ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ಪೊಲೀಸರ ಸುಪರ್ದಿಯಲ್ಲಿ, ಯಾರ ಹೆಸರಲ್ಲಿದೆ ಕಾರು?

Renukaswamy Murder Case : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಜನರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. 

Written by - Zee Kannada News Desk | Last Updated : Jun 12, 2024, 04:41 PM IST
  • ನಟ ದರ್ಶನ್ ಸೇರದಂತೆ ಒಟ್ಟು 13 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
  • ವಶಪಡಿಸಿಕೊಂಡ ಕಾರುಗಳಿಂದ ಪೊಲೀಸರು ಮಧ್ಯದ ಬಾಟಲಿ, ವ್ಯಾನಿಟಿ ಬ್ಯಾಗ್ ದೊರೆತಿದೆ
  • ಇದೇ ಕಾರಿನಲ್ಲಿ ರಾಜರಾಜೇಶ್ವರಿ ನಗರದ ಶೆಡ್ ಗೆ ಇದೇ ಕಾರಿನಲ್ಲಿ ಆಗಮಿಸಿದ್ದರು
ರೇಣುಕಾಸ್ವಾಮಿ  ಶವ ಸಾಗಿಸಿದ್ದ ಕಾರು ಪೊಲೀಸರ ಸುಪರ್ದಿಯಲ್ಲಿ, ಯಾರ ಹೆಸರಲ್ಲಿದೆ ಕಾರು?  title=

Renukaswamy Murder Case : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಜನರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. 

ಪವಿತ್ರಾ ಗೌಡಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ನ್ಯಾಯಾಲಯ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರದಂತೆ ಒಟ್ಟು 13 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್​ ಮತ್ತು ಉಳಿದ ಎಲ್ಲಾ ಆರೋಪಿಗಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ

ಇದನ್ನು ಓದಿ : CM Oath Ceremony : ಆಂಧ್ರಪ್ರದೇಶದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರು, ಸಂಪೂರ್ಣ ಪಟ್ಟಿ ಇಲ್ಲಿದೆ

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆಗೆ ಸಂಬಂಧಿಸಿದಂತೆ ಒಂದೊಂದಾಗಿ ಕೆಲವೊಂದು ಅಂಶಗಳು ಹೊರಬೀಳುತ್ತಿವೆ. ನಟ ದರ್ಶನ್ ಸೇರಿದಂತೆ 13 ಜನರನ್ನ ಅರೆಸ್ಟ್ ಮಾಡಿದ ಬೆನ್ನಲ್ಲೇ, ಹಲವಾರು ವಿಷಯಗಳು ಒಂದೊಂದಾಗಿ ಹೊರ ಬರುತ್ತಲೇ ಇದೆ. 

ಪವಿತ್ರ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಹಿನ್ನೆಲೆ ದರ್ಶನ್ ರೇಣುಕಾ ಸ್ವಾಮಿಯವರನ್ನು ಆರ್ ಆರ್ ನಗರದ ಶರ್ಟ್ ಗೆ ಕರೆದುಕೊಂಡು ಬಂದು ತೀವ್ರ ಹಿಂಸೆಯನ್ನು ನೀಡಿ ಅವರನ್ನು ಕೊಲೆ ಮಾಡಿದ್ದಾರೆ ಮತ್ತು ಕೊಲೆ ಮಾಡಿದ ನಂತರ ಶವವನ್ನು ಗಾಡಿಯಲ್ಲಿ ಸಾಗಿಸಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ

ಸದ್ಯದ ಮಾಹಿತಿ ಪ್ರಕಾರ ರೇಣುಕಾ ಸ್ವಾಮಿಯ ಶವ ಸಾಗಿಸಲು ಬಳಸಿದ ಕಾರು ಮತ್ತು ದರ್ಶನ್ ಬಳಸುತ್ತಿದ್ದ ಜೀಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಅದರಲ್ಲಿನ ಕೆಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ರಾಜರಾಜೇಶ್ವರಿ ನಗರದ ಶೆಡ್ ಗೆ ಕಾರು ಹೋಗುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಈಗಾಗಲೇ ಬಹಿರಂಗವಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಎರಡು ಕಾರುಗಳನ್ನ ವಶಕ್ಕೆ ಪಡೆದಿದ್ದಾರೆ ಮತ್ತು ಕಾರಿನಲ್ಲಿನ ಕೆಲವು ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. 

ಇದನ್ನು ಓದಿ : ತುಂಡು ಬಟ್ಟೆ ಬಿಟ್ಟು ಸೀರೆಯಲ್ಲಿ ಮಿಂಚಿದ ದೀಪಿಕಾ! ಆಹಾ.. ಕನ್ನಡತಿ ಎಂದ ಫ್ಯಾನ್ಸ್

ವಶಪಡಿಸಿಕೊಂಡ ಕಾರುಗಳಿಂದ ಪೊಲೀಸರು ಮಧ್ಯದ ಬಾಟಲಿ, ವ್ಯಾನಿಟಿ ಬ್ಯಾಗ್ ದೊರೆತಿದೆ. ಮತ್ತು ವ್ಯಾನಿಟಿ ಬ್ಯಾಗ್ ಪವಿತ್ರ ಗೌಡ ಅವರಿಗೆ ಸಂಬಂಧಪಟ್ಟದ್ದು ಎಂದು ಕೇಳಿಬರುತ್ತಿದೆ ಅಲ್ಲದೆ ಜೀಪ್ ಕಾರು ದರ್ಶನ್ ಅವರ ಆಪ್ತ ವಿನಯ್ ಅವರ ಹೆಸರಿನಲ್ಲಿ ನೋಂದಾವಣಿಯಾಗಿದೆ. ಮತ್ತು ಕೊಲೆಯಾದ ರಾತ್ರಿ ಇದೇ ಕಾರಿನಲ್ಲಿ ರಾಜರಾಜೇಶ್ವರಿ ನಗರದ ಶೆಡ್ ಗೆ ಇದೇ ಕಾರಿನಲ್ಲಿ ಆಗಮಿಸಿದ್ದರು ಮತ್ತು ದರ್ಶನ್ ಹೆಚ್ಚಾಗಿ ಈ ಕಾರನ್ನು ಓಡಾಡಲು ಬಳಸುತ್ತಿದ್ದರು ಎಂದು ತಿಳಿದುಬಂದಿದೆ. 

ಇನ್ನೊಂದು ಕಾರು ದರ್ಶನ್ ಅವರ ಮತ್ತೊಬ್ಬ ಆಪ್ತ ಪ್ರದೋಷ್ ಎಂಬುವವರ ಹೆಸರಲ್ಲಿ ನೋಂದಾವಣಿಯಾಗಿದೆ. ಮೂಲಗಳ ಪ್ರಕಾರ ರೇಣುಕಾ ಸ್ವಾಮಿಯ ಶವವನ್ನು ಇದೇ ಕಾರಿನಲ್ಲಿ ತೆಗೆದುಕೊಂಡು ಸುಮನಹಳ್ಳಿ ಮೋರಿಗೆ ಆರೋಪಿಗಳು ಎಸೆದಿದ್ದಾರೆ ಎನ್ನಲಾಗುತ್ತಿದೆ. ಎರಡು ಕಾರಿನ ಮಾಲೀಕರನ್ನು ಪೊಲೀಸರು ವರ್ಷಕ್ಕೆ ಪಡೆದುಕೊಂಡಿದ್ದು ಸತ್ಯಕ್ಕೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. 

ಸದ್ಯ ರೇಣುಕಾ ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು 17 ಮಂದಿಯನ್ನು ಬಂಧಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News