ಕಾಂಗ್ರೆಸ್ ಸೇರ್ಪಡೆ ವದಂತಿಗೆ ಪುಷ್ಠಿ ಕೊಟ್ಟ ಜೆಡಿಎಸ್ ಶಾಸಕರ ಹೇಳಿಕೆ

ಕಾಂಗ್ರೆಸ್ ಪಕ್ಷದ ಸೇರ್ಪಡೆ ಕುರಿತಾಗಿ ಹರಡಿರುವ ವದಂತಿಗೆ ಈಗ ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರ ಹೇಳಿಕೆ ಈಗ ಪುಷ್ಟಿ ನೀಡಿದೆ. 

Written by - Manjunath N | Last Updated : Oct 14, 2023, 09:20 AM IST
  • ಕಾಡಂಚಿನ ಗ್ರಾಮಗಳಲ್ಲಿ ರಾತ್ರಿ ಹೊತ್ತು ಕರೆಂಟ್ ಇಲ್ಲದೆ ಜನರು ಪರದಾಡುತ್ತಿದ್ದಾರೆ.
  • ಪ್ರತಿ ಹಂತದಲ್ಲೂ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡ್ತಿದ್ದೇನೆ/ಕಾಡಂಚಿನ ರೈತರಿಗೆ ವಿದ್ಯುತ್ ಸಮಸ್ಯೆ ಆಗ್ತಿದೆ.
  • ಸೋಲಾರ್ ಪ್ಲಾಂಟ್ ಅಳವಡಿಕೆಗೆ ಸಬ್ ಸ್ಟೇಷನ್ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಕಾಂಗ್ರೆಸ್ ಸೇರ್ಪಡೆ ವದಂತಿಗೆ ಪುಷ್ಠಿ ಕೊಟ್ಟ ಜೆಡಿಎಸ್ ಶಾಸಕರ ಹೇಳಿಕೆ title=

 ಚಾಮರಾಜನಗರ: ಕಾಂಗ್ರೆಸ್ ಪಕ್ಷದ ಸೇರ್ಪಡೆ ಕುರಿತಾಗಿ ಹರಡಿರುವ ವದಂತಿಗೆ ಈಗ ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರ ಹೇಳಿಕೆ ಈಗ ಪುಷ್ಟಿ ನೀಡಿದೆ. 

ಹೌದು ಈ ಕುರಿತಾಗಿ ಮಾತನಾಡಿರುವ ಅವರು "ನನ್ನ ಕ್ಷೇತ್ರದ ಕೆಲಸಗಳಿಗೆ ಮುಖ್ಯಮಂತ್ರಿ ಅವರನ್ನ ಭೇಟಿ ಮಾಡ್ಬೇಕು, ಮಾಡ್ತಿನಿ ಅದರಲ್ಲೇನು ತಪ್ಪು ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs PAK ಪಂದ್ಯಕ್ಕೆ ಶುಭ್ಮನ್ ಗಿಲ್ 99% ಫಿಟ್! ರೋಹಿತ್ ಶರ್ಮಾ ಕೊಟ್ಟೇಬಿಟ್ರು ಗ್ರೀನ್ ಸಿಗ್ನಲ್

ನನ್ನ ಬಗ್ಗೆ ಏನೇನು ಬೇಕೋ ಅದನ್ನೆಲ್ಲ ಹಬ್ಬಿಸಿದ್ದಾರೆ, ಆದ್ರೆ ನನಗೆ ಕ್ಷೇತ್ರದ ಮತದಾರರು ಮುಖ್ಯ,ಹನೂರು ಕ್ಷೇತ್ರ ಭೌಗೋಳಿಕವಾಗಿ ದೊಡ್ಡದು, ಆದ್ರೆ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ.ವಿದ್ಯುತ್ ಗೆ ಸಂಬಂಧಿಸಿದ ವಿವಿಧ ಕಾಮಗಾರಿಗೆ ಸುಮಾರು 42 ಕೋಟಿ ರೂ. ವೆಚ್ಚದ ಕ್ರೀಯಾಯೋಜನೆ ಸಿದ್ಧವಾಗಿದೆ.ಅನುದಾನ ನೀಡಲು ಸಿಎಂ ಒಪ್ಪಿದ್ದಾರೆ.ಇಂತಹ ಕೆಲಸ ಮಾಡ್ಬೇಕಾ-ಬಿಡ್ಬೇಕಾ ನೀವೆ ಹೇಳಿ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: IND vs PAK, ICC Cricket World Cup 2023: ಇಂದು-ಭಾರತ-ಪಾಕ್ ಕದನ: ವಿಜಯ ಮಾಲೆ ಯಾರ ಕೊರಳಿಗೆ? ಇತಿಹಾಸ ಹೇಳುವುದೇನು? 

ಸಿಎಂ ಸಿದ್ದರಾಮಯ್ಯ ಮಲೆಮಾದಪ್ಪನ ಅನುಯಾಯಿ,75 ವರ್ಷದಲ್ಲಿ ಆಗದ ಕೆಲಸಗಳನ್ನು ನಾನು ಮಾಡಬೇಕು ಅಂತ ಕನಸು ಕಂಡಿದ್ದೇನೆ.ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿಗಾಗಿ ಪಣ ತೊಟ್ಟಿದ್ದೇನೆ ಸದ್ಯ ಅನುದಾನ ನೀಡೋದಾಗಿ ಸಿಎಂ ಹೇಳಿದ್ದಾರೆ, ಅದು ಆಗದಿದ್ದರೆ ವೈಯಕ್ತಿಕವಾಗಿ ಹೋರಾಡೋದು ಗೊತ್ತು ಹೋರಾಡ್ತಿನಿ ಎಂದು ಅವರು ಹೇಳಿದ್ದಾರೆ.ಜೆಡಿಎಸ್ ಬೀಡ್ತಿರಾ ಎನ್ನುವ ಪ್ರಶ್ನೆಗೆ ಉತ್ತರಿಸಲು ಹನೂರು ಶಾಸಕ ಎಂ.ಆರ್.ಮಂಜುನಾಥ್  ಹಿಂದೇಟು ಹಾಕಿದ್ದಾರೆ. 

ಹನೂರು ತಾಲ್ಲೂಕಿನ ಜನರ ನಿದ್ದೆಗೆಡಿಸಿರುವ ಲೋಡ್ ಶೆಡ್ಡಿಂಗ್ ವಿಚಾರವಾಗಿ ಮಾತನಾಡಿದ ಅವರು ಕಾಡಂಚಿನ ಗ್ರಾಮಗಳಲ್ಲಿ ರಾತ್ರಿ ಹೊತ್ತು ಕರೆಂಟ್ ಇಲ್ಲದೆ ಜನರು ಪರದಾಡುತ್ತಿದ್ದಾರೆ.ಪ್ರತಿ ಹಂತದಲ್ಲೂ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡ್ತಿದ್ದೇನೆ/ಕಾಡಂಚಿನ ರೈತರಿಗೆ ವಿದ್ಯುತ್ ಸಮಸ್ಯೆ ಆಗ್ತಿದೆ.ಸೋಲಾರ್ ಪ್ಲಾಂಟ್ ಅಳವಡಿಕೆಗೆ ಸಬ್ ಸ್ಟೇಷನ್ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.ಸರ್ಕಾರಿ ಹಾಗು ಖಾಸಗಿ ಜಾಗ ಗುರುತಿಸಿ ಸಬ್ ಸ್ಟೇಷನ್ ಮಾಡಲಾಗುವುದು.ಈ ಕೆಲಸ ಹನೂರಿನಲ್ಲೇ ಮೊದಲು ಆಗ್ಬೇಕು ಅಂತ ಪಣ ತೊಟ್ಟಿದ್ದೇನೆಇನ್ನೊಂದು ವರ್ಷದಲ್ಲಿ ಹನೂರು ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಇಲ್ಲದಂತೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News