ದಾವಣಗೆರೆ :ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್-19 ಎರಡನೇ ಅಲೆಯ ಸಹಾಯಧನದ ಮೊತ್ತ ರೂ.3000/-ಗಳನ್ನು ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದು, ಇದುವರೆಗೂ ಒಂದು ಬಾರಿಯ ಸಹಾಯಧನ ಸ್ವೀಕರಿಸದೇ ಇರುವವರು, ಅಗತ್ಯ ದಾಖಲೆಗಳೊಂದಿಗೆ ನ. 30 ರ ಒಳಗಾಗಿ ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಈಗಾಗಲೇ ರೂ.3000/-ಗಳ ಮೊತ್ತವನ್ನು ನೇರ ನಗದು ವರ್ಗಾವಣೆ (ಡಿಬಿಟಿ ಆಧಾರ್) ಮೂಲಕ ಪಾವತಿಸಲು ಇ-ಗರ‍್ನನ್ಸ್ ಇಲಾಖೆಗೆ ಕಳುಹಿಸಲಾಗಿದ್ದು ಈ ರೀತಿ ಕಳುಹಿಸಲಾದ ಡೇಟಾದಲ್ಲಿ ಶೇ.90 ರಷ್ಟು ಕಾರ್ಮಿಕರಿಗೆ ಸಹಾಯಧನ ಪಾವತಿಯಾಗಿರುತ್ತದೆ ಹಾಗೂ ಉಳಿದ ಶೇ.10ರಷ್ಟು ಕಾರ್ಮಿಕರಿಗೆ ವಿವಿಧ ಕಾರಣಗಳಿಂದ ಪಾವತಿಯಾಗಿರುವುದಿಲ್ಲ.
ಇದನ್ನೂ ಓದಿ- Gautam Gambhir: ರೋಹಿತ್ ಶರ್ಮಾ-ರಾಹುಲ್ ದ್ರಾವಿಡ್ ಭಾರತಕ್ಕೆ ಐಸಿಸಿ ಪ್ರಶಸ್ತಿ ಗೆಲ್ಲುತ್ತಾರೆ- ಗೌತಮ್ ಗಂಭೀರ್
ಫಲಾನುಭವಿಯ ಆಧಾರ್ ಸಂಖ್ಯೆ, ಅವರ ಬ್ಯಾಂಕ್ ಖಾತೆಗೆ ಜೋಡಣೆಯಾಗದಿರುವುದು ಹಾಗೂ ಬ್ಯಾಂಕ್‌ನವರು ಈ ಬ್ಯಾಂಕ್ ಖಾತೆಯನ್ನು ಎನ್‌ಸಿಪಿಐ ಗೆ ಮ್ಯಾಪಿಂಗ್ ಮಾಡಿರುವುದಿಲ್ಲವಾದ ಕಾರಣ ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ ಸಹಾಯಧನದ ಮೊತ್ತವು ಪಾವತಿಯಾಗಿರುವುದಿಲ್ಲ. ಈ ರೀತಿ ಜೋಡಣೆಯಾಗದಿರುವವರ ಮಾಹಿತಿಯು ಇನ್ಯಾವುದೇ ಕಾರಣದಿಂದ ಸಹಾಯಧನ ದೊರಕದ ಫಲಾನುಭವಿಗಳ ಮಾಹಿತಿಯನ್ನು ಮಂಡಳಿಯ https://karbwwb,karnatak.go.in/page/Covid+19+Relief+DBT+Details/en ಜಾಲತಾಣದಲ್ಲಿ ಅಪ್‌ಡೇಟ್ ಮಾಡಲು ನ.30 ಕೊನೆಯ ದಿನವಾಗಿರುತ್ತದೆ. ತದನಂತರ ಯಾವುದೇ ಅರ್ಜಿಯನ್ನು ಸಹಾಯಧನ ಮಂಜೂರಾತಿಗೆ ಪರಿಗಣಿಸಲಾಗುವುದಿಲ್ಲ.
ಇದನ್ನೂ ಓದಿ-ಕನ್ನಡಿಗ ಕೆ.ಎಲ್.ರಾಹುಲ್ ಪಾಕ್ ಗೆ ಅಪಾಯಕಾರಿಯಾಗಲಿದ್ದಾರೆ ಎಂದ ಮ್ಯಾಥ್ಯೂ ಹೇಡನ್
ಇದುವರೆಗೂ ಕೋವಿಡ್-19 2ನೇ ಅಲೆಯಲ್ಲಿ ಒಂದು ಬಾರಿಯ ಸಹಾಯಧನ ರೂ.3000/-ವನ್ನು ಮಂಡಳಿಯಿAದ ಸ್ವೀಕರಿಸದೇ ಇರುವ ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಬಗ್ಗೆ ಹಾಗೂ ಬ್ಯಾಂಕ್‌ನವರು ಈ ಬ್ಯಾಂಕ್ ಖಾತೆಯನ್ನು ಎನ್‌ಸಿಪಿಐ ಗೆ ಮ್ಯಾಪಿಂಗ್ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡು ಅಗತ್ಯ ದಾಖಲೆಗಳೊಂದಿಗೆ ನ.30 ಒಳಗೆ ಜಿಲ್ಲೆಯ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.\
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.