ನವದೆಹಲಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ(Sambra Airport)ದಲ್ಲಿ ಭಾರೀ ದುರಂತವೊಂದು ತಪ್ಪಿದೆ. ಖಾಸಗಿ ರಂಗದ ಸ್ಪೈಸ್ ಜೆಟ್ ವಿಮಾನ(Spice Jet Fligt)ವು ರಾಂಗ್ ರನ್‌ವೇನಲ್ಲಿ ಲ್ಯಾಂಡ್ ಆಗುವ ಮೂಲಕ ಕೆಲಕಾಲ ಆತಂಕ ಮೂಡಿಸಿತ್ತು. ಸದರಿ ವಿಮಾನವು ಬೆಳಗಾವಿ ಮತ್ತು ಹೈದರಾಬಾದ್ ಮಾರ್ಗದಲ್ಲಿ ಸಂಚರಿಸುತ್ತಿತ್ತು ಎಂದು ತಿಳಿದುಬಂದಿದೆ.
ಸ್ಪೈಸ್ ಜೆಟ್ ವಿಮಾನವು ಭಾನುವಾರ ಬೆಳಗಾವಿಯ ವಿಮಾನ ನಿಲ್ದಾಣ(Belagavi Airport)ದಲ್ಲಿ ನಿಗದಿತ ರನ್‌ವೇ ತುದಿಯ ಬದಲಿಗೆ ಇನ್ನೊಂದು ತುದಿಯಲ್ಲಿ ತಪ್ಪಾಗಿ ಇಳಿದಿದೆ. ವಿಮಾನವು ರಾಂಗ್ ರನ್‌ವೇನಲ್ಲಿ ಲ್ಯಾಂಡ್ ಆಗಲು ಕಾರಣರಾದ ಪೈಲಟ್‌ಗಳನ್ನು ಅಮಾನತಿನಲ್ಲಿಡಲಾಗಿದೆ. ಭಾನುವಾರ ಈ ಘಟನೆ ನಡೆದಿದ್ದು, ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಅಂತಾ ವಿಮಾನಯಾನ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯಗೆ ಪಿಎಚ್‌ಡಿ ನೀಡಬಹುದು: ಬಿಜೆಪಿ ಟೀಕೆ
‘ಅಕ್ಟೋಬರ್ 24 ರಂದು ಸ್ಪೈಸ್ ಜೆಟ್ ವಿಮಾನ(SpiceJet DASH8 Q400 aircraft)ವು ಹೈದರಾಬಾದ್‌ನಿಂದ ಬೆಳಗಾವಿಗೆ ಹಾರಾಟ ನಡೆಸಿತು. ಲ್ಯಾಂಡ್ ಆಗುವ ವೇಳೆ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸಂಚಾರ ನಿಯಂತ್ರಕ (ATC) ವಿಭಾಗದವರು ರನ್‌ವೇ 26ರಲ್ಲಿ ಇಳಿಸುವಂತೆ ಸೂಚಿಸಿದ್ದರು. ಆದರೆ ಪೈಲಟ್‌ಗಳು ವಿಮಾನವನ್ನು ರನ್‌ವೇ 8 (RWY08- runway 8)ರಲ್ಲಿ ಇಳಿಸಿದ್ದಾರೆ. ಈ ಮೂಲಕ ನಿಯೋಜಿತ ರನ್‌ವೇನಲ್ಲಿ ವಿಮಾನ ಇಳಿಸುವ ಬದಲು, ಬದಲಿ ರನ್‌ವೇಯಲ್ಲಿರುವ ಮತ್ತೊಂದು ತುದಿಯಲ್ಲಿ ಇಳಿಸಲಾಗಿದೆ ಅಂತಾ ವಿಮಾನಯಾನ ಸಂಸ್ಥೆ ತಿಳಿಸಿದೆ.
8ನೇ ರನ್‌ವೇನಲ್ಲಿ ಯಾವುದೇ ವಿಮಾನ ಇಲ್ಲದಿದ್ದರಿಂದ ಅಪಾಯವುಂಟಾಗಿಲ್ಲ. ಒಂದು ವೇಳೆ ಯಾವುದಾದರೂ ವಿಮಾನ ಇದ್ದಿದ್ದರೆ ದುರಂತ ಸಂಭವಿಸುವ ಸಾಧ್ಯತೆ ಇತ್ತು ಅಂತಾ ತಿಳಿದುಬಂದಿದೆ. ವಿಮಾನ ಅಪಘಾತ ತನಿಖಾ ದಳವು ಈ ಬಗ್ಗೆ ತನಿಖೆ ಆರಂಭಿಸಿದ್ದು, ಪೈಲಟ್‌ಗಳನ್ನು ವಿಚಾರಣೆಗೊಳಪಡಿಸಿದೆ.
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಅಫ್ಘಾನಿಸ್ಥಾನಕ್ಕೆ ಕಳುಹಿಸಬೇಕು: ವಿ.ಶ್ರೀನಿವಾಸ್ ಪ್ರಸಾದ್ ಕಿಡಿಕಿಡಿ
‘ವಿಮಾನ ತುಂಬಾ ಸೇಫ್ ಆಗಿ ಕೆಳಗಿಳಿದಿದೆ. ಈ ಬೆಳವಣಿಗೆ ಬಗ್ಗೆ ವಿಮಾನಯಾನ ಸಂಸ್ಥೆ ತಕ್ಷಣ ಕ್ರಮ ಕೈಗೊಂಡಿದ್ದು, ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ(Directorate General of Civil Aviation)ಕ್ಕೆ ಮಾಹಿತಿ ನೀಡಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆ(Aircraft Accident Investigation Bureau)ಗೆ ಮಾಹಿತಿ ನೀಡಲಾಗಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ