣೆಗೆ ಬಳಸುತ್ತಿದ್ದೆವು. ಆದರೂ ಎಸ್ಟಿಪಿ ಹೆಚ್ಚುವರಿ ನೀರು ಇರುವುದನ್ನು ನಾವು ಗಮನಿಸಿದ್ದೆವು. ಒಂದು ವಸತಿ ಸಮುದಾಯವಾಗಿ, ನೀರಿನ ಕೊರತೆಯ ಸಮಸ್ಯೆಯನ್ನು ಬೆಂಗಳೂರಿನಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಪರಿಹರಿಸುವುದು ನಮ್ಮ ಕರ್ತವ್ಯ. ನಿವಾಸಿಗಳ ನಡುವಿನ ಚರ್ಚೆಗಳ ಬಳಿಕ, ನೀರಿನ ಸಮಸ್ಯೆ ಪರಿಹಾರಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದು ಸ್ಪಷ್ಟವಾಯಿತು. ಇದು ಎಸ್ ಟಿಪಿ ನೀರನ್ನು ಶುದ್ಧ, ಕುಡಿಯುವ ನೀರಾಗಿ ಪರಿವರ್ತಿಸುವ ಸಾಮರ್ಥ್ಯವಿರುವ ಸುಸ್ಥಿರ ವಿಧಾನವನ್ನು ಹುಡುಕಲು ಪ್ರೇರಣೆ ನೀಡಿತು. ಬೋಸಾನ್ ವೈಟ್ ವಾಟರ್ ನೊಂದಿಗೆ ಪಾಲುದಾರರಾಗುವ ನಮ್ಮ ನಿರ್ಧಾರವು ಪರಿಸರ ನಿರ್ವಹಣೆ ಮತ್ತು ಸಮುದಾಯದ ಯೋಗಕ್ಷೇಮಕ್ಕೆ ನಮ್ಮ ಬದ್ಧತೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದರು.
ಮುಂದುವರಿದ ಅವರು "ಎಸ್ ಟಿಪಿ ನೀರನ್ನು ಹತ್ತಿರದ ಕೈಗಾರಿಕೆಗಳಿಗೆ ಸೂಕ್ತವಾದ ಸಂಪನ್ಮೂಲವಾಗಿ ಮರುಬಳಕೆ ಮಾಡುವ ಮೂಲಕ ನಾವು ನಮ್ಮ ಸಮುದಾಯದ ನೀರಿನ ಸುಸ್ಥಿರತೆಯನ್ನು ಹೆಚ್ಚಿಸಿದ್ದೇವೆ, ನಮ್ಮ ಸುತ್ತಮುತ್ತಲಿನ ನಾನಾ ಸ್ಥಾಪನೆಗಳ ಸಿಹಿನೀರಿನ ಮೂಲಗಳ ಬಳಕೆಯ ಮೇಲಿನ ಒತ್ತಡ ಕಡಿಮೆ ಮಾಡುತ್ತಿದ್ದೇವೆ. ಈ ಉಪಕ್ರಮವನ್ನು ಹೆಚ್ಚಿನ ಸಮುಚ್ಛಯಗಳು ಅಳವಡಿಸಿಕೊಂಡರೆ, ದೊಡ್ಡ ಪ್ರದೇಶಕ್ಕೆ ಪ್ರಯೋಜನವಾಗುವ ಸ್ವಯಂ-ಸುಸ್ಥಿರ ಪರಿಸರ ವ್ಯವಸ್ಥೆ ರಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: Avneet Kaur: "ಬಂಟಿ ನಿಮ್ಮ ಸೋಪು ಸ್ಲೋನಾ" ಅಂತ ಡೈಲಾಗ್ ಹೊಡೆದ ಲೈಫ್‌ಬಾಯ್ ಬೆಡಗಿ ಈಗ ಹೇಗಿದ್ದಾರೆ ಗೊತ್ತೇ??
ಬೋಸಾನ್ ವೈಟ್ ವಾಟರ್ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವುದಲ್ಲದೆ, ಅಪಾರ್ಟ್ ಮೆಂಟ್ ಗಳು ತಮ್ಮ ಹೆಚ್ಚುವರಿ ನೀರನ್ನು ಸುಸ್ಥಿರವಾಗಿ ನಿರ್ವಹಿಸಲು ಸೂಕ್ತವಾದ ಮಾರ್ಗ ಕಂಡುಹಿಡಿಯಲು ಸಹಾಯ ಮಾಡುತ್ತದೆ. ನಗರದ ಹೆಚ್ಚಿನ ಅಪಾರ್ಟ್ಮೆಂಟ್ಗಳು ತಮ್ಮ ಹೆಚ್ಚುವರಿ ಸಂಸ್ಕರಿಸಿದ ನೀರನ್ನು ಹೊರಹಾಕಲು ಯಾವುದೇ ಮಾರ್ಗಗಳಿಲ್ಲದ ಕಾರಣ 'ಶೂನ್ಯ ವಿಸರ್ಜನೆ ನೀತಿ'ಯನ್ನು ಅನುಸರಿಸಲು ಕಷ್ಟಪಡುತ್ತಿವೆ. ಅವರು ತಮ್ಮ ತ್ಯಾಜ್ಯ ನೀರನ್ನು ಎಸ್ಟಿಪಿಯಾಗಿ ಪರಿವರ್ತಿಸಿದರೂ, ಅವರು ಅದರಲ್ಲಿ ಕೇವಲ 20% ಮಾತ್ರ ಬಳಸಲು ಸಾಧ್ಯವಾಗುತ್ತದೆ. ಒಂದು ಎಕರೆ ತೋಟಕ್ಕೆ ಸಾಮಾನ್ಯವಾಗಿ ದಿನಕ್ಕೆ ಸರಾಸರಿ 5,000 ಲೀಟರ್ ನೀರು ಬೇಕಾಗುತ್ತದೆ. ಆದ್ದರಿಂದ, ಮರುಬಳಕೆ ಮಾಡಬೇಕಾದ ಹೆಚ್ಚುವರಿ ಎಸ್ ಟಿಪಿ ನೀರು ಯಾವಾಗಲೂ ಉಳಿದಿರುತ್ತದೆ ಬಳಕೆಯಾಗದ 80% ನೀರನ್ನು ಉತ್ತಮ ಗುಣಮಟ್ಟದ ಕುಡಿಯುವ ನೀರಾಗಿ ಪರಿವರ್ತಿಸಬಹುದು, ಅದನ್ನು ಹತ್ತಿರದ ಕೈಗಾರಿಕೆಗಳಿಗೆ ಪೂರೈಸಲು ಸಾಧ್ಯವಿದೆ.
ಪ್ರಸ್ತುತ, ಬೆಂಗಳೂರಿನ 4 ಅಪಾರ್ಟ್ಮೆಂಟ್ಗಳಲ್ಲಿ ಬೋಸಾನ್ ವೈಟ್ವಾಟರ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪ್ರತಿದಿನ 8 ಲಕ್ಷ ಲೀಟರ್ ಎಸ್ಟಿಪಿ ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡುತ್ತದೆ.
ಬೋಸಾನ್ ವೈಟ್ ವಾಟರ್ ಬಗ್ಗೆ
ಕೈಗಾರಿಕೆಗಳು, ಐಟಿ ಪಾರ್ಕ್ ಗಳು, ಮಾಲ್ ಗಳು ಮತ್ತು ಅಪಾರ್ಟ್ ಮೆಂಟ್ ಸಮುಚ್ಛಯಗಳು ತಮ್ಮ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ವಿಧಾನವನ್ನು ಬದಲಾಯಿಸುವ ಉದ್ದೇಶದಿಂದ ಬೋಸಾನ್ ವೈಟ್ ವಾಟರ್ ಎಂಬ ವಾಟರ್ ಯುಟಿಲಿಟಿ ಕಂಪನಿಯನ್ನು ಸ್ಥಾಪಿಸಲಾಗಿದೆ.ವಿಕಾಸ್ ಬ್ರಹ್ಮಾವರ್ ಮತ್ತು ಗೌತಮ್ ದೇಸಿಂಗ್ ಅವರು 2011ರಲ್ಲಿ ಸ್ಥಾಪಿಸಿದ ಬೋಸಾನ್ ವೈಟ್ ವಾಟರ್ ಒಳಚರಂಡಿ ಸಂಸ್ಕರಣಾ ಘಟಕಗಳಿಂದ ಬರುವ ನೀರನ್ನು ಕುಡಿಯುವ ಉತ್ತಮ ಗುಣಮಟ್ಟದ ನೀರಾಗಿ ಪರಿವರ್ತಿಸುತ್ತದೆ, ಇದನ್ನು ಗೃಹ ಉದ್ದೇಶಗಳಿಗಾಗಿ, ವಾಣಿಜ್ಯ ಕಟ್ಟಡಗಳಲ್ಲಿ ಕೇಂದ್ರೀಕೃತ ಹವಾನಿಯಂತ್ರಣ ಮತ್ತು ಕುಡಿಯಲು ಸಹ ಬಳಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.