ಬೆಂಗಳೂರು : ನಗರ ಘಟಕದ ಎನ್ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 52 ಕೋಟಿ ಮೌಲ್ಯದ ಅಂದರೆ, 34.89 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಜಿಂಬಾಬ್ವೆಯಿಂದ ಬೆಂಗಳೂರಿಗೆ ಬಂದ ನೈಜೀರಿಯಾ ಮೂಲದ ಮಹಿಳೆಯೊಬ್ಬಳು ಸೂಟ್ ಕೇಸ್ ತಳಭಾಗದಲ್ಲಿ 7ಕೆಜಿ ಹೆರಾಯಿನ್ ಸಾಗಾಟ ಮಾಡುತ್ತಿದ್ದಳು. ನಗರದ ಕೆಐಎಎಲ್ ಏರ್ಪೋರ್ಟ್ ನಲ್ಲಿ ಮಹಿಳೆಯನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಹಿಳಾ ಡ್ರಗ್ ಪೆಡ್ಲರ್ ಮಾಹಿತಿ ಆಧರಿಸಿ ಮತ್ತಿಬ್ಬರು ಪೆಡ್ಲರ್ ಗಳನ್ನ ಬಂಧಿಸಿದ್ದಾರೆ.
ಇದನ್ನೂ ಓದಿ : ಸ್ಕೂಟರ್ ನಲ್ಲಿ ಡ್ರಗ್ಸ್ ತರಿಸಿಕೊಂಡಿದ್ದ ಆರೋಪ: ಉದ್ಯಮಿ ಪುತ್ರ ಶ್ರೀನಿವಾಸ್ ಗೆ ನ್ಯಾಯಾಂಗ ಬಂಧನ
ಸಧ್ಯ ಎನ್ಸಿಬಿ ಅಧಿಕಾರಿಗಳನ್ನು ಈ ಇಬ್ಬರು ಮಹಿಳಾ ಪೆಡ್ಲರ್ ಗಳನ್ನ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಇಬ್ಬರು ಮಹಿಳೆಯರು ಮತ್ತಷ್ಟು ಮಾಹಿತಿ ಹೊರ ಹಾಕಿದ್ದಾರೆ.
ಎನ್ಸಿಬಿ ಅಧಿಕಾರಿಗಳು ಮಹಿಳೆಯರು ತಂಗಿದ್ದ ಲಾಡ್ಜ್ ನಲ್ಲಿ ಪರಿಶೀಲನೆ ನಡೆಸಿ, ಅದೇ ಮಾದರಿಯ ಬ್ಯಾಗ್ ನಲ್ಲಿ 6.890 ಕೆಜಿ ಹೆರಾಯಿನ್ ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳು ತಾಂತ್ರಿಕ ತನಿಖೆ ನಡೆಸಿದರು. ಈ ವೇಳೆ ಇನ್ನೂ ಮೂವರ ಬಗ್ಗೆ ಮಾಹಿತಿ ಪತ್ತೆಯಾಗಿದೆ. ಇವರು ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಂದ ದೆಹಲಿಗೆ ತರಳಿರೊ ಮಾಹಿತಿ ಪಡೆದು, ಕೂಡಲೇ ಇಂದೋರ್ ಎನ್ಸಿಬಿ ಟೀಂಗೆ ಮಾಹಿತಿ ರವಾನೆ ಮಾಡಿದರು.
ಇಟಾರ್ಸಿಯ ಲಾಡ್ಜ್ ನಲ್ಲಿ 21 ಕೆಜಿ ಹೆರಾಯಿನ್ ವಶ ಪಡೆಸಿಕೊಂಡು, ಮೂವರು ಮಹಿಳೆಯರನ್ನ ಬಂಧಿಸಿದ್ದಾರೆ. ಮಹಿಳೆಯರನ್ನ ವಿಚಾರಣೆ ನಡೆಸಿದಾಗ ನೈಜೀರಿಯಾದ ಕಿಂಗ್ ಪಿನ್ ಮತ್ತು ದೆಹಲಿಯ ಆತನ ಜಾಲದ ಬಗ್ಗೆ ಮಾಹಿತಿ ಸಿಕ್ಕಿದೆ. ಈಗ ಎನ್ಸಿಬಿ ಅಧಿಕಾರಿಗಳು ನೈಜೀರಿಯಾ ಮೂಲದ ಮಹಿಳೆ ಸೇರಿ ಒಂಭತ್ತು ಜನರನ್ನ ಬಂಧಿಸಿದ್ದಾರೆ.
ಇದನ್ನೂ ಓದಿ : 'ನೆಹರೂ ಅವರ ಸೌಹಾರ್ದತೆಯ ಆಲೋಚನೆಯ ಮೂಲಕ ಈ ದೇಶದ ಬಹುತ್ವವನ್ನು ಉಳಿಸಬೇಕಿದೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.