Karnataka Budget 2021: ಬಜೆಟ್ ನಲ್ಲಿ ಪೆಟ್ರೋಲ್-ಡಿಸೇಲೆ ಬೆಲೆ ಇಳಿಕೆಯ ಬಗ್ಗೆ 'ಬಿಗ್ ಶಾಕ್'..!

2021-22ನೇ ಸಾಲಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರಗಳ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಹೆಚ್ಚಿಸದೇ

Last Updated : Mar 8, 2021, 01:23 PM IST
  • ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ರಾಜ್ಯ ಸರ್ಕಾರವು ಕರ್ನಾಟಕ ಮಾರಾಟ ತೆರಿಗೆ (ಕೆಎಸ್​ಟಿ)ಯನ್ನು ವಿಧಿಸುತ್ತದೆ.
  • 2021-22ನೇ ಸಾಲಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರಗಳ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಹೆಚ್ಚಿಸದೇ
  • ತೆರಿಗೆ ಇಳಿಕೆಯ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಶಾಕ್​ ಆಗಿದೆ.
Karnataka Budget 2021: ಬಜೆಟ್ ನಲ್ಲಿ ಪೆಟ್ರೋಲ್-ಡಿಸೇಲೆ ಬೆಲೆ ಇಳಿಕೆಯ ಬಗ್ಗೆ 'ಬಿಗ್ ಶಾಕ್'..! title=

ಬೆಂಗಳೂರು: ಏರಿಕೆಯಾಗಿರುವ ಇಂಧನ ದರದ ಮೇಲಿನ ರಾಜ್ಯ ಸರ್ಕಾರದ ತೆರಿಗೆ ಇಳಿಸಿ ಕೊಂಚ ರಿಲೀಫ್​ ನೀಡಲಿದ್ದಾರೆಂಬ ಜನರ ನಿರೀಕ್ಷೆ ಈ ಬಾರಿಯ ಬಜೆಟ್​ನಲ್ಲಿ ಹುಸಿಯಾಗಿದೆ.

ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ರಾಜ್ಯ ಸರ್ಕಾರವು ಕರ್ನಾಟಕ ಮಾರಾಟ ತೆರಿಗೆ (KST)ಯನ್ನು ವಿಧಿಸುತ್ತದೆ. ಈ ದರವು ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಾಗಲೇ ಕಡಿಮೆ ಇದೆ. ಆದರೂ ಸಹ 2021-22ನೇ ಸಾಲಿನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರಗಳ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಹೆಚ್ಚಿಸದೇ ಸಾಮಾನ್ಯ ಜನರಿಗೆ ಆರ್ಥಿಕ ಹೊರೆಯಾಗದಂತೆ ಬಜೆಟ್​ನಲ್ಲಿ ಸೂತ್ರೀಕರಿಸಲಾಗಿದೆ ಎಂದು ಸಿಎಂ ಬಿಎಸ್​ವೈ ಬಜೆಟ್​ ಮಂಡನೆ ವೇಳೆ ತಿಳಿಸಿದರು.

Karnataka Budget 2021: ಬಜೆಟ್ ನಿಂದ ನಿವೇಶನ ಜಾಗ ಖರೀದಿದಾರರಿಗೆ ಭರ್ಜರಿ ಸಿಹಿ ಸುದ್ದಿ..!

ಇಂಧನ ದರದ ಮೇಲೆ ಯಾವುದೇ ತೆರಿಗೆ ಬದಲಾವಣೆ ಮಾಡದೇ ಇರುವುದರಿಂದ ರಾಜ್ಯದಲ್ಲಿ ಇಂಧನ ಬೆಲೆ(Petrol-Diese Price) ಯಥಾಸ್ಥಿತಿ ಮುಂದುವರಿಯಲಿದ್ದು, ತೆರಿಗೆ ಇಳಿಕೆಯ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಶಾಕ್​ ಆಗಿದೆ. ಈಗಾಗಲೇ ಇಂಧನ ದರ ನೂರರ ಗಡಿಯತ್ತ ಬಂದಿದೆ. ಇದರಿಂದ ಅಗತ್ಯವಸ್ತುಗಳ ಬೆಲೆಯು ಏರಿಕೆಯಾಗಿದ್ದು, ಈ ಆರ್ಥಿಕ ಹೊರೆ ಇನ್ನೆಷ್ಟು ದಿನ ಹೀಗೆ ಇರುತ್ತದೆ ಎಂಬುದೇ ಜನರ ಚಿಂತೆಯಾಗಿದೆ.

Karnataka Budget 2021: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ 'ಭರ್ಜರಿ ಗುಡ್ ನ್ಯೂಸ್'..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News