ರಾಜ್ಯ ಸರ್ಕಾರದಿಂದ 'ಸಾರಿಗೆ ನೌಕರ'ರಿಗೆ ಗುಡ್ ನ್ಯೂಸ್..!

ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ದೀಪಾವಳಿ ಹಬ್ಬದಂದೇ ರಾಜ್ಯ ಸರ್ಕಾರ 'ಗುಡ್ ನ್ಯೂಸ್'

Last Updated : Nov 16, 2020, 01:31 PM IST
  • ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ದೀಪಾವಳಿ ಹಬ್ಬದಂದೇ ರಾಜ್ಯ ಸರ್ಕಾರ 'ಗುಡ್ ನ್ಯೂಸ್'
  • ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ನೌಕರರು ಭೇಟಿ ಮಾಡಿ, ಚರ್ಚೆ
  • ಸಾರಿಗೆ ಇಲಾಖೆಗೆ 634 ಕೋಟಿ ರಿಲೀಸ್!
ರಾಜ್ಯ ಸರ್ಕಾರದಿಂದ 'ಸಾರಿಗೆ ನೌಕರ'ರಿಗೆ ಗುಡ್ ನ್ಯೂಸ್..! title=

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ದೀಪಾವಳಿ ಹಬ್ಬದಂದೇ ರಾಜ್ಯ ಸರ್ಕಾರ 'ಗುಡ್ ನ್ಯೂಸ್'ನೀಡಿದೆ. ಬಾಕಿ ವೇತನವನ್ನು ಬಿಡುಗಡೆಗೆ ಸಿಎಂ ಸೂಚನೆ ನೀಡಿದ ಹಿನ್ನಲೆಯಲ್ಲಿ, 2 ತಿಂಗಳ ಬಾಕಿ ವೇತನವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.

ಸಾರಿಗೆ ಇಲಾಖೆಯ ನೌಕರರಿಗೆ ಕೊರೋನೋ ಸೋಂಕಿನ ಸಂಕಷ್ಟದಿಂದಾಗಿ ವೇತನ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ನೌಕರರು ದೀಪಾವಳಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದರು. ಹೀಗಾಗಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ(DCM Laxman Savadi) ನೇತೃತ್ವದಲ್ಲಿ ನೌಕರರು ಭೇಟಿ ಮಾಡಿ, ಚರ್ಚೆ ನಡೆಸಿದರು.

ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆ ಗೆಲ್ಲಲು ಸಿಎಂ ಬಿಎಸ್ ವೈ ರಣತಂತ್ರ..!

ಈ ಕುರಿತು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಸಾರಿಗೆ ಇಲಾಖೆಗೆ ಮುಖ್ಯಮಂತ್ರಿಗಳು ಬಾಕಿ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಾರಿಗೆ ಇಲಾಖೆಗೆ 634 ಕೋಟಿ ರಿಲೀಸ್ ಮಾಡಲಾಗಿದೆ. ಇದರಿಂದ ನೌಕರರ 2 ತಿಂಗಳ ಬಾಕಿ ವೇತನ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದರು.

ಮಹಿಳೆಯರಿಗೆ 'ಗುಡ್ ನ್ಯೂಸ್': ₹ 3 ಲಕ್ಷ ಸಾಲ ಸೌಲಭ್ಯ- ಇಂದೇ ಅರ್ಜಿ ಹಾಕಿ

ಈ ಕುರಿತು ಈ ಹಿಂದೆ ಇದೆ  ಡಿಸಿಎಂ ಲಕ್ಷ್ಮಣ್ ಸವದಿ ಸಾರಿಗೆ ನೌಕರರಿಗೆ ವೇತನ ಕೊಡಲು ಸರ್ಕಾರದಲ್ಲಿ ಹಣವಿಲ್ಲಾ ಎಂದು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದರು.

ಸಚಿವ ಸ್ಥಾನನಕ್ಕಾಗಿ ಪಟ್ಟು- ರೆಬಲ್ ಆದ ಜಾರಕಿಹೊಳಿ ಅಂಡ್ ಟೀಮ್!

 

Trending News