ಬೆಂಗಳೂರು: ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಸಚಿವ ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಅವರು, ತಮ್ಮ ಸಹೋದರ ಮುರುಗೇಶ್ ನಿರಾಣಿ ವಿರುದ್ಧ ಮಾತನಾಡಿದ್ದ ಬಸವನಗೌಡ ಪಾಟೀಲ ಯತ್ನಾಳ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ ನಿನ್ನದೇ ಭಾಷೆಯಲ್ಲಿಯೇ ಉತ್ತರ ನೀಡುತ್ತೇನೆ. ಒಬ್ಬ ಅಪ್ಪನಿಗೆ ಹುಟ್ಟದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ’ ಎಂದು ಸಂಗಮೇಶ್ ನಿರಾಣಿ ಕಿಡಿಕಾರಿದ್ದಾರೆ.
ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ ನಿನ್ನದೇ ಭಾಷೆಯಲ್ಲಿಯೇ ಉತ್ತರನೀಡುತ್ತೇನೆ. ಒಬ್ಬ ಅಪ್ಪನಿಗೆ ಹುಟ್ಟದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ.ನೇರ ಕಾದಾಟಕ್ಕೆ ಕಣಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ರಾಜಕೀಯ ಮರುಜನ್ಮ ಕೊಟ್ಟವರಿಗೆರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ.
— Sangamesh Nirani (@SangameshNirani) January 15, 2023
ಇದನ್ನೂ ಓದಿ: ಇದೇ ಕೊನೆ ಚುನಾವಣೆ ಎಂದು ಎಷ್ಟು ಬಾರಿ ನುಡಿದಿರಿ, ಎಷ್ಟು ಬಾರಿ ತಪ್ಪಿದಿರಿ?: ಸಿದ್ದುಗೆ ಸುನೀಲ್ ಕುಮಾರ್ ಪ್ರಶ್ನೆ
‘ನೇರ ಕಾದಾಟಕ್ಕೆ ಕಣಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ರಾಜಕೀಯ ಮರುಜನ್ಮ ಕೊಟ್ಟವರಿಗೆ ರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ. ಲಕ್ಷಾಂತರ ಜನರಿಗೆ ಅನ್ನ, ಆಶ್ರಯ, ಜೀವನ ಕೊಟ್ಟ ಧರ್ಮಾತ್ಮ ಮುರುಗೇಶ ನಿರಾಣಿಯವರ ತೇಜೋವಧೆಗೆ ನಿಂತ ಮುಠ್ಠಾಳರಿಗೆ ಕಾಲವೇ ಉತ್ತರ ನೀಡುತ್ತದೆ. ಮುರುಗೇಶ ನಿರಾಣಿ ಎಂಬ ಪ್ರಖರ ಸೂರ್ಯನೆದರು ನಿಂತವರು ಭಸ್ಮವಾಗಿದ್ದಾರೆ ನೆನಪಿರಲಿ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಲಕ್ಷಾಂತರ ಜನರಿಗೆ ಅನ್ನ, ಆಶ್ರಯ, ಜೀವನ ಕೊಟ್ಟ ಧರ್ಮಾತ್ಮ ಮುರುಗೇಶ ನಿರಾಣಿಯವರ ತೇಜೋವಧೆಗೆ ನಿಂತ ಮುಠ್ಠಾಳರಿಗೆ ಕಾಲವೇ ಉತ್ತರ ನೀಡುತ್ತದೆ. ಮುರುಗೇಶ ನಿರಾಣಿ ಎಂಬ ಪ್ರಖರ ಸೂರ್ಯನೆದರು ನಿಂತವರು ಭಸ್ಮವಾಗಿದ್ದಾರೆ ನೆನಪಿರಲಿ.
— Sangamesh Nirani (@SangameshNirani) January 15, 2023
ನಿರಾಣಿ V/s ಯತ್ನಾಳ್ ವಾಕ್ಸಮರ!
ಪಂಚಮಸಾಲಿ ಸಮುದಾಯಕ್ಕೆ 2 A ಮೀಸಲಾತಿ ವಿಚಾರವಾಗಿ ಮುರುಗೇಶ ನಿರಾಣಿ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ವಾಕ್ಸಮರ ನಡೆಯುತ್ತಿದೆ. ಆರಂಭದಲ್ಲಿ ಜೊತೆಗಿದ್ದ ನಿರಾಣಿ ಸಚಿವ ಸ್ಥಾನ ಸಿಕ್ಕ ಬಳಿಕ ತಮ್ಮ ವರಸೆ ಬದಲಾಯಿದ್ದಾರೆಂಬ ಆರೋಪ ಮಾಡಿದ್ದ ಶಾಸಕ ಯತ್ನಾಳ್, ‘ಪಿಂಪ್ ಸಚಿವ’ ಪದ ಪ್ರಯೋಗ ಮಾಡಿದ್ದರು. ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ್ದ ಮುರುಗೇಶ ನಿರಾಣಿ ಕಠಿಣ ಪದಗಳಿಂದ ತಿರುಗೇಟು ನೀಡಿದ್ದರು.
ಇದನ್ನೂ ಓದಿ: ರಾಜ್ಯದ ಪ್ರತಿ ಕುಟುಂಬದ ಗೃಹಣಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು-ಕಾಂಗ್ರೆಸ್ ಘೋಷಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.