ಬೆಂಗಳೂರು: ಕೆಆರ್ಎಸ್ ಗೆ ಬಾಗೀನ ಅರ್ಪಿಸಿದಾಗ ಡಿಸಿಎಂ ಕಾವೇರಿ ಆರತಿ ಸಲ್ಲಿಸಬೇಕು. ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿಗೆ ಆಲೋಚನೆ ಮಾಡಲಾಗಿದೆ. ಎಷ್ಟೇ ನದಿಯಿದ್ರು ಕಾವೇರಿ ನಮಗೆ ಪ್ರಸಿದ್ದವಾದುದು. ಕಾವೇರಿ ಆರತಿ ಅಧ್ಯಯನ ಸಮಿತಿ ರಚನೆ ಮಾಡಿದ್ದಾರೆ ಎಂದು ಹರಿದ್ವಾರದಲ್ಲಿ ಕಾವೇರಿ ಆರತಿ ಅಧ್ಯಯನ ಸಮತಿ ಅಧ್ಯಕ್ಷ ಚಲುವರಾಯಸ್ವಾಮಿ ಹೇಳಿದ್ದಾರೆ.
ಹಳೆ ಮೈಸೂರು ಭಾಗದ ಎಲ್ಲ ಶಾಸಕರು ಬಂದಿದ್ದೇವೆ. ದಸರಾ ಆರಂಭಕ್ಕೂ ಮುನ್ನವೇ ಕಾವೇರಿ ಆರತಿಗೆ ಚಿಂತನೆ ನಡೆದಿದೆ. ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ತಮಿಳುನಾಡಿನಲ್ಲಿಯೂ ಹರಿಯುತ್ತೆ. ಕಾವೇರಿ ನಮ್ಮ ಜೀವನದಿಯಾಗಿದೆ. ಎಂಟು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಡಿಸಿ ಡಾ.ಕುಮಾರ್ ಸೇರಿದಂತೆ ನಮ್ಮ ನಿಯೋಗ ಇಂದು ಹರಿದ್ವಾರಕ್ಕೆ ಬಂದಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ 2022 -23 ನೇ ವರ್ಷದ ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಹರಿದ್ವಾರದ ಗಂಗಾರತಿ ಪುರಾತನವಾದುದು. ನಾಳೆ ವಾರಣಾಸಿಯಲ್ಲಿ ಗಂಗಾರತಿ ನೋಡಲಿದ್ದೇವೆ. ಎಲ್ಲರೂ ಸೇರಿ ಚರ್ಚೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ.
ಆದಷ್ಟು ಬೇಗ ಕಾವೇರಿ ಆರತಿ ಮಾಡುವ ಸ್ಥಳ ಗುರುತು ಮಾಡುತ್ತೇವೆ ಎಂದಿದ್ದಾರೆ.
ಪ್ರಾರಂಭವಾಗುವುದು 4 ದಿನ ತಡವಾಗಬಹುದು. ಆದ್ರೆ ಕಾವೇರಿ ಆರತಿಯನ್ನ ನಿಲ್ಲಿಸಲ್ಲ. ದಸರಾ ವೇಳೆಗೆ ಕಾವೇರಿ ಆರತಿ ಪ್ರಾರಂಭ ಮಾಡಲು ಚಿಂತಿಸಿದ್ದೇವೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ - ಖಾತಾ ನೀಡಲು ಫೇಸ್ಲೆಸ್, ಸಂಪರ್ಕ ರಹಿತ ಆನ್ಲೈನ್ ಡಿಜಿಟಲ್ ವ್ಯವಸ್ಥೆ ಜಾರಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.