ಬೆಂಗಳೂರು: ಹಲವು ವರ್ಷಗಳಿಂದ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸುತ್ತಿದ್ದ ಕನ್ನಡ ಚಿತ್ರರಂಗದ ಬೇಡಿಕೆಗೆ ಸ್ಪಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಪ್ಪಿಗೆ ನೀಡಿದ್ದಾರೆ. ಆ ಮೂಲಕ ಮೈಸೂರು ನಗರಕ್ಕೆ ಸಿನಿ ನಗರಿಯ ಹಿರಿಮೆಯನ್ನು ನೀಡಿದ್ದಾರೆ.
ಕರ್ನಾಟಕದಲ್ಲಿ ಚಿತ್ರರಂಗವನ್ನು ಬೆಳೆಸುವ ನಿಟ್ಟಿನಲ್ಲಿ ಬಹಳ ದಿನಗಳಿಂದ ಚಿತ್ರರಂಗಕ್ಕೆ ಫಿಲಂ ಸಿಟಿ ಅವಶ್ಯಕವಾಗಿತ್ತು ,ಆ ನಿಟ್ಟಿನಲ್ಲಿ ಸಿದ್ದರಾಮಯ್ಯನವರು ಚಿತ್ರರಂಗದ ಬೇಡಿಕೆಗೆ ಒಪ್ಪಿಗೆ ನೀಡಿದ್ದಾರೆ. ಸಿನಿ ರಂಗದ ಆಶಯದಂತೆ ಮೈಸೂರನ್ನು ಫಿಲಂ ಸಿಟಿಗೆ ಆಯ್ಕೆ ಮಾಡಲಾಗಿದೆ.ತಮ್ಮ ಅಂತಿಮ ಬಜೆಟ್ ಸಿದ್ದತೆಯಲ್ಲಿ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲು ಭೂಮಿಯನ್ನು ಈಗಾಗಲೇ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅದ್ಯಕ್ಷ ಮತ್ತು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮುಖ್ಯಮಂತ್ರಿಗಳು ಫೆಬ್ರವರಿ ತಿಂಗಳಿನಲ್ಲೇ ಫಿಲ್ಮ ಸಿಟಿಯ ಅಡಿಗಲ್ಲು ಸಮಾರಂಭವನ್ನು ಹಮ್ಮಿಕೊಳ್ಳಲು ಸೂಚಿಸಿದ್ದಾರೆ.ಇದರಿಂದ ಫಿಲಂ ಸಿಟಿಯ ಮೂಲಕ ಚಿತ್ರರಂಗ ಹೊಸ ಗರಿಮೆ ಬಂದಂತಾಗಿದೆ ಎಂದು ಸರ್ಕಾರದ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.