ರಾಜ್ಯ ಬಿಜೆಪಿಗೆ 'ಸ್ಟಾರ್‌' ಬಲ: 'ರಾಜ್ಯಸಭಾ ಅಖಾಡ'ಕ್ಕಿಳಿಯಲಿದ್ದರಾ ತಲೈವಾ..!?

ಸೂಪರ್ ಸ್ಟಾರ್ ರಜನಿಕಾಂತ್‌ ರಾಜಕೀಯಕ್ಕೆ ಎಂಟ್ರಿ? 

Last Updated : Nov 16, 2020, 02:08 PM IST
  • ಸೂಪರ್ ಸ್ಟಾರ್ ರಜನಿಕಾಂತ್‌ ರಾಜಕೀಯಕ್ಕೆ ಎಂಟ್ರಿ?
  • ಕರ್ನಾಟಕ ರಾಜಕೀಯದಲ್ಲಿ ದುಮುಕಲಿದ್ದಾರೆ ತಲೈವಾ?
  • ಅಭ್ಯರ್ಥಿಯ ಹೆಸರು ಘೋಷಣೆಯಾಗುವ ಸಾಧ್ಯತೆ
ರಾಜ್ಯ ಬಿಜೆಪಿಗೆ 'ಸ್ಟಾರ್‌' ಬಲ: 'ರಾಜ್ಯಸಭಾ ಅಖಾಡ'ಕ್ಕಿಳಿಯಲಿದ್ದರಾ ತಲೈವಾ..!? title=

ಬೆಂಗಳೂರು: ಕರ್ನಾಟಕ ಬಿಜೆಪಿಗೆ ಸ್ಟಾರ್‌ ಬಲ ಸಿಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಬಹಳ ವರ್ಷಗಳಿಂದ ಸೂಪರ್ ಸ್ಟಾರ್ ರಜನಿಕಾಂತ್‌ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೇಳಿಸುತ್ತಲೇ ಇವೆ. ಸಧ್ಯ ತಲೈವಾ ರಾಜಕೀಯ ಎಂಟ್ರಿಗೆ ಕಾಲ ಕೂಡಿ ಬಂದಂತಿದ್ದು,ಕರ್ನಾಟಕ ರಾಜಕೀಯದಲ್ಲಿ ದುಮುಕಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೌದು, ಇಂತಹದ್ದೊಂದು ಅನುಮಾನ ಸದ್ಯ ಮನೆ ಮಾಡಿದ್ದು, ಬಿಜೆಪಿ ಅಭ್ಯರ್ಥಿಯಾಗಿ ರಜನೀಕಾಂತ್(Rajinikanth) ರಾಜ್ಯಸಭಾ ಅಖಾಡಕ್ಕಿಳಿಯಲಿದ್ದಾರೆಂಬ ಮಾತುಗಳು ಜೋರಾಗಿವೆ. ಈ ಮೂಲಕ ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ರಜನೀಕಾಂತ್ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದ್ರೆ, ಈ ಪಟ್ಟಿನಲ್ಲಿ ಖುಷ್ಬೂ ಹೆಸರು ಕೂಡಾ ಇದ್ದು, ಇಂದು ಅಭ್ಯರ್ಥಿಯ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರದಿಂದ 'ಸಾರಿಗೆ ನೌಕರ'ರಿಗೆ ಗುಡ್ ನ್ಯೂಸ್..!

ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ನಾವು ಯಾವುದೇ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಸ್ಥಾನಕ್ಕೆ ಡಿಸೆಂಬರ್ 1 ಕ್ಕೆ  ಚುನಾವಣೆ ನಡೆಯಲಿದೆ.

ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆ ಗೆಲ್ಲಲು ಸಿಎಂ ಬಿಎಸ್ ವೈ ರಣತಂತ್ರ..!

ಇತ್ತೀಚಿಗೆ ರಜನೀಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡ್ತೀನಿ ಅಂದಿದ್ದಕ್ಕೆ ಎಲ್ಲರು ಅವರು ಬಿಜೆಪಿ ಸೇರುತ್ತಾರೆ ಅನ್ನುವ ಮಾತುಗಳು ಕೇಳಿಬಂದಿದ್ದವು.ಇದಕ್ಕೆ ಕಾರಣ ರಜನೀಕಾಂತ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಅಲ್ಲದೆ ಇತ್ತೀಚಿಗೆ ರಜನೀಕಾಂತ್ ಅವರು ಆರ್ ಎಸ್ ಎಸ್ ನ ಗುರುಮೂರ್ತಿಯನ್ನುವವರನ್ನ ಭೇಟಿಯಾಗಿದ್ದಾರೆ. ಹೀಗಾಗಿ ತಲೈವಾ ರಾಜಕೀಯಕ್ಕೆ  ಎಂಟ್ರಿ ಕೊಡ್ತಾರಾ? ಎಂಬುದನ್ನ ಕಾಡು ನೋಡಬೇಕಾಗಿದೆ.

ಮಹಿಳೆಯರಿಗೆ 'ಗುಡ್ ನ್ಯೂಸ್': ₹ 3 ಲಕ್ಷ ಸಾಲ ಸೌಲಭ್ಯ- ಇಂದೇ ಅರ್ಜಿ ಹಾಕಿ

Trending News