ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಬಿ.ವಿ. ವೀರಭದ್ರಪ್ಪ ನಿಧನ

ದಾವಣಗೆರೆ ಜಿಲ್ಲೆಯ ಜೆಜೆಎಂ ವೈದ್ಯಕೀಯ ಕಾಲೇಜಿಗೆ ಬಿವಿವಿ ದೇಹ ದಾನ.

Last Updated : Sep 21, 2017, 10:38 AM IST
ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಬಿ.ವಿ. ವೀರಭದ್ರಪ್ಪ ನಿಧನ title=

ದಾವಣಗೆರೆ:  ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಬಿ.ವಿ.ವೀರಭದ್ರಪ್ಪ ತಮ್ಮ 83ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸಂಜೆಯ ವೇಳೆಗೆ ಅವರ ಆಶಯದಂತೆ ದಾವಣಗೆರೆ ಜಿಲ್ಲೆಯ ಜೆಜೆಎಂ ವೈದ್ಯಕೀಯ ಕಾಲೇಜಿಗೆ ದೇಹ ದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿವಿವಿ, ಇಂದು ಬೆಳಿಗ್ಗೆ 3.30ಕ್ಕೆ ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ವೀರಭದ್ರಪ್ಪ ಪತ್ರಿಕೋದ್ಯಮದಲ್ಲಿ ಜನರ ಗಮನ ಸೆಳೆದಿದ್ದರು. ಲಂಕೇಶ್ ಪತ್ರಿಕೆಯಲ್ಲಿ ಎರಡು ದಶಕಗಳ ಕಾಲ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು. 

ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಬಿ.ವಿ.ವೀರಭದ್ರಪ್ಪ ನಿಧನಕ್ಕೆ  ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ವೀರಪದ್ರಪ್ಪ ಅವರು ಸುಮಾರು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯಲ್ಲಿ ಒಬ್ಬ ದಿಟ್ಟ ವರದಿಗಾರರಾಗಿ ಸೇವೆಸಲ್ಲಿಸಿದ್ದರು ಎಂದು ಎಚ್ಡಿ. ದೇವೇಗೌಡ ತಿಳಿಸಿದರು.

Trending News