ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಇದು ಬಿ.ಎಸ್ ಯಡಿಯೂರಪ್ಪ ಅವರ ಅಥವಾ ಬಸವರಾಜ ಬೊಮ್ಮಾಯಿಯವರ ಸರ್ಕಾರ ಅಲ್ಲ. ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ನಾನು ಶೂನ್ಯ ಸಹಿಷ್ಣುತೆ ಹೊಂದಿದ್ದೇನೆ. ಇಲ್ಲಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ- ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಗೆ ಬಿಲ್, ಸದ್ಯಕ್ಕೆ ಬೇಡ : ಸಿಎಂ ಸಿದ್ದರಾಮಯ್ಯ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮವೆಸಗಿ ಬಂಧನಕ್ಕೊಳಗಾಗಿರುವ ಜೆ ಜಿ ಪದ್ಮನಾಭ ಅವರು ಈ ಹಿಂದೆ 2017-18ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಇದೇ ಮಾದರಿಯಲ್ಲಿ ಸುಮಾರು ರೂ.5 ಕೋಟಿ ಅಕ್ರಮ ಎಸಗಿ ಅಮಾನತ್ತುಗೊಂಡು, ಇಲಾಖಾ ವಿಚಾರಣೆ ಎದುರಿಸುತ್ತಿದ್ದರು.ಇಂದು ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಿರುವ ಇದೇ ಬಿಜೆಪಿ ನಾಯಕರು ತಮ್ಮ ಸರ್ಕಾರದ ಅವಧಿಯಲ್ಲಿ ಪದ್ಮನಾಭ ಅವರನ್ನು ಆರೋಪಮುಕ್ತಗೊಳಿಸಿ, ಅವರ ಭ್ರಷ್ಟಾಚಾರದ ಪ್ರಯತ್ನಗಳಿಗೆ ಅಧಿಕೃತ ಬೆಂಬಲದ ಮುದ್ರೆ ಒತ್ತಿದ್ದರು.
ಇದನ್ನೂ ಓದಿ- ಕಾಂಗ್ರೆಸ್ ಚುನಾವಣೆ ವೇಳೆ ಮಾತ್ರ ಬಣ್ಣ ಬಣ್ಣದ ಕಥೆ ಕಟ್ಟುತ್ತದೆ - ಪ್ರಲ್ಹಾದ ಜೋಶಿ
ಆತ ಮಾಡಿದ ತಪ್ಪಿಗೆ ಹಿಂದಿನ ಬಿಜೆಪಿ ಸರ್ಕಾರ ಕ್ಲೀನ್ ಚಿಟ್ ಕೊಡುವ ಬದಲು ಶಿಕ್ಷೆ ಕೊಟ್ಟಿದ್ದರೆ ಇಂದು ಆತ ನೂರಾರು ಕೋಟಿ ಅವ್ಯವಹಾರ ಮಾಡುವಷ್ಟು ಬಲಿತುಕೊಳ್ಳುತ್ತಿರಲಿಲ್ಲ. ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರು ಎನ್ನುವುದಕ್ಕೆ ಇನ್ನೂ ಪುರಾವೆ ಬೇಕಾ? ಎಂದು ಪ್ರಶ್ನಿಸಿದ್ದಾರೆ.ರಾಷ್ಟ್ರೀಕೃತ ಬ್ಯಾಂಕಿನವರು ಕೂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ಜೊತೆ ಶಾಮೀಲಾಗಿ ಅವ್ಯವಹಾರ ನಡೆಸಿದ್ದಾರೆ. ಇದಕ್ಕೆ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಹೊಣೆ ಮಾಡಬೇಕೋ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಣೆ ಮಾಡಬೇಕೋ? ಇದಕ್ಕೆ ಬಿಜೆಪಿ ನಾಯಕರು ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ಆಗಿರುವುದು ಕಂಡುಬಂದ ಕೂಡಲೇ ಎಸ್.ಐ.ಟಿ ತನಿಖೆಗೆ ವಹಿಸಲಾಗಿದೆ. ಇದರ ಮಧ್ಯ ಸಿ.ಬಿ.ಐ ತನಿಖೆ ನಡೆಸುತ್ತಿದೆ, ಇ.ಡಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.ಹೀಗಿದ್ದರೂ ಸದನದಲ್ಲಿ ಬಿಜೆಪಿ ನಾಯಕರ ವರ್ತನೆ ನೋಡಿದರೆ ಇವರಿಗೆ ಅಕ್ರಮ ಮಾಡಿದವರಿಗೆ ಶಿಕ್ಷೆ ಮತ್ತು ಪರಿಶಿಷ್ಟ ಪಂಗಡಗಳಿಗೆ ನ್ಯಾಯ ಕೊಡಿಸುವುದಕ್ಕಿಂತ ಸರ್ಕಾರದ ವಿರುದ್ಧ ರಾಜಕೀಯ ಆರೋಪ ಮಾಡಿಕೊಂಡು ಸದನ ನಡೆಯಲು ಅವಕಾಶ ಮಾಡಿಕೊಡಬಾರದು ಎಂಬ ಉದ್ದೇಶವಿದ್ದಂತಿದೆ ಎಂದು ಅವರು ಟೀಕಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.