ನಲಪಾಡ್ ಜೊತೆ ಶಿಲ್ಪಾ ಗಣೇಶ್ ದಂಪತಿ ಫೋಟೋ ವೈರಲ್ !

    

Last Updated : Feb 23, 2018, 02:56 PM IST
ನಲಪಾಡ್ ಜೊತೆ ಶಿಲ್ಪಾ ಗಣೇಶ್ ದಂಪತಿ ಫೋಟೋ ವೈರಲ್ ! title=

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರನ ಒಂದು ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ವಿದ್ವತ್ ಮೇಲಿನ ನಲಪಾಡ್ ಹಲ್ಲೆ ಪ್ರಕರಣವನ್ನು ಬಳಸಿಕೊಂಡು ಬಿಜೆಪಿ ನಾಯಕರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕರ್ನಾಟಕದಲ್ಲಿ ಇನ್ನೆರಡು ತಿಂಗಳಲ್ಲಿ ಚುನಾವಣೆಗೆ ಇರುವುದರಿಂದ  ಬಿಜೆಪಿ ನಾಯಕರು ಕೂಡ ಇದನ್ನು ಚುನಾವಣೆ ವಿಷಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ ಮೊಹಮದ್ ನಲಪಾಡ್ ನನ್ನು ಕಾಂಗ್ರೆಸ್ ಗೂಂಡಾ ಎಂದು ಕರೆದಿದ್ದರು.ಈ ಮಧ್ಯೆ ಬಿಜೆಪಿ ನಾಯಕಿಯಾಗಿರೋ ಶಿಲ್ಪ ಗಣೇಶ್ ಕೂಡ ಇದೇ ವಿಚಾರವಾಗಿ ಸರಕಾರವನ್ನು ಟೀಕಿಸಿದ್ದರು.

ಆದರೆ ಈಗ ಶಿಲ್ಪಾ ಗಣೇಶ್ ರವರು ಮಹಮದ್ ನಳಪಾಡ್ ಜತೆ ಜತೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ  ಸಕ್ಕತ್ ವೈರಲ್ ಆಗುತ್ತಿದೆ. ಈಗ ಇದೆ ಅವಕಾಶವನ್ನು ಬಳಸಿಕೊಂಡು ಸಿಕ್ಕಿದ್ದೆ ಚಾನ್ಸ್ ಎನ್ನುವ ಹಾಗೆ ಕಾಂಗ್ರೆಸ್ ನಾಯಕರು ಇದೇ ಫೋಟೊ ಬಳಸಿಕೊಂಡು ಬಿಜೆಪಿ ವಿರುದ್ಧ ಪ್ರತಿತಂತ್ರ ಹೆಣೆಯುತ್ತಿದ್ದಾರೆ.

Trending News