Heart Attack: ಪ್ರವಚನ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಜೀವಬಿಟ್ಟ ಸ್ವಾಮೀಜಿ, ಮೊಬೈಲ್ ನಲ್ಲಿ ಸೆರೆ

ತಮ್ಮ ಹುಟ್ಟುಹಬ್ಬದ ದಿನವೇ ಆಶೀರ್ವಚನ ನೀಡುತ್ತಿದ್ದ ಸ್ವಾಮೀಜಿಗಳು ವಿಧಿವಶರಾಗಿದ್ದಾರೆ.

Written by - Puttaraj K Alur | Last Updated : Nov 16, 2021, 04:45 PM IST
  • ವೇದಿಕೆ ಮೇಲೆಯೇ ಪ್ರವಚನ ನೀಡುತ್ತಿದ್ದ ವೇಳೆ ಹೃದಯಾಘಾತದಿಂದ ಸ್ವಾಮೀಜಿ ನಿಧನ
  • ಬಸವಯೋಗ ಮಂಟಪ ಟ್ರಸ್ಟ್‌ ನ ಬಳೋಬಾಳ ಮಠದ ಶ್ರೀಸಂಗನಬಸವ ಮಹಾಸ್ವಾಮೀಜಿ ವಿಧಿವಶ
  • ಹುಟ್ಟುಹಬ್ಬದ ದಿನ ಆಶೀರ್ವಚನ ನೀಡುತ್ತಿದ್ದಾಗಲೇ ಸ್ವಾಮೀಜಿ ಹಠಾತ್ ನಿಧನ ಹೊಂದಿದ್ದಾರೆ
Heart Attack: ಪ್ರವಚನ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಜೀವಬಿಟ್ಟ ಸ್ವಾಮೀಜಿ, ಮೊಬೈಲ್ ನಲ್ಲಿ ಸೆರೆ title=
ಹೃದಯಾಘಾತದಿಂದ ಸ್ವಾಮೀಜಿ ನಿಧನ

ಬೆಳಗಾವಿ: ಕಾರ್ಯಕ್ರಮದಲ್ಲಿ ಜನ್ಮದಿನದ ಪ್ರವಚನ ನೀಡುತ್ತಿರುವಾಗಲೇ ತೀವ್ರ ಹೃದಯಾಘಾತ(Heart Attack)ದಿಂದ ವೇದಿಕೆಯಲ್ಲಿಯೇ ಸ್ವಾಮೀಜಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಈ ಆಘಾತಕಾರಿ ಘಟನೆಯು ನವೆಂಬರ್ 6ರಂದು ಬೆಳಗಾವಿ( Belagavi)ಯಲ್ಲಿ ನಡೆದಿದ್ದು, ಸ್ವಾಮೀಜಿಗಳು ಸಾವನ್ನಪ್ಪಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಾತನಾಡುತ್ತಿದ್ದಾಗ ಕುಸಿದುಬಿದ್ದ ಸ್ವಾಮೀಜಿ

ಬೆಳಗಾವಿಯಲ್ಲಿ ನ.6ರಂದು ಶ್ರೀ ಸಂಗನಬಸವ ಮಹಾಸ್ವಾಮೀಜಿ(63) ಭಕ್ತರಿಗೆ ತಮ್ಮ ಜನ್ಮದಿನದ ಪ್ರವಚನ ನೀಡುತ್ತಿದ್ದರು. ಚೆನ್ನಾಗಿಯೇ ಮಾತನಾಡುತ್ತಿದ್ದ ಸ್ವಾಮೀಜಿಗಳಿಗೆ ಇದ್ದಕ್ಕಿದ್ದಂತೆಯೇ ತಾವು ಕುಳಿತ್ತಿದ್ದ ಚೇರ್ ಮೇಲೆಯೇ ಕುಸಿದುಬೀಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜವಾಗಿಲ್ಲ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Rains in Karnataka : ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಭಾಗದಲ್ಲಿ ನಾಳೆ ಭಾರಿ ಮಳೆ!

ಸ್ವಾಮೀಜಿಗಳ ಹಠಾತ್ ನಿಧನದಿಂದ ಭಕ್ತರಿಗೆ ಆಘಾತ

ಶ್ರೀ ಸಂಗನಬಸವ ಮಹಾಸ್ವಾಮೀಜಿ(Sanganabasava swamiji) ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ(Gokak Taluk) ಬಳೋಬಾಳ  ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್‌ ನ ಮಠದ ಸ್ವಾಮೀಜಿಯಾಗಿದ್ದರು. ತಮ್ಮದೇ ಹುಟ್ಟುಹಬ್ಬ ಆಚರಿಸಿ, ಖುಷಿ ಖುಷಿಯಿಂದಲೇ ಆಶೀರ್ವಚನ ನೀಡುತ್ತಿದ್ದ ಸ್ವಾಮೀಜಿ ಹೀಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು ಭಕ್ತರಿಗೆ ಆಘಾತವನ್ನುಂಟು ಮಾಡಿದೆ. ಸ್ವಾಮೀಜಿ ಅಸುನೀಗುವ ದೃಶ್ಯ ಭಕ್ತರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ಕಳೆದ ತಿಂಗಳು ವೇದಿಕೆಯಲ್ಲೇ ಕಾಂಗ್ರೆಸ್ ನಾಯಕ ಸಾವನ್ನಪ್ಪಿದ್ದರು

ಕಳೆದ ತಿಂಗಳು ರಾಜಸ್ಥಾನದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಉಪಚುನಾವಣೆ(Byelection)ಯ ಪ್ರಚಾರದ ವೇಳೆ ವೇದಿಕೆಯಲ್ಲಿ ಭಾಷಣ ಮಾಡುವಾಗ ಕಾಂಗ್ರೆಸ್ ನಾಯಕರೊಬ್ಬರು ಸಾವನ್ನಪ್ಪಿದ್ದರು. ಆ ಕಾರ್ಯಕ್ರಮದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಕೂಡ ವೇದಿಕೆಯಲ್ಲಿದ್ದರು. ಅ.26ರಂದು ಯುವ ಕಾಂಗ್ರೆಸ್ ಮುಖಂಡರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಅವರಿಗೆ ಹೃದಯಾಘಾತ(Heart Attack)ವಾಗಿತ್ತು. ಇದ್ದಕ್ಕಿದ್ದಂತೆಯೇ ವೇದಿಕೆಯ ಮೇಲೆಯೇ ಅವರು ಕುಸಿದುಬಿದ್ದಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಾರ್ಗಮಧ್ಯೆ ಮೃತಪಟ್ಟಿದ್ದರು. ಕಾಂಗ್ರೆಸ್ ಮುಖಂಡರ ನಿಧನಕ್ಕೆ ಸಿಎಂ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರೇ ಸಿಎಂ ಎಂದು ಘೋಷಿಸುವ ಧೈರ್ಯ ಇದೆಯೇ ಸಿದ್ದರಾಮಯ್ಯ?: ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News