ದಸರಾ ಪ್ರಯುಕ್ತ ಆರಂಭವಾಗಲಿವೆ ವಿಶೇಷ ರೈಲುಗಳ ಸಂಚಾರ

ದಸರಾ ಹಬ್ಬದ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ನೈಋತ್ಯ ರೈಲ್ವೆ ವಿಶೇಷ ರೈಲು ಸಂಚಾರಕ್ಕೆ ನಿರ್ಧರಿಸಿದೆ.

Last Updated : Oct 8, 2018, 05:35 PM IST
ದಸರಾ ಪ್ರಯುಕ್ತ ಆರಂಭವಾಗಲಿವೆ ವಿಶೇಷ ರೈಲುಗಳ ಸಂಚಾರ title=

ಹುಬ್ಬಳ್ಳಿ: ದಸರಾ ಹಬ್ಬದ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ನೈಋತ್ಯ ರೈಲ್ವೆ ವಿಶೇಷ ರೈಲು ಸಂಚಾರಕ್ಕೆ ನಿರ್ಧರಿಸಿದೆ. ಬೆಂಗಳೂರು ನಗರ-ಮೈಸೂರು ವಿಶೇಷ ಎಕ್ಸ್‌ಪ್ರೆಸ್‌ (06557) ರೈಲು ಅಕ್ಟೋಬರ್ 9 ರಿಂದ ಅಕ್ಟೋಬರ್ 21ರವರೆಗೆ ಪ್ರತಿದಿನ ಬೆಳಗ್ಗೆ 08:45ಕ್ಕೆ ಬೆಂಗಳೂರು ನಗರದಿಂದ ಹೊರಟು ಬೆಳಗ್ಗೆ 11:35ಕ್ಕೆ ಮೈಸೂರು ತಲುಪಲಿದೆ. 

ಅದೇ ರೀತಿ ಅ.10 ರಿಂದ 22ರ ವರೆಗೆ ಮೈಸೂರಿನಿಂದ ಮಧ್ಯಾಹ್ನ 12:50ಕ್ಕೆ ಹೊರಡುವ ರೈಲು (06558) ಮಧ್ಯಾಹ್ನ 3:45ಕ್ಕೆ ಬೆಂಗಳೂರು ನಗರ ನಿಲ್ದಾಣಕ್ಕೆ ಬಂದು ಸೇರಲಿದೆ. ಒಟ್ಟು 13 ಟ್ರಿಪ್‌ ರೈಲು ಸಂಚರಿಸಲಿದೆ. 

ಅದೇ ರೀತಿ ಅಕ್ಟೋಬರ್ 9 ರಿಂದ 25ರವರೆಗೆ ಶ್ರವಣಬೆಳಗೊಳ - ಶಿವಮೊಗ್ಗ ಟೌನ್ ವಿಶೇಷ ಎಕ್ಸ್ ಪ್ರೆಸ್ ವಾರಕ್ಕೆ ಮೂರು ದಿನ ಸಂಚರಿಸಲಿದೆ. ಅಲ್ಲದೆ ಯಶವಂತಪುರ-ಮೈಸೂರು ಪ್ಯಾಸೆಂಜರ್‌(56215) ರೈಲು ಆದಿಚುಂಚನಗಿರಿ ಹಾಗೂ ಸಿದ್ದಾಪುರ, ಬೆಂಗಳೂರು ನಗರ-ಕೋಲಾರ ಪ್ಯಾಸೆಂಜರ್‌ (76551) ರೈಲು ದೊಡ್ಡನಟ್ಟ, ಜನ್ನಘಟ್ಟ, ಗಿಡ್ನಳ್ಳಿ ನಿಲ್ದಾಣದಲ್ಲಿ; ಚನ್ನಪಟ್ಟಣ-ಕೋಲಾರ (76525) ದೊಡ್ಡನಟ್ಟ, ಗೊಟ್ಟಿಹಳ್ಳಿ, ಜನ್ನಘಟ್ಟ ಹಾಗೂ ಗಿಡ್ನಳ್ಳಿ ನಿಲ್ದಾಣದಲ್ಲಿ 3 ತಿಂಗಳು ನಿಲುಗಡೆಗೊಳ್ಳುವುದಿಲ್ಲ ಎಂದು ನೈಋತ್ಯ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 

Trending News