ಬೆಂಗಳೂರು: ಹಳದಿ, ಬಿಳಿ, ಕೆಂಪು ಬಣ್ಣದ ಧ್ವಜದ ಮಧ್ಯೆ ರಾಜ್ಯ ಸರ್ಕಾರದ ಲಾಂಛನವಿರುವ ಧ್ವಜವನ್ನು ನಾಡಧ್ವಜ ಸಮಿತಿ ಅಂತಿಮಗೊಳಿಸಿದ್ದು, ನಾಡಧ್ವಜ ಬಗೆಗಿನ ವಿವಾದ ಬಗೆಹರಿದಂತಾಗಿದೆ.
ರಾಜ್ಯಕ್ಕೆ ಅಧಿಕೃತ ನಾಡಧ್ವಜ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಪಾಟೀಲ್ ಪುಟ್ಟಪ್ಪ ನೇತೃತ್ವದ ಸಮಿತಿಗೆ ಧ್ವಜದ ರೂಪುರೇಷೆ ಸಿದ್ದಪಡಿಸುವ ಜವಾಬ್ದಾರಿ ನೀಡಿತ್ತು. ಇದೀಗ ಹಳದಿ, ಬಿಳಿ, ಕೆಂಪು ಬಣ್ಣದ ಧ್ವಜದ ಮಧ್ಯೆ ರಾಜ್ಯ ಸರ್ಕಾರದ ಲಾಂಛನವಿರುವ ಧ್ವಜವನ್ನು ಅಂತಿಮಗೊಳಿಸಿರುವ ಸಮಿತಿ, ವಾರದೊಳಗೆ ಮತ್ತೊಮ್ಮೆ ಚರ್ಚೆ ನಡೆಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀಗೆ ವರದಿ ಸಲ್ಲಿಸಲಿದೆ.